Assam Elections 2021: ಅಸ್ಸಾಂನ 8 ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು; ಸರ್ಬಾನಂದ ಸೋನೊವಾಲ್, ಜೆಪಿ ನಡ್ಡಾ ವಿರುದ್ಧ ಎಫ್ಐಆರ್

ಚುನಾವಣಾ ನೀತಿ ಸಂಹಿತೆ, ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾಧ್ಯಮ ನೀತಿಗಳನ್ನು ಬಿಜೆಪಿ ನಾಯಕರು ಮತ್ತು ಸದಸ್ಯರು ಉಲ್ಲಂಘಿಸಿದ್ದಾರೆ. ಅಸ್ಸಾಂನಲ್ಲಿ ಸೋಲು ಖಚಿತ ಎಂದು ಅರಿತು ಅಕ್ರಮ ಮತ್ತು ಅಸಂವಿಧಾನಿಕ ರೀತಿಯಲ್ಲಿ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಯತ್ನಿಸಿದೆ ಎಂದು ನಿರಾನ್ ಬೊರಾಹ್ ಹೇಳಿದ್ದಾರೆ.

Assam Elections 2021: ಅಸ್ಸಾಂನ 8 ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು; ಸರ್ಬಾನಂದ ಸೋನೊವಾಲ್, ಜೆಪಿ ನಡ್ಡಾ ವಿರುದ್ಧ ಎಫ್ಐಆರ್
ಜೆಪಿ ನಡ್ಡಾ- ಸರ್ಬಾನಂದ ಸೋನೊವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 29, 2021 | 6:07 PM

ಗುವಾಹಟಿ: ಪೂರ್ವ ಅಸ್ಸಾಂನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳುವ ಸುದ್ದಿರೂಪದ ಜಾಹೀರಾತನ್ನು ಬಿಜೆಪಿ ಪ್ರಕಟಿಸಿತ್ತು. ಈ ಜಾಹೀರಾತು ಪ್ರಕಟಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಅಸ್ಸಾಂನ 8 ಪ್ರಮುಖ ಪತ್ರಿಕೆಗಳು, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ, ಬಿಜೆಪಿ ರಾಜ್ಯಧ್ಯಕ್ಷ ರಂಜೀತ್ ಕುಮಾರ್ ದಾಸ್ ವಿರುದ್ಧ ದೂರು ದಾಖಲಿದೆ. ಮಾರ್ಚ್ 27ರಂದು ಪೂರ್ವ ಅಸ್ಸಾಂನಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಚುನಾವಣೆ ನಡೆಯುತ್ತಿರುವ ಅಸ್ಸಾಂನಲ್ಲಿ ಚುನಾವಣಾ ನೀತಿ ಸಂಹಿತೆ( MCC) ಜಾರಿಯಾಗಿದೆ. ನೀತಿ ಸಂಹಿತೆಯ ಉಲ್ಲಂಘನೆ, ಜನರ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 126A, ಮಾರ್ಚ್ 26ರಂದು ಚುನಾವಣಾ ಆಯೋಗ ಪ್ರಕಟಿಸಿದ ನಿರ್ದೇಶನ ಉಲ್ಲಂಘಿಸಿದ್ದಕ್ಕಾಗಿ ಭಾನುವಾರ ರಾತ್ರಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಪಿಸಿಸಿ ಕಾನೂನು ಇಲಾಖೆಯ ಅಧ್ಯಕ್ಷ ನಿರಾನ್ ಬೊರಾಹ್ ಹೇಳಿದ್ದಾರೆ.

ಚುನಾವಣಾ ನೀತಿ ಸಂಹಿತೆ, ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾಧ್ಯಮ ನೀತಿಗಳನ್ನು ಬಿಜೆಪಿ ನಾಯಕರು ಮತ್ತು ಸದಸ್ಯರು ಉಲ್ಲಂಘಿಸಿದ್ದಾರೆ. ಅಸ್ಸಾಂನಲ್ಲಿ ಸೋಲು ಖಚಿತ ಎಂದು ಅರಿತು ಅಕ್ರಮ ಮತ್ತು ಅಸಂವಿಧಾನಿಕ ರೀತಿಯಲ್ಲಿ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಯತ್ನಿಸಿದೆ.

ಎರಡು ಮತ್ತು ಮೂರನೇ ಹಂತದ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಮತದಾರರನ್ನು ಓಲೈಸಲಿರುವ ಪೂರ್ವಯೋಜಿತ ಸಂಚು ಇದಾಗಿದೆ. ರಾಜ್ಯದ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಾಧ್ಯಕ್ಷ ಮತ್ತು ಪಕ್ಷದ ಇತರ ಸದಸ್ಯರು ಉದ್ದೇಶ ಪೂರ್ವಕ ಸುದ್ದಿಪತ್ರಿಕೆಯ ಮುಖಪುಟದಲ್ಲಿ ಪೂರ್ವ ಅಸ್ಸಾಂನ ಎಲ್ಲ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಶೀರ್ಷಿಕೆಯ ಜಾಹೀರಾತನ್ನು ಸುದ್ದಿರೂಪದಲ್ಲಿ ಪ್ರಕಟಿಸಿದ್ದಾರೆ ಎಂದು ಬೊರಾಹ್ ಹೇಳಿದ್ದಾರೆ.

ಮತದಾರರ ಮನಸ್ಸಿನಲ್ಲಿ ಪೂರ್ವಕಲ್ಪಿತ ಅಭಿಪ್ರಾಯ ಬರುವಂತೆ ಮಾಡಿ ವಿವೇಚನೆಯಿಂದಲೇ ದುರುದ್ದೇಶಪೂರಿತ ಜಾಹೀರಾತನ್ನು ಪ್ರಕಟಿಸಲಾಗಿದೆ. ಇದು 1951 ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126A ಯ ಸ್ಪಷ್ಟ ಉಲ್ಲಂಘನೆ. ಈ ಕೃತ್ಯಕ್ಕೆ 2 ವರ್ಷ ಜೈಲು ಮತ್ತು ದಂಡ ಶಿಕ್ಷೆ ಇದೆ ಎಂದಿದ್ದಾರೆ ಅವರು.

ಮಾರ್ಚ್ 27ರ ಬೆಳಗ್ಗೆ 7 ಗಂಟೆಯಿಂದ ಏಪ್ರಿಲ್ 29 ಸಂಜೆ 7.30ರ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಭವಿಷ್ಯ ಹೇಳಬಾರದು ಎಂದು ಚುನಾವಣಾ ಆಯೋಗ ನಿರ್ದೇಶಿಸಿತ್ತು. ಹೀಗಿರುವಾಗ ಸುದ್ದಿಪತ್ರಿಕೆಯಲ್ಲಿ ದೊಡ್ಡ ಜಾಹೀರಾತು ನೀಡಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ತಪ್ಪಾದ ಭವಿಷ್ಯ ಪ್ರಕಟಿಸಿದ್ದು ಈ ನಿರ್ದೇಶನದ ಉಲ್ಲಂಘನೆ ಎಂದು ಬೊರಾಹ್ ಹೇಳಿದ್ದಾರೆ.

ಜಾಹೀರಾತು ಪ್ರಕಟಿಸಿದ ಸುದ್ದಿ ಪತ್ರಿಕೆಗಳು ಮತ್ತು ದೂರಿನಲ್ಲಿ ಉಲ್ಲೇಖಿಸಿರುವವರ ನಾಯಕರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಎಪಿಸಿಸಿ ಪೊಲೀಸರಲ್ಲಿ ಮನವಿ ಮಾಡಿದೆ.

ಭಾನುವಾರ ಜಾಹೀರಾತು ಪ್ರಕಟಿಸಿದ ಸುದ್ದಿ ಪತ್ರಿಕೆ ಮತ್ತು ಬಿಜೆಪಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಘಟಕವು ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ ನಿತಿನ್ ಖಾಡೆ ಅವರಿಗೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಎಐಸಿಸಿ ದೂರು ಸಲ್ಲಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲಿಸಲಿದೆ ಎಂದು ಸಿಇಒ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಚೂಣಿಯಲ್ಲಿರುವ ಇಂಗ್ಲಿಷ್, ಅಸ್ಸಾಮೀಸ್, ಹಿಂದಿ, ಬಂಗಾಳಿ ಪತ್ರಿಕೆಗಳಾದ ದಿ ಅಸ್ಸಾಂ ಟ್ರಿಬ್ಯೂನ್, ಅಸ್ಸೋಮಿಯ ಪ್ರತಿದಿನ, ಅಮರ್ ಅಸ್ಸೋಂ, ನಿಯೊಮಿಯಾ ಬರ್ತಾ, ಅಸ್ಸೋಮಿಯಾ ಖಬರ್, ದೈನಿಕ್ ಅಸ್ಸಾಂ, ದೈನಿಕ್ ಜುಗಾಸಂಖ ಮತ್ತು ದೈನಿಕ ಪುರ್ವೋದಯ್​ನಲ್ಲಿ ಬಿಜೆಪಿ ಜಾಹೀರಾತು ಪ್ರಕಟಿಸಿತ್ತು.

ಶನಿವಾರ ಅಸ್ಸಾಂನಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಒಟ್ಟು 81.09 ಲಕ್ಷ ಮತದಾರರ ಪೈಕಿ ಶೇಕಡಾ 79.93 ಮಂದಿ ಮತ ಚಲಾಯಿಸಿದ್ದಾರೆ. 39 ವಿಧಾನಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಏಪ್ರಿಲ್ 1ರಂದು ನಡೆಯಲಿದ್ದು 40 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಮೂರನೇ ಹಂತದ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ.

ಇದನ್ನೂ ಓದಿ: Assam Election 2021 Opinion Poll: ಬಿಜೆಪಿ ನೇತೃತ್ವದ ಎನ್​ಡಿಎಗೆ 73 ಸೀಟ್, ಕಾಂಗ್ರೆಸ್​ಗೆ ಮತ್ತೆ ವಿರೋಧ ಪಕ್ಷದ ಸ್ಥಾನ

Published On - 5:44 pm, Mon, 29 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ