ಗೋವಾ ಕಾಂಗ್ರೆಸ್ನಿಂದ ಮತ್ತೊಬ್ಬ ಶಾಸಕ ಪಕ್ಷಾಂತರ ಸಾಧ್ಯತೆ?
Goa Congress: ಲಾರೆಂಕೊ ಎಎಪಿಗೆ ಹೋಗುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಎಐಸಿಸಿ ಗೋವಾದ ಉಸ್ತುವಾರಿ ವಹಿಸಿರುವ ದಿನೇಶ್ ಗುಂಡು ರಾವ್ ಅವರು "ಹೆಚ್ಚಿನ ಗೊಂದಲವನ್ನು ಸೃಷ್ಟಿಸಲು ಬಯಸುವ ಜನರಿಂದ ಎಲ್ಲಾ ರೀತಿಯ ವದಂತಿಗಳು ಹರಡುತ್ತಿವೆ. ಇಂಥಾ ವದಂತಿಗಳಿಗೆ ಪ್ರತಿಕ್ರಿಯಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಪಣಜಿ: ಹಿರಿಯ ನಾಯಕ ಲುಯಿಝಿನೊ ಫಲೆರೊ (Luizinho Faleiro) ತೃಣಮೂಲ ಕಾಂಗ್ರೆಸ್ (TMC) ಗೆ ಸೇರಿದ ನಂತರ 40 ಸದಸ್ಯರ ವಿಧಾನಸಭೆಯಲ್ಲಿ ಕೇವಲ ನಾಲ್ಕು ಶಾಸಕರು ಉಳಿದಿದ್ದಾರೆ. ಅದೇ ವೇಳೆ ಗೋವಾದಲ್ಲಿ ಕಾಂಗ್ರೆಸ್ನ ಇನ್ನೊಬ್ಬ ಶಾಸಕರು ಪಕ್ಷಾಂತರಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಕರ್ಟೋರಿಮ್‌ನ ಕಾಂಗ್ರೆಸ್ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲಾರೆಂಕೊ ( Aleixo Reginaldo Lourenco) ಅವರು ಆಮ್ ಆದ್ಮಿ ಪಕ್ಷ (AAP) ಸೇರುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಎಪಿ ರಾಜ್ಯದಲ್ಲಿ ಒಂದು ವರ್ಷದಿಂದ ಬಿರುಸಿನ ಪ್ರಚಾರ ನಡೆಸುತ್ತಿದೆ. ಪಶ್ಚಿಮ ಬಂಗಾಳವನ್ನು ಮೀರಿ ಪಕ್ಷವು ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವುದರಿಂದ ಟಿಎಂಸಿ ಗೋವಾದ ಚುನಾವಣಾ ರಾಜಕೀಯದಲ್ಲಿ ಪ್ರವೇಶಿಸಿದೆ.
ಲಾರೆಂಕೊ ಎಎಪಿಗೆ ಹೋಗುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಎಐಸಿಸಿ ಗೋವಾದ ಉಸ್ತುವಾರಿ ವಹಿಸಿರುವ ದಿನೇಶ್ ಗುಂಡು ರಾವ್ ಅವರು “ಹೆಚ್ಚಿನ ಗೊಂದಲವನ್ನು ಸೃಷ್ಟಿಸಲು ಬಯಸುವ ಜನರಿಂದ ಎಲ್ಲಾ ರೀತಿಯ ವದಂತಿಗಳು ಹರಡುತ್ತಿವೆ. ಇಂಥಾ ವದಂತಿಗಳಿಗೆ ಪ್ರತಿಕ್ರಿಯಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಫಲೆರೊ ನಿರ್ಗಮನದ ಕೆಲವು ದಿನಗಳ ಮುಂಚೆ, ಕಾಂಗ್ರೆಸ್ ಅವರ ನಿರ್ಗಮನದ ಮಾತನ್ನು ನಿರಾಕರಿಸಿದ್ದು ಅದನ್ನು “ವದಂತಿಗಳು” ಎಂದೇ ಹೇಳಿತ್ತು.
ತನ್ನ ಕ್ಷೇತ್ರದಲ್ಲಿ ನಡೆದ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸೆಪ್ಟೆಂಬರ್ 30 ರಂದು ಪೋಸ್ಟ್ ಮಾಡಿದ್ದ ಲಾರೆಂಕೊ “ನಮ್ಮ ಕೆಲಸ ಮುಂದುವರಿಯುತ್ತದೆ, ಯಾವುದೇ ರಾಜಕೀಯ ವಿಷಯವಲ್ಲ, ಅಥವಾ ನನ್ನ ಪಕ್ಷದ ವಿಷಯಗಳಿಂದ ದೂರವಿಡಲಾಗಿದೆ. ಮೊದಲು ನಮ್ಮ ಜನರು ಮತ್ತು ನಮ್ಮ ಕರ್ತವ್ಯ. ದೇವರ ಆಶೀರ್ವಾದ ನಮ್ಮೊಂದಿಗೆ ಇದೆ ಮತ್ತು ಸರಿಯಾದ ಸಮಯದಲ್ಲಿ ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಏಕೆಂದರೆ ಕೆಲವು ಕೊಳಕು ನಾಯಕರು ನಮ್ಮ ಪ್ರಗತಿಯನ್ನು ನಾಶಪಡಿಸಿದರು.ಈಗ ಒಳ್ಳೆಯ ನಿರ್ಧಾರಗಳಿಗೆ ಸಮಯ ಇಲ್ಲ ವೈಯಕ್ತಿಕ ಅಜೆಂಡಾ ಆದರೆ ನನ್ನ ಜನರಿಗೆ ಉತ್ತಮವಾದುದನ್ನುನೀಡುವುದು ನಮ್ಮ ಧ್ಯೇಯವಾಕ್ಯವಾಗಿದೆ ಎಂದಿದ್ದರು.
ಏತನ್ಮಧ್ಯೆ, ಭಾರತದ ಮಾಜಿ ಫುಟ್ಬಾಲ್ ಆಟಗಾರ ಡೆನ್ಜಿಲ್ ಫ್ರಾಂಕೊ ಮತ್ತು ಗೋವಾ ಬಾಕ್ಸಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಲೆನ್ನಿ ಡಿ’ಗಾಮ ಶನಿವಾರ ಟಿಎಂಸಿಗೆ ಸೇರಿದರು. ತೃಣಮೂಲ ಶಾಸಕ , , ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬಂಗಾಳ ಸಚಿವ ಮನೋಜ್ ತಿವಾರಿ ಹಾಗೂ ಭಾರತದ ಮಾಜಿ ಫುಟ್ಬಾಲ್ ಆಟಗಾರ, ಪಕ್ಷದ ಮಾಜಿ ಸಂಸದ ಪ್ರಸೂನ್ ಬ್ಯಾನರ್ಜಿ ಈ ಸಂದರ್ಭದಲ್ಲಿ ಹಾಜರಿದ್ದರು.
ಇತ್ತೀಚಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಡಿ’ಗಾಮ ಭಾರತದ ಏಕೈಕ ಬಾಕ್ಸಿಂಗ್ ಅಧಿಕಾರಿಯಾಗಿದ್ದರು.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಎನ್ಸಿಬಿ ಬಲೆಗೆ ಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಇದನ್ನೂ ಓದಿ: ರೇವ್ ಪಾರ್ಟಿ ಮೇಲೆ ದಾಳಿ: ಬಾಲಿವುಡ್ ಸೂಪರ್ ಸ್ಟಾರ್ ನಟನ ಪುತ್ರ ಎನ್ಸಿಬಿ ವಶಕ್ಕೆ