Bharat Jodo Yatra: ಹರಿಯಾಣದ ಪಾಣಿಪತ್​ನಲ್ಲಿ ಇಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಸಂಸದ ರಾಹುಲ್ ಗಾಂಧಿ ಭಾಷಣ

Bharat Jodo Yatra: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವು ಹರಿಯಾಣದ ಪಾಣಿಪತ್​ನಿಂದ ಪ್ರಾರಂಭವಾಗಿದ್ದು, ಸಾರ್ವಜನಿಕರೊಂದಿಗೆ ಸಭೆ ನಡೆಸಲಿದ್ದಾರೆ.

Bharat Jodo Yatra: ಹರಿಯಾಣದ ಪಾಣಿಪತ್​ನಲ್ಲಿ ಇಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಸಂಸದ ರಾಹುಲ್ ಗಾಂಧಿ ಭಾಷಣ
Edited By:

Updated on: Jan 06, 2023 | 8:50 AM

ಹರಿಯಾಣ: ಭಾರತ್​ ಜೋಡೋ ಯಾತ್ರೆ ನಿನ್ನೆ (ಜ.6) ಗುರುವಾರ ಸಂಜೆ ಉತ್ತರ ಪ್ರದೇಶವನ್ನ ಮುಗಿಸಿ ಹರಿಯಾಣದ ಪಾಣಿಪತ್‌ ಜಿಲ್ಲೆಗೆ ಯಾತ್ರೆ ಪ್ರವೇಶಿಸಿದ್ದು, ಸನೌಲಿ ಖುರ್ದ್ ಗ್ರಾಮದ ಹೊಲಗಳಲ್ಲಿ ನಿರ್ಮಿಸಲಾದ ಟೆಂಟ್ ಹೌಸ್‌ನಲ್ಲಿ ಯಾತ್ರೆಯನ್ನು ನಿಲ್ಲಿಸಲಾಯಿತು. ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ ರಾಹುಲ್ ಗಾಂಧಿ ಅವರು ದೆಹಲಿಗೆ ಹಿಂತಿರುಗಿದ್ದರು. ಇಂದು (ಜ.6) ಬೆಳಗ್ಗೆ 6 ಗಂಟೆಗೆ ಯಾತ್ರೆ ಆರಂಭವಾಗಿದ್ದು, ಹರಿಯಾಣದ ಸನೌಲಿ ರಸ್ತೆ, ಬಾಬಿಲ್ ನಾಕಾ ಮೂಲಕ ಸಂಜಯ್ ಚೌಕ್ ತಲುಪಲಿದೆ. ಈ ಮೂಲಕ ಅವರು 13 ಕಿಮೀ ನಡೆಯಲಿದ್ದಾರೆ. ಪ್ರಯಾಣದ ಸಮಯದಲ್ಲಿ ಸನೌಲಿ ರಸ್ತೆಯನ್ನು 2 ಗಂಟೆಗಳ ಮೊದಲು ಮುಚ್ಚಲಾಗುತ್ತದೆ.

ರಾಹುಲ್ ಗಾಂಧಿಯವರ ಇಂದಿನ ಕಾರ್ಯಕ್ರಮ

ರಾಹುಲ್ ಅವರ ಪಾದಯಾತ್ರೆ ಹರಿಯಾಣದ ನಿಂಬ್ರಿ, ಉಗ್ರಖೇಡಿ, ಮಾರ್ಬಲ್ ಮಾರ್ಕೆಟ್, ಬಾಬಿಲ್ ನಾಕಾ, ಶಿವ ಚೌಕ್, ಭೀಮ್ ಗೌಡ ಮಂದಿರ ಚೌಕ್ ಮತ್ತು ನಂತರ ಸಂಜಯ್ ಚೌಕ್ ತಲುಪಲಿದೆ. ಇವೆಲ್ಲವೂ ಒಂದೇ ಮಾರ್ಗದಲ್ಲಿವೆ. ಈ ಸಂದರ್ಭದಲ್ಲಿ ಮಾರ್ಗದ 6 ಸ್ಥಳಗಳಲ್ಲಿ ಸ್ವಾಗತ ದ್ವಾರಗಳನ್ನು ಮಾಡಲಾಗಿದ್ದು, ರಾಹುಲ್​ ಗಾಂಧಿಯವರನ್ನು ಪ್ರಯಾಣದಲ್ಲಿರುವಾಗಲೇ ಅಲ್ಲಿಯೇ ಸ್ವಾಗತಿಸಲಾಗುವುದು. ಯಾತ್ರೆ ಬೆಳಗ್ಗೆ 11 ಗಂಟೆಗೆ ಸಂಜಯ್ ಚೌಕ್ ತಲುಪಲಿದ್ದು, ಈ 13 ಕಿಲೋಮೀಟರ್ ಮಾರ್ಗವು ಸುಮಾರು 5 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಸಂಜಯ್ ಚೌಕ್‌ನಿಂದ ಅನಾಜ್ ಮಂಡಿಗೆ ಯಾತ್ರೆ ಹೋಗಲಿದೆ

ಸಂಜಯ್ ಚೌಕ್ ತಲುಪಿದ ನಂತರ ರಾಹುಲ್ ಗಾಂಧಿ ಅವರನ್ನು ವಿಶೇಷ ರೈಲುಗಳಲ್ಲಿ ಜಿಟಿ ರಸ್ತೆ ಮೂಲಕ ಅನಾಜ್ ಮಂಡಿಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ಅವರು ಉಪಹಾರವನ್ನು ಸೇವಿಸಿ ಇಲ್ಲಿಯೇ 2 ಗಂಟೆಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಸಂಜಯ್​ ಚೌಕ್​ನಿಂದ ಅನಾಜ್ ಮಂಡಿಯ ಕಡೆಗೆ ಪ್ರಯಾಣ ಬೆಳಸಲಿದ್ದಾರೆ.

ಎಲಿವೇಟೆಡ್ ಹೈವೇಯಿಂದ ರ್ಯಾಲಿ ಸ್ಥಳಕ್ಕೆ ತಲುಪಲಿದ್ದಾರೆ

ಸಿವಾಹ್ ಬಳಿ ಪಾಣಿಪತ್ ನಗರದ ಹೃದಯಭಾಗದ ಮೂಲಕ ಹಾದುಹೋಗುವ ಎಲಿವೇಟೆಡ್ ಹೆದ್ದಾರಿಯಿಂದ ಟೋಲ್ ಪ್ಲಾಜಾ ತಲುಪಲಿದೆ. ನಂತರ ಟೋಲ್ ಪ್ಲಾಜಾದಿಂದ ಬೆಂಗಾವಲು ಪಡೆ ಮತ್ತೆ ಪಾಣಿಪತ್ ಕಡೆಗೆ ಬರುತ್ತಾರೆ. ನಂತರ ಇಲ್ಲಿಂದ ರಾಧಾ ಸ್ವಾಮಿ ಸತ್ಸಂಗ ಭವನ ರಸ್ತೆ ಮೂಲಕ ಸೆಕ್ಟರ್ 13-17ರ ರ್ಯಾಲಿ ಸ್ಥಳಕ್ಕೆ ಹೋಗಲಾಗುತ್ತದೆ. ಅಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ:Bharat Jodo Yatra: ಭಾರತ್​ ಜೋಡೋ ಯಾತ್ರೆ ತುಸು ಹೊತ್ತು ಸ್ಥಗಿತಗೊಳಿಸಿ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ರಾಹುಲ್ ಗಾಂಧಿ

ಬಾಬರ್‌ಪುರ ಮಂಡಿಯಲ್ಲಿ ರಾತ್ರಿ ತಂಗಲಿದ್ದಾರೆ.

ಸೆಕ್ಟರ್ 13-17 ರ ರ್ಯಾಲಿಯ ನಂತರ ರಾಹುಲ್ ಕಾರ್ ಮೂಲಕ ಬಾಬರ್‌ಪುರ ಅನಾಜ್ ಮಂಡಿ ತಲುಪಲಿದ್ದಾರೆ. ರಾತ್ರಿ ಇಲ್ಲೇ ತಂಗಲಿದ್ದಾರೆ. ಜನವರಿ 7 ರಂದು ಬೆಳಿಗ್ಗೆ 6 ಗಂಟೆಗೆ, ಕೊಹಾಂಡ್ ಗಡಿಗೆ ಕಾರಿನಲ್ಲಿ ಹೋಗುವ ಮೂಲಕ ಭಾರತ್ ಜೋಡೋ ಯಾತ್ರೆ ಕರ್ನಾಲ್ ಜಿಲ್ಲೆ ಪ್ರವೇಶಿಸಲಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ