Assam Assembly Elections 2021: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ‘ನಿಜವಾದ ಭಾರತೀಯ‘ನನ್ನು ರಕ್ಷಿಸುವ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ: ಬಿಜೆಪಿ

BJP Manifesto in Assam: ಅಸ್ಸಾಂನಲ್ಲಿ ಹರಿಯುವ ನದಿಗಳಿಗೆ ಬೃಹತ್ ಆಣೆಕಟ್ಟುಗಳನ್ನು ಕಟ್ಟಿ ಹೆಚ್ಚು ಪ್ರಮಾಣದ ನೀರನ್ನು ಬಳಸಿಕೊಳ್ಳಲಾಗುವುದು. ಪ್ರವಾಹ ಪರಿಸ್ಥಿತಿ ಉದ್ಭವವಾಗದಂತೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು.

Assam Assembly Elections 2021: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ‘ನಿಜವಾದ ಭಾರತೀಯ‘ನನ್ನು ರಕ್ಷಿಸುವ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ: ಬಿಜೆಪಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ
Follow us
guruganesh bhat
|

Updated on: Mar 23, 2021 | 1:59 PM

ಗುವಾಹಟಿ: ಇನ್ನೇನು ವಿಧಾನಸಭಾ ಚುನಾವಣೆಗೆ ನಾಲ್ಕೇ ದಿನ ಇದೆ ಎನ್ನುವಾಗ ಬಿಜೆಪಿ ಅಸ್ಸಾಂನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಗುವಾಹಟಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಜತೆಗೆ ಪ್ರಚಾರ ಸಭೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ‘ನಿಜವಾದ ಭಾರತೀಯ’ನನ್ನು ರಕ್ಷಿಸುವ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ. ಈ ಕಾನೂನಿನ ಮೂಲಕ ನಿಜವಾದ ಭಾರತೀಯ ನಾಗರಿಕರನ್ನು ರಕ್ಷಣೆ ಮಾಡುತ್ತೇವೆ. ಗಡಿ ನುಸುಳುವಿಕೆಯನ್ನು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಭರವಸೆ ನೀಡಿದೆ. ಅಸ್ಸಾಂ ರಾಜ್ಯದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕೆಲಸಗಳನ್ನೂ ಈಡೇರಿಸುತ್ತೇವೆ. ಮಹಿಳಾ ಸಬಲೀಕರಣ, ಸಂಪರ್ಕ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬದಲಾವಣೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.  

ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು ಮಿಶನ್ ಬ್ರಹ್ಮಪುತ್ರಾ: ಅಸ್ಸಾಂನಲ್ಲಿ ಹರಿಯುವ ನದಿಗಳಿಗೆ ಬೃಹತ್ ಆಣೆಕಟ್ಟುಗಳನ್ನು ಕಟ್ಟಿ ಹೆಚ್ಚು ಪ್ರಮಾಣದ ನೀರನ್ನು ಬಳಸಿಕೊಳ್ಳಲಾಗುವುದು. ಪ್ರವಾಹ ಪರಿಸ್ಥಿತಿ ಉದ್ಭವವಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು.

ಮಹಿಳೆಯರಿಗೆ ವಿಶೇಷ ಆರ್ಥಿಕ ಪ್ರಾತಿನಿಧ್ಯ ಒದಗಿಸುವ ಒರುನೋದಯ್ ಯೋಜನೆ: ಈ ಯೋಜನೆಯನ್ನು ಬಿಜೆಪಿ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡೇ ರೂಪಿಸಿದೆ. ಅಸ್ಸಾಂನ 30 ಲಕ್ಷ ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು 3 ಸಾವಿರದವರೆಗೆ ಹಣ ನೀಡಲಾಗುವುದು.

ನಾಮ್​ಘರ್ ಎಂದು ಕರೆಯಲ್ಪಡುವ ಅಸ್ಸಾಮಿನ ಸಾಂಪ್ರದಾಯಿಕ ಶೈಲಿಯ ದೇಗುಲಗಳನ್ನು ಮರು ನಿರ್ಮಾಣ ಮಾಡಲು ₹ 2.50 ಲಕ್ಷ ಅನುದಾನ ಒದಗಿಸಲಾಗುವುದು.

ಮಿಶನ್ ಶಿಶು ಯೋಜನೆ: ಮಕ್ಕಳಿಗೆ ಶಿಕ್ಷಣ ಒದಗಿಸಲು ವಿಶೇಷ ಒತ್ತು ನೀಡಲಾಗುವುದು. ಅಲ್ಲದೇ 8 ನೇ ತರಗತಿಯಿಂದ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡಲಾಗುವುದು. ಸಮರ್ಪಕವಾದ, ನಿಜವಾದ ಭಾರತೀಯರಿಗೆ ರಕ್ಷಣೆ ಒದಗಿಸುವ ಪೌರತ್ವದ ನೋಂದಣಿ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ.

ಬಿಜೆಪಿ ಪ್ರಣಾಳಿಕೆಯ ಗುರಿಯೇನು?

ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ  ನಡೆಯುತ್ತಿದ್ದು ಮೊದಲ ಹಂತದ  ಚುನಾವಣೆ ಮಾರ್ಚ್ 27ರಂದು ನಡೆಯಲಿದೆ. ಏಪ್ರಿಲ್ 1 ಮತ್ತು ಏಪ್ರಿಲ್ 5ರಂದು ಎರಡು, ಮೂರನೇ  ಹಂತದ ಚುನಾವಣೆ ನಡೆಯಲಿದೆ.  ಎಲ್ಲ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದು ಬಿಜೆಪಿ,  ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಟೀಕಾಪ್ರಹಾರ ಮಾಡುತ್ತಲೇ ಇದೆ. ಕಾಂಗ್ರೆಸ್ ಪಕ್ಷವು ಎಐಯುಡಿಎಫ್ (AIDUF) ಜತೆ ಮೈತ್ರಿ ಮಾಡಿಕೊಂಡಿರುವುದನ್ನೇ ಪ್ರಧಾನ ವಿಷಯವಾಗಿರಿಸಿಕೊಂಡು ಎಐಯುಡಿಎಫ್  ನಾಯಕ  ಅಜ್ಮಲ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಒರುನೋದಯ್  22 ಲಕ್ಷ ಮಹಿಳೆಯರಿಗೆ ನೇರವಾಗಿ  ಪ್ರಯೋಜನ ನೀಡುತ್ತಿದೆ.  ಕಳೆದ 6 ತಿಂಗಳಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 830 ರೂಪಾಯಿ ಜಮೆ ಆಗುತ್ತಿದೆ. ಇದರ ಜತೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುತ್ತಿರುವ ಬಗ್ಗೆ ನನಗೆ ಸಂತೃಪ್ತಿ ಇದೆ. ಪ್ರತಿ ವರ್ಷ ಪದವಿಪೂರ್ವ ಶಿಕ್ಷಣದವರೆಗೆ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ಉಚಿತ ಪಠ್ಯ ಪುಸ್ತಕ ಸಿಗುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಖರೀದಿಸಲು ಹಣ ನೀಡಲಾಗುತ್ತದೆ. ಈ ಯೋಜನೆಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ಜತೆಗೆ ಆರೋಗ್ಯ ವಲಯದಲ್ಲಿರುವ ಆಯುಷ್ಮಾನ್ ಭಾರತ್, ಅಟಲ್ ಅಮೃತ್ ಅಭಿಜನ್ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಜಿನ ಸಹಾಯವನ್ನು ನೀಡಿದೆ ಎಂದು ಬಿಜೆಪಿಯ ಅಸ್ಸಾಂ ಘಟಕದ  ನಾಯಕ  ಹಿಮಾಂತ ಬಿಸ್ವ ಶರ್ಮಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Assam Assembly Elections 2021: ಅಸ್ಸಾಂನ ಗೌರವ ಕುಗ್ಗಿಸುವವರಿಗೆ ಮತ ಹಾಕುವಿರೇ?; ಪ್ರಧಾನಿ ಮೋದಿ ಪ್ರಶ್ನೆ

Assam Assembly Elections 2021: ಅಸ್ಸಾಂನಲ್ಲಿ ‘5 ಗ್ಯಾರಂಟಿ’ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ