ನಾಳೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲಿದ್ದಾರೆ ರಾಹುಲ್ ಗಾಂಧಿ
2019 ರ 'ಮೋದಿ ಉಪನಾಮ' (Modi Surname) ಮಾನನಷ್ಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಾಹುಲ್ ಶಿಕ್ಷೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಕೆಳಮನೆಯ ಸಂಸದರಾಗಿ ಗಾಂಧಿಯವರ ಸದಸ್ಯತ್ವವನ್ನು ಸೋಮವಾರ ಮರುಸ್ಥಾಪಿಸಲಾಗಿದೆ. ಕೇರಳದ ವಯನಾಡ್‌ನ ಶಾಸಕರಾಗಿರುವ 53ರ ಹರೆಯದ ರಾಹುಲ್ ಕಾಂಗ್ರೆಸ್ ಕಡೆಯಿಂದ ಚರ್ಚೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.
ದೆಹಲಿ ಆಗಸ್ಟ್ 07: ಮಂಗಳವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದ ವಿರುದ್ಧ ಮುಂಬರುವ ಅವಿಶ್ವಾಸ ನಿರ್ಣಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾಷಣ ಮಾಡಲಿದ್ದಾರೆ. 2019 ರ ‘ಮೋದಿ ಉಪನಾಮ’ (Modi Surname) ಮಾನನಷ್ಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಾಹುಲ್ ಶಿಕ್ಷೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಕೆಳಮನೆಯ ಸಂಸದರಾಗಿ ಗಾಂಧಿಯವರ ಸದಸ್ಯತ್ವವನ್ನು ಸೋಮವಾರ ಮರುಸ್ಥಾಪಿಸಲಾಗಿದೆ. ಕೇರಳದ ವಯನಾಡ್‌ನ ಶಾಸಕರಾಗಿರುವ 53ರ ಹರೆಯದ ರಾಹುಲ್ ಕಾಂಗ್ರೆಸ್ ಕಡೆಯಿಂದ ಚರ್ಚೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸದರಾಗಿ ಅನರ್ಹಗೊಳಿಸಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ವಿರುದ್ಧ ನೀಡಿದ ದೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2019 ರಲ್ಲಿ ಕರ್ನಾಟಕ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಉಪನಾಮ ಮೋದಿ ಎಂದು ಯಾಕಿದೆ? ಎಂದು ಕೇಳಿದ್ದರು. ಇದು ಮೋದಿ ಹೆಸರಿಗೆ ಮಾಡಿದ ಅವಮಾನ ಎಂದು ಪೂರ್ಣೇಶ್ ಮೋದಿ ದೂರು ನೀಡಿದ್ದರು.
ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯು ಕಾನೂನಿನ ಪ್ರಕಾರ ಶಾಸಕರನ್ನು ಸ್ವಯಂಚಾಲಿತವಾಗಿ ಅನರ್ಹಗೊಳಿಸುತ್ತದೆ.
ಸಂಸತ್ ಕಲಾಪಕ್ಕೆ ಹಾಜರಾದ ರಾಹುಲ್ ಗಾಂಧಿ
ಲೋಕಸಭೆಯಿಂದ ತಮ್ಮ ಸಂಸದ ಸ್ಥಾನಮಾನವನ್ನು ಮರುಸ್ಥಾಪಿಸುವ ಅಧಿಸೂಚನೆಯ ನಂತರ, ರಾಹುಲ್ ಗಾಂಧಿ ಅವರು ಸೋಮವರಾರ ಸಂಸತ್ ಭವನವನ್ನು ತಲುಪಿದರು. ಮಧ್ಯಾಹ್ನದ ಕಲಾಪಕ್ಕೆ ಹಾಜರಾಗಲು ಸದನವನ್ನು ಪ್ರವೇಶಿಸುವ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಂಸತ್ತಿಗೆ ಆಗಮಿಸಿದ ಕಾಂಗ್ರೆಸ್ ಸಂಸದರಿಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಆತ್ಮೀಯ ಸ್ವಾಗತ ದೊರೆಯಿತು.
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಸ್ತಾವ ಇಲ್ಲ; ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಸ್ಪಷ್ಟನೆ
ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ನೃತ್ಯ ಮಾಡುತ್ತಾ ಗಾಂಧಿ ಪರವಾಗಿ ಘೋಷಣೆಗಳನ್ನು ಕೂಗುವುದರೊಂದಿಗೆ ಬೃಹತ್ ಸಂಭ್ರಮಾಚರಣೆಗಳು ನಡೆದವು. ಏತನ್ಮಧ್ಯೆ, ರಾಹುಲ್ ಗಾಂಧಿಯವರು ಟ್ವಿಟರ್ ಬಯೋದಲ್ಲಿ “ಅನರ್ಹ ಸಂಸದ” ಎಂಬುದನ್ನು ‘ಸಂಸತ್ತಿನ ಸದಸ್ಯ’ ಎಂದು ಬದಲಾಯಿಸಿದ್ದಾರೆ. ಅವರ ಟ್ವಿಟರ್ ಬಯೋದಲ್ಲಿ ಈಗ ಅವರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದಸ್ಯ ಮತ್ತು ಸಂಸತ್ ಸದಸ್ಯ ಎಂದು ವಿವರಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ