ಕತ್ತೆಯನ್ನು ಕದ್ದ ಆರೋಪದಡಿ ಕಾಂಗ್ರೆಸ್​ ಮುಖಂಡನ ಬಂಧನ; ಇನ್ನೂ ಕೆಲವರಿಗಾಗಿ ಹುಡುಕುತ್ತಿರುವ ಪೊಲೀಸರು

ಫೆ.17ರಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು 68ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಂದು ಅವರ ಅಭಿಮಾನಿಗಳು ರಾಜ್ಯಾಧ್ಯಂತ ಹಣ್ಣವಿತರಣೆ, ರಕ್ತದಾನ ಶಿಬಿರದಂಥ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನ, ಪ್ರಾರ್ಥನೆ ಸಲ್ಲಿಸಿದವರೂ ಇದ್ದಾರೆ.

ಕತ್ತೆಯನ್ನು ಕದ್ದ ಆರೋಪದಡಿ ಕಾಂಗ್ರೆಸ್​ ಮುಖಂಡನ ಬಂಧನ; ಇನ್ನೂ ಕೆಲವರಿಗಾಗಿ ಹುಡುಕುತ್ತಿರುವ ಪೊಲೀಸರು
ಕತ್ತೆಗಳೊಂದಿಗೆ ಪ್ರತಿಭಟನೆ ನಡೆಸಿದ್ದವರು
Follow us
TV9 Web
| Updated By: Lakshmi Hegde

Updated on:Feb 19, 2022 | 8:10 AM

ಕತ್ತೆಗಳನ್ನು ಕದ್ದ ಆರೋಪದಡಿ ಕಾಂಗ್ರೆಸ್​ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಎನ್​ಎಸ್​ಯುಐ (ಕಾಂಗ್ರೆಸ್​​ನ ಸ್ಟುಡೆಂಟ್​ ಯೂನಿಯನ್​) ಅಧ್ಯಕ್ಷ ವೆಂಕಟ್​ ಬಲ್ಮೂರ್​ ಎಂಬುವರು ಬಂಧಿತರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್ (K. Chandrasekhar Rao) ​ಹುಟ್ಟುಹಬ್ಬದ ದಿನ ಇವರು ಕತ್ತೆಯೊಂದಿಗೆ ಕೆಸಿಆರ್​ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಇಂಥದ್ದೊಂದು ದೂರು ದಾಖಲಾಗಿದೆ.  ವೆಂಕಟ್​ ಬಲ್ಮೂರ್​ ಜತೆಗೆ ಇನ್ನಿತರ ಕೆಲವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅವರೆಲ್ಲರೂ ಪರಾರಿಯಾಗಿದ್ದಾರೆ.

ತೆಲಂಗಾಣ ಎನ್​ಎಸ್​ಯುಐ ವೆಂಕಟ್​ ಬಲ್ಮೂರ್ ವಿರುದ್ಧ ಜಮ್ಮಿಕುಂಟಾ ಅಧ್ಯಕ್ಷ ತಂಗುಟೋರಿ ರಾಜ್​​ಕುಮಾರ್ ಎಂಬುವರು ದೂರು ದಾಖಲಿಸಿದ್ದರು. ನನ್ನ ಕತ್ತೆಗಳನ್ನು ಕದ್ದಿದ್ದಾರೆ ಎಂದು ವೆಂಕಟ್​ ಬಲ್ಮೂರು ಸೇರಿ ಏಳು ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ  ಇವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

ಫೆ.17ರಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು 68ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಂದು ಅವರ ಅಭಿಮಾನಿಗಳು ರಾಜ್ಯಾಧ್ಯಂತ ಹಣ್ಣವಿತರಣೆ, ರಕ್ತದಾನ ಶಿಬಿರದಂಥ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನ, ಪ್ರಾರ್ಥನೆ ಸಲ್ಲಿಸಿದವರೂ ಇದ್ದಾರೆ. ಇನ್ನೊಂದೆಡೆ ಕರೀಂನಗರದಲ್ಲಿ ಮೇಯರ್​ ನೇತೃತ್ವದಲ್ಲಿ ಕೋಳಿಗಳನ್ನು ವಿತರಿಸಲಾಗಿತ್ತು. ಇದೇ ಕರೀಂನಗರದಲ್ಲಿ ಇನ್ನೊಂದೆಡೆ ವೆಂಕಟ್​ ಬಲ್ಮೂರ್​ ತನ್ನ ಸಹಚರರೊಂದಿಗೆ ಕೆಸಿಆರ್​ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಾತವಾಹನಾ ಯೂನಿರ್ವಸಿಟಿ ಬಳಿ ಕತ್ತೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ಫೋಟೋ ಶೇರ್​ ಮಾಡಿಕೊಂಡಿದ್ದ ಅವರು, ರೈತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಜೀವನ ಹಾಳು ಮಾಡಿದ್ದಕ್ಕೆ ಮತ್ತು ಸುಳ್ಳು ಭರವಸೆಗಳ, ಹುಸಿ ಪ್ರಚಾರ ನಡೆಸಿದ್ದಕ್ಕೆ ಈ ಪ್ರತಿಭಟನೆ ಎಂದು ಹೇಳಿದ್ದರು. ಇವರು ಕತ್ತೆಯ ಮುಖಕ್ಕೆ ಕೆಸಿಆರ್​ ಫೋಟೋ ಹಾಕಿದ್ದರು, ಅಷ್ಟೇ ಅಲ್ಲ, ಆ ಕತ್ತೆ ಎದುರಿಗೆ ಕೇಕ್​ ಇಟ್ಟು ಕಟ್​ ಮಾಡಿಸಿದ್ದರು.

ಇದನ್ನೂ ಓದಿ: ಚೀನಾನಲ್ಲಿ ಶೂನ್ಯ-ಕೋವಿಡ್ ನೀತಿ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ!

Published On - 8:05 am, Sat, 19 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ