ವಿದೇಶದಲ್ಲಿ ಭಾರತವನ್ನು ಕಾಂಗ್ರೆಸ್ ಅವಮಾನಿಸಿದೆ; ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

|

Updated on: Sep 20, 2024 | 6:30 PM

ಕಾಂಗ್ರೆಸ್ ಅನ್ನು ಅತ್ಯಂತ "ಅಪ್ರಾಮಾಣಿಕ ಮತ್ತು ಭ್ರಷ್ಟ" ಪಕ್ಷ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ದೇಶವಿರೋಧಿ ಅಜೆಂಡಾವನ್ನು ಹೊಂದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ "ತುಕ್ಡೆ ತುಕ್ಡೆ ಗ್ಯಾಂಗ್" ಮತ್ತು "ನಗರ ನಕ್ಸಲರು" ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಪುನರುಚ್ಚರಿಸಿದ್ದಾರೆ.

ವಿದೇಶದಲ್ಲಿ ಭಾರತವನ್ನು ಕಾಂಗ್ರೆಸ್ ಅವಮಾನಿಸಿದೆ; ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ
Follow us on

ವಾರ್ಧಾ: ಅಮೆರಿಕದಲ್ಲಿ ಇತ್ತೀಚೆಗೆ ಮಾಡಿದ ಭಾಷಣದ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ತನ್ನ ವಿದೇಶಿ ಭೇಟಿಯ ಸಮಯದಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಇಂದಿನ ಕಾಂಗ್ರೆಸ್‌ನಲ್ಲಿ ದೇಶಪ್ರೇಮದ ಸ್ಪೂರ್ತಿ ಸತ್ತು ಹೋಗಿದೆ. ಇಂದಿನ ಕಾಂಗ್ರೆಸ್‌ನಲ್ಲಿ ದ್ವೇಷದ ದೆವ್ವ ಪ್ರವೇಶಿಸಿದೆ. ಕಾಂಗ್ರೆಸ್ ನವರ ಪರಭಾಷೆಯ ಭಾಷೆ ನೋಡಿ ಅವರ ದೇಶವಿರೋಧಿ ಅಜೆಂಡಾ, ಸಮಾಜ ಒಡೆಯುವ, ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವು ಗಣೇಶನನ್ನು ಪೋಲೀಸ್ ವ್ಯಾನ್‌ನಲ್ಲಿ ಕೂರಿಸುವ ಧೈರ್ಯವನ್ನು ಮಾಡಿದೆ. ಇದು ತುಷ್ಟೀಕರಣದ ರಾಜಕೀಯಕ್ಕೆ ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪೊಲೀಸ್ ವ್ಯಾನ್‌ನಲ್ಲಿ ಗಣೇಶ ಮೂರ್ತಿಯನ್ನು ತೋರಿಸುವ ವೈರಲ್ ಫೋಟೋಗೆ ಇದು ಸ್ಪಷ್ಟ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪ್ರಧಾನಿ ಮೋದಿ

ಪಿಎಂ ವಿಶ್ವಕರ್ಮ ಯೋಜನೆಯ ವರ್ಷದ ನೆನಪಿಗಾಗಿ ಮತ್ತು ಅಮರಾವತಿಯಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ಸ್ ಮತ್ತು ಅಪೆರೆಲ್ (ಪಿಎಂ ಮಿತ್ರ) ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಪೂರ್ವ ವಿದರ್ಭ ಪ್ರದೇಶದ ನಗರಕ್ಕೆ ಆಗಮಿಸಿದ್ದರು.


ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಗಣೇಶನ ಮೂರ್ತಿಯನ್ನು ಹೇಗೆ ಪೋಲೀಸ್ ವ್ಯಾನ್‌ನಲ್ಲಿ ಇರಿಸಿದೆ ಎಂಬುದನ್ನು ನಾವು ನೋಡಿದ್ದೇವೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮದಲ್ಲಿ ಮೋದಿ ಭಾಷಣ ಮಾಡಿದರು.

ಇದನ್ನೂ ಓದಿ: PM Surya Ghar Yojana: ಸೂರ್ಯ ಘರ್ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

“ಕಾಂಗ್ರೆಸ್ ಎಂದರೆ ಸುಳ್ಳು, ವಂಚನೆ ಮತ್ತು ಅಪ್ರಾಮಾಣಿಕತೆ. ತೆಲಂಗಾಣದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ರೈತರು ಸಾಲ ಮನ್ನಾ ಮಾಡಲು ಅಲೆದಾಡುತ್ತಿದ್ದಾರೆ. ಇಂದು ಅದೇ ಹಳೆಯ ಕಾಂಗ್ರೆಸ್ ಅಲ್ಲ. ದೇಶದಲ್ಲಿ ಯಾವುದೇ ಅತ್ಯಂತ ಭ್ರಷ್ಟ ಕುಟುಂಬವಿದ್ದರೆ ಅದು ಕಾಂಗ್ರೆಸ್‌ನ ರಾಜಮನೆತನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಉದ್ದೇಶಪೂರ್ವಕವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಜನರನ್ನು ಮುನ್ನಡೆಯಲು ಬಿಡಲಿಲ್ಲ. ನಾವು ಕಾಂಗ್ರೆಸ್‌ನ ಈ ದಲಿತ ವಿರೋಧಿ ಮತ್ತು ಹಿಂದುಳಿದ ವಿರೋಧಿ ಚಿಂತನೆಯನ್ನು ಸರ್ಕಾರಿ ವ್ಯವಸ್ಥೆಯಿಂದ ತೊಡೆದುಹಾಕಿದ್ದೇವೆ. ಕಳೆದ ವರ್ಷದ ಅಂಕಿಅಂಶಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದವರು ವಿಶ್ವಕರ್ಮ ಯೋಜನೆಯ ಲಾಭ ಪಡೆಯುತ್ತಿದ್ದಾರೆ’’ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ