Global Investors Summit 2023: ಟಿಮ್ ಕುಕ್, ಎಲಾನ್ ಮಸ್ಕ್, ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಆಹ್ವಾನಿಸಿದ ಆಂಧ್ರ ಸರ್ಕಾರ
ಆಂಧ್ರಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಮೋದಿ, ಆ್ಯಪಲ್ ಸಿಇಒ ಟಿಮ್ ಕುಕ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಎಕ್ಸಿಕ್ಯೂಟಿವ್ ಚೇರ್ಮನ್ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರನ್ನು ಆಂಧ್ರಪ್ರದೇಶ ಸರ್ಕಾರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ಅಮರಾವತಿ: ಆಂಧ್ರಪ್ರದೇಶದಲ್ಲಿ (Andhra Pradesh) ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ (Global Investors Summit) (ಜಿಐಎಸ್) ಪ್ರಧಾನಿ ನರೇಂದ್ರ ಮೋದಿ, ಆ್ಯಪಲ್ ಸಿಇಒ ಟಿಮ್ ಕುಕ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಎಕ್ಸಿಕ್ಯೂಟಿವ್ ಚೇರ್ಮನ್ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರನ್ನು ಆಂಧ್ರಪ್ರದೇಶ ಸರ್ಕಾರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ. ಈ ಕಾರ್ಯಕ್ರಮವು ಮಾರ್ಚ್ 3 ಮತ್ತು 4 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
15 ಕೇಂದ್ರ ಸಚಿವರು, 15 ರಾಜ್ಯಗಳು ಮುಖ್ಯಮಂತ್ರಿಗಳು, 44 ಜಾಗತಿಕ ಕೈಗಾರಿಕೋದ್ಯಮಿಗಳು, 53 ಭಾರತೀಯ ಉದ್ಯಮದ ಪ್ರಮುಖರು ಮತ್ತು ವಿವಿಧ ದೇಶಗಳ ರಾಯಭಾರಿಗಳನ್ನು ಎರಡು ದಿನಗಳ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರವು ರಾಜ್ಯಕ್ಕೆ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಪಣತೊಟ್ಟಿದೆ ಎಂದು ಹೇಳಲಾಗಿದೆ. ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್ ಮತ್ತು ಸ್ಯಾಮ್‌ಸಂಗ್ ಅಧ್ಯಕ್ಷ ಮತ್ತು ಸಿಇಒ ಓ-ಹ್ಯುನ್ ಕ್ವಾನ್ ಅವರು ಬಂದರು ನಗರದಲ್ಲಿ ನಡೆಯಲಿರುವ ಶೃಂಗಸಭೆಯ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ಮುಖೇಶ್ ಅಂಬಾನಿ, ಗೌತಮ್ ಅದಾನಿ, ಆನಂದ್ ಮಹೀಂದ್ರಾ, ಕುಮಾರ್ ಮಂಗಲಂ ಬಿರ್ಲಾ, ಆದಿ ಗೋದ್ರೇಜ್, ರಿಷಾದ್ ಪ್ರೇಮ್‌ಜಿ ಮತ್ತು ಎನ್ ಚಂದ್ರಶೇಖರನ್ ಸೇರಿದಂತೆ ಕೆಲವು ಭಾರತೀಯ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಭವಿಷ್ಯಕ್ಕಾಗಿ ತಯಾರಿ ಮಾಡುವ ಗುರಿಯೊಂದಿಗೆ ಜಿಐಎಸ್ ಅನ್ನು ಆಯೋಜಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಮೂಲಕ ನಿಮ್ಮ ವ್ಯವಹಾರವು ಅಭಿವೃದ್ಧಿ ಹೊಂದಲು, ನಮ್ಮೊಂದಿಗೆ ಕೆಲಸ ಮಾಡಲು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. ಮೇ 2019 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಜಗನ್ ಮೋಹನ್ ರೆಡ್ಡಿ ಸರ್ಕಾರವು ವಿವಿಧ ದೇಶಗಳಿಂದ ಹೂಡಿಕೆಗಳನ್ನು ಕೋರಿ ವಿಜಯವಾಡದಲ್ಲಿ ರಾಜತಾಂತ್ರಿಕ ಸಂಪರ್ಕ ಕಾರ್ಯಕ್ರಮವನ್ನು ನಡೆಸಿತು.
ಈಗ ರಾಜ್ಯ ಸರ್ಕಾರವು ಜಿಐಎಸ್ ಮೂಲಕ ಅಡ್ವಾಂಟೇಜ್ ಆಂಧ್ರ ಪ್ರದೇಶವನ್ನು ದೊಡ್ಡ ರೀತಿಯಲ್ಲಿ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಸಮೃದ್ಧಿ ಮತ್ತು ಹೂಡಿಕೆದಾರರಿಗೆ ಅನುಕೂಲಕರ ವ್ಯಾಪಾರ ವಾತಾವರಣವನ್ನು ಘೋಷಿಸುತ್ತದೆ ಎಂದು ಹೇಳಿದೆ.
ವೈಎಸ್‌ಆರ್ ಕಾಂಗ್ರೆಸ್ ಸಂಸದ ವಿ ವಿಜಯಸಾಯಿ ರೆಡ್ಡಿ ಟ್ವೀಟ್ ಮಾಡುವ ಮೂಲಕ 2022 ರಲ್ಲಿ, ಆಂಧ್ರಪ್ರದೇಶದ ರಾಜ್ಯ ಸರ್ಕಾರವು 1,26,750 ಕೋಟಿ ರೂ. ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಮಾಡಿದೆ, ಅದರಲ್ಲಿ ರೂ 81,000 ಕೋಟಿ ಹಸಿರು ಇಂಧನ ಯೋಜನೆಗೆ ನೀಡಲಾಗಿದೆ. 2023ರಲ್ಲಿ ಈ ಯೋಜನೆಗೆ ನಾವು ನಮ್ಮ ಎಲ್ಲಾ ಶಕ್ತಿಯನ್ನು ಹಾಕಿದಾಗ ದೊಡ್ಡಮಟ್ಟದಲ್ಲಿ ಬೆಳಸಬೇಕಿದೆ. ಮಾರ್ಚ್ 3 ಮತ್ತು 4 ರಂದು ವೈಜಾಗ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಹಿಂದೆ ನಿರೀಕ್ಷಿತ ಹೂಡಿಕೆಗಳಿಗೆ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಲಾಗಿಲ್ಲವಾದರೂ, ವಿವಿಧ ವಲಯಗಳಲ್ಲಿ 5-8 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಗ್ರಹಿಸುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ ಮತ್ತು ದೇಶೀಯ ಹೂಡಿಕೆದಾರರು, ನೀತಿ-ನಿರ್ಮಾಪಕರು, ವಿವಿಧ ದೇಶಗಳ ರಾಜತಾಂತ್ರಿಕರು, ದೇಶದ ವ್ಯಾಪಾರ ನಿಯೋಗಗಳು, ಪ್ರಭಾವಿಗಳು, ಉದ್ಯಮ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳಿಗೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ದೀರ್ಘಾವಧಿಯ ಪಾಲುದಾರಿಕೆಗೆ ಪ್ರವೇಶಿಸಲು ಶೃಂಗಸಭೆಯು ಎಲ್ಲವನ್ನೂ ಒಳಗೊಂಡ ವೇದಿಕೆಯನ್ನು ನೀಡುತ್ತದೆ ಎಂದು ಆಂಧ್ರ ಸರ್ಕಾರ ಹೇಳಿದೆ ಎಂದು ಕೈಗಾರಿಕೆ ಮತ್ತು ಹೂಡಿಕೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಈ ಕಾರಯಕ್ರಮದಲ್ಲಿ ಬಿಸಿನೆಸ್-ಟು-ಬಿಸಿನೆಸ್ (B2B) ಮತ್ತು ಸರ್ಕಾರದಿಂದ ವ್ಯಾಪಾರಕ್ಕೆ (G2B) ಸಭೆಗಳು ಮತ್ತು ಜಾಗತಿಕ ನಾಯಕರಿಗೆ ಅವಕಾಶಗಳನ್ನು ಪ್ರದರ್ಶಿಸಲು ವಲಯ-ನಿರ್ದಿಷ್ಟ ಪ್ಲೆನರಿ ಸೆಷನ್‌ಗಳು ಇರುತ್ತವೆ. ಕೃಷಿ-ಆಹಾರ ಸಂಸ್ಕರಣೆ, ಏರೋಸ್ಪೇಸ್ ಮತ್ತು ರಕ್ಷಣೆ, ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳು, ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ, ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಫಾರ್ಮಾಸ್ಯುಟಿಕಲ್ಸ್, ನವೀಕರಿಸಬಹುದಾದ ಇಂಧನ, ಎಂಎಸ್‌ಎಂಇಗಳು ಮತ್ತು ಪ್ರವಾಸೋದ್ಯಮ, ಬಗ್ಗೆ ಇಲ್ಲಿ ತಿಳಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಕೈಗಾರಿಕಾ ಅಭಿವೃದ್ಧಿ ನೀತಿಯ ಹೊರತಾಗಿ ಪಂಪ್ಡ್ ಸ್ಟೋರೇಜ್ ಪವರ್, ಬಲ್ಕ್ ಡ್ರಗ್ ಪಾರ್ಕ್‌ಗಳು, ರಿಟೇಲ್ ಪಾರ್ಕ್‌ಗಳು, ಎಲೆಕ್ಟ್ರಿಕ್ ಮೊಬಿಲಿಟಿ, ನವೀಕರಿಸಬಹುದಾದ ಇಂಧನ ರಫ್ತು, ಎಲೆಕ್ಟ್ರಾನಿಕ್ಸ್ ಮತ್ತು ಐಟಿಯನ್ನು ಒಳಗೊಂಡಿರುವ ವಲಯ-ನಿರ್ದಿಷ್ಟ ನೀತಿಗಳನ್ನು ರಾಜ್ಯ ಸರ್ಕಾರ ಈಗಾಗಲೇ ಅನಾವರಣಗೊಳಿಸಿದೆ ಎಂದು ಅವರು ಹೇಳಿದರು.
ಶೃಂಗಸಭೆಯ ಪ್ರಚಾರಕ್ಕಾಗಿ ರಾಜ್ಯ ಸರ್ಕಾರವು ಜರ್ಮನಿ (ಜನವರಿ 20-26), ಜಪಾನ್ (ಜನವರಿ 25-27), ದಕ್ಷಿಣ ಕೊರಿಯಾ (ಜನವರಿ 30-31) ಮತ್ತು ಯುಎಸ್ಎ (ಫೆಬ್ರವರಿ 6-10) ನಲ್ಲಿ ರೋಡ್‌ಶೋಗಳನ್ನು ನಡೆಸುತ್ತದೆ. ಯುಎಇ ಮತ್ತು ತೈವಾನ್‌ನಲ್ಲಿಯೂ ರೋಡ್‌ಶೋಗಳು ನಡೆಯಲಿವೆ ಆದರೆ ದಿನಾಂಕಗಳನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಭಾರತದಲ್ಲಿ ಜನವರಿ 10-14 ರವರೆಗೆ ನವದೆಹಲಿಯಲ್ಲಿ ಮತ್ತು ಫೆಬ್ರವರಿ 3 ರಂದು ಮುಂಬೈನಲ್ಲಿ ಶೃಂಗಸಭೆಯ ರೋಡ್‌ಶೋ ನಡೆಸಲಾಗುವುದು. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಕಾರ್ಯಕ್ರಮದ ದಿನಾಂಕಗಳನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Fri, 6 January 23