AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲೋಕಸಭೆ ಮೊಗಸಾಲೆಯಲ್ಲೇ ಸಂಸದರು ನನಗೆ ಬೆದರಿಕೆ ಹಾಕಿದ್ದಾರೆ..’- ಸಂಸದೆಯಿಂದ ಆರೋಪ, ಸ್ಪೀಕರ್​ಗೆ ದೂರು

ದೆಹಲಿ: ಅಮರಾವತಿಯ ಸಂಸದೆ ನವನೀತ್​ ಕೌರ್​ ರಾಣಾಗೆ ಇನ್ನೊಬ್ಬ ಸಂಸದನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಕೆಳಮನೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿರುದ್ಧ ಮಾತನಾಡಿದ್ದಕ್ಕಾಗಿ ಶಿವಸೇನೆಯ ಎಂಪಿ ಅರವಿಂದ್ ಸಾವಂತ್ ಅವರು ನನಗೆ ಲೋಕಸಭೆಯ ಮೊಗಸಾಲೆಯಲ್ಲಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಶಿವಸೇನೆ ಪಕ್ಷದ ಲೆಟರ್​ಹೆಡ್​ ಇರುವ ಪತ್ರದ ಮೂಲಕ ಮತ್ತು ಫೋನ್​ ಕರೆಯ ಮೂಲಕ ಆ್ಯಸಿಡ್​ ದಾಳಿಯ ಬೆದರಿಕೆಗಳೂ ಬರುತ್ತಿವೆ ಎಂದು ನವನೀತ್​ ಕೌರ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸ್ಪೀಕರ್​ ಓಂ ಬಿರ್ಲಾರಿಗೆ ಪತ್ರವನ್ನೂ ಬರೆದಿದ್ದಾರೆ. […]

‘ಲೋಕಸಭೆ ಮೊಗಸಾಲೆಯಲ್ಲೇ ಸಂಸದರು ನನಗೆ ಬೆದರಿಕೆ ಹಾಕಿದ್ದಾರೆ..’- ಸಂಸದೆಯಿಂದ ಆರೋಪ, ಸ್ಪೀಕರ್​ಗೆ ದೂರು
ನವನೀತ್​ ಕೌರ್ ರಾಣಾ ಮತ್ತು ಅರವಿಂದ್ ಸಾವಂತ್​
Follow us
Lakshmi Hegde
|

Updated on: Mar 23, 2021 | 1:04 PM

ದೆಹಲಿ: ಅಮರಾವತಿಯ ಸಂಸದೆ ನವನೀತ್​ ಕೌರ್​ ರಾಣಾಗೆ ಇನ್ನೊಬ್ಬ ಸಂಸದನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಕೆಳಮನೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿರುದ್ಧ ಮಾತನಾಡಿದ್ದಕ್ಕಾಗಿ ಶಿವಸೇನೆಯ ಎಂಪಿ ಅರವಿಂದ್ ಸಾವಂತ್ ಅವರು ನನಗೆ ಲೋಕಸಭೆಯ ಮೊಗಸಾಲೆಯಲ್ಲಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಶಿವಸೇನೆ ಪಕ್ಷದ ಲೆಟರ್​ಹೆಡ್​ ಇರುವ ಪತ್ರದ ಮೂಲಕ ಮತ್ತು ಫೋನ್​ ಕರೆಯ ಮೂಲಕ ಆ್ಯಸಿಡ್​ ದಾಳಿಯ ಬೆದರಿಕೆಗಳೂ ಬರುತ್ತಿವೆ ಎಂದು ನವನೀತ್​ ಕೌರ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸ್ಪೀಕರ್​ ಓಂ ಬಿರ್ಲಾರಿಗೆ ಪತ್ರವನ್ನೂ ಬರೆದಿದ್ದಾರೆ. ಇನ್ನು ನವನೀತ್ ಕೌರ್​ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾದವರು. ಆದರೆ ಸಿಂಧುಧುರ್ಗ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅರವಿಂದ್ ಸಾವಂತ್​ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ನಾನು ಯಾವುದೇ ಬೆದರಿಕೆಯನ್ನೂ ಹಾಕಿಲ್ಲ. ಹಾಗೊಮ್ಮೆ ಇನ್ನೆಲ್ಲಿಂದಲಾದರೂ ಬೆದರಿಕೆ ಕರೆಗಳು ನವನೀತ್​ ಅವರಿಗೆ ಬರುತ್ತಿದ್ದರೆ, ಅವರ ಸಹಾಯಕ್ಕೆ ನಾನು ನಿಲ್ಲುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.

ಮಾರ್ಚ್​ 22ರಂದು ನವನೀತ್​ ಕೌರ್​ ರಾಣಾ ಪತ್ರ ಬರೆದಿದ್ದು, ಇಂದು ಶಿವಸೇನೆ ಸಂಸದ ಅರವಿಂದ್ ಸಾವಂತ್​ ನನಗೆ ಬೆದರಿಕೆ ಹಾಕಿದರು. ಇದು ನನಗೆ ಮಾತ್ರವಲ್ಲ, ಇಡೀ ದೇಶದ ಮಹಿಳೆಯರಿಗೆ ಅವಮಾನ ಆಗುವ ಸಂಗತಿ. ಅರವಿಂದ್ ಸಾವಂತ್​ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಆಡಳಿತವನ್ನು ಪ್ರಶ್ನೆ ಮಾಡಿದೆ. ನಂತರ ಹೊರಬರುತ್ತಿದ್ದಂತೆ ಮೊಗಸಾಲೆಯಲ್ಲಿ ನನ್ನೆದುರು ಬಂದ ಅರವಿಂದ್ ಸಾವಂತ್​, ನೀವು ಅದು ಹೇಗೆ ಮಹಾರಾಷ್ಟ್ರದಲ್ಲಿ ಓಡಾಡುತ್ತೀರಿ ನೋಡುತ್ತೇನೆ.. ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾರೆ. ಆ ಮಾತುಗಳನ್ನು ಕೇಳಿ ನನಗೇನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ನನ್ನ ಜತೆ ಇನ್ನೊಬ್ಬ ಸಂಸದರು ಇದ್ದರು, ನಾನು ತಿರುಗಿ ಅವರನ್ನು ಕೇಳಿದೆ. ಅರವಿಂದ್ ಸಾವಂತ್ ಮಾತುಗಳನ್ನು ಕೇಳಿಸಿಕೊಂಡಿರಾ? ಎಂದು ಪ್ರಶ್ನಿಸಿದೆ. ಅದಕ್ಕೆ ಅವರೂ ಹೌದು..ನನಗೆ ಕೇಳಿಸಿತು ಎಂದರೆ ಎಂದು ನವನೀತ್​ ತಿಳಿಸಿದ್ದಾರೆ.

ಅರವಿಂದ್​ ಸಾವಂತ್​ ಬೆದರಿಕೆ ಹಾಕುವ ಮೊದಲೂ ನನಗೆ ಶಿವಸೇನೆ ಲೆಟರ್​ ಹೆಡ್​ ಇರುವ ಪತ್ರದಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಕೂಡ ಪೊಲೀಸರು, ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದೇನೆ. ನೀನು ಉದ್ಧವ್ ಠಾಖ್ರೆ ವಿರುದ್ಧ ಮಾತನಾಡುತ್ತಿದ್ದರೆ, ನಿನ್ನ ಸುಂದರವಾದ ಮುಖಕ್ಕೆ ಆ್ಯಸಿಡ್ ಹಾಕುತ್ತೇವೆ. ಆಗ ನಿನಗೆಲ್ಲೂ ಹೊರಹೋಗಲು ಸಾಧ್ಯವಾಗುವುದಿಲ್ಲ ಎಂದೂ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ, ಕರೆ ಮಾಡಿ ಕೂಡ ಇದೇ ರೀತಿಯ ಬೆದರಿಕೆ ಹಾಕಿದ್ದಾರೆ ಎಂದು ನವನೀತ್ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಅಂಥದ್ದೇನು ಮಾತನಾಡಿದ್ದರು ರಾಣಾ? ಮುಕೇಶ್​ ಅಂಬಾನಿಯವರ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯವರನ್ನು ಅಮಾನತು ಮಾಡಿದ್ದರ ಬಗ್ಗೆ ನವನೀತ್​ ಕೌರ್ ರಾಣಾ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು. ಅಷ್ಟೇ ಅಲ್ಲ, ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್​ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪದ ಅನ್ವಯ ಉದ್ಧವ್​ ಠಾಕ್ರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದೂ ಒತ್ತಾಯಿಸಿದ್ದರು.

ನಾನು ಬೆದರಿಕೆ ಹಾಕಿಲ್ಲ ನಾನು ನನ್ನ ಜೀವನದಲ್ಲೇ ಯಾರಿಗೂ ಬೆದರಿಕೆ ಹಾಕಿಲ್ಲ. ಹಾಗಿರುವಾಗ ಒಬ್ಬ ಮಹಿಳೆಗೆ ಬೆದರಿಕೆ ಹಾಕುವುದೆಲ್ಲ ದೂರದ ಮಾತು ಎಂದು ಒಂದು ವಿಡಿಯೋ ಮೆಸೇಜ್​ ಹರಿಬಿಟ್ಟಿದ್ದಾರೆ. ಕೆಲವರು ವಿಚಾರಗಳನ್ನು ತಿರುಚುವುದರಲ್ಲಿ ನಿಸ್ಸೀಮರು. ಅದನ್ನು ರಾಣಾ ಕೂಡ ಮಾಡುತ್ತಾರೆ. 2019ರಲ್ಲಿ ನವನೀತ್​ ವಿರುದ್ಧ ಶಿವಸೇನೆಯ ಆನಂದ್​ರಾವ್​ ಅಡ್ಸೂ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿದ್ದರು. ಅದೇ ಕೋಪದಲ್ಲಿ ನಮ್ಮ ಪಕ್ಷದ ವಿರುದ್ಧ ಅವರು ಆರೋಪ ಮಾಡುತ್ತಾರೆ ಎಂದು ಅರವಿಂದ್ ಸಾವಂತ್​ ಹೇಳಿದ್ದಾರೆ. ಇನ್ನು ರಾಣಾ ಮಾಡಿರುವ ಆ್ಯಸಿಡ್ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ್ಯಸಿಡ್ ಅಟ್ಯಾಕ್​ ಬೆದರಿಕೆ ಹಾಕುವುದು ಅಕ್ಷಮ್ಯ ಅಪರಾಧ. ಅದನ್ನು ಯಾರೇ ಮಾಡಿರಲಿ ನಾನು ವಿರೋಧಿಸುತ್ತೇನೆ. ಈ ವಿಚಾರದಲ್ಲಿ ನವನೀತ್​ ಕೌರ್​ ರಾಣಾ ಬೆಂಬಲಕ್ಕೆ ನಿಲ್ಲುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ನೈಜರ್ ದೇಶದಲ್ಲಿ ಭೀಕರ ಸಾಮೂಹಿಕ ಹತ್ಯಾಕಾಂಡ; ಬೈಕ್​ನಲ್ಲಿ ಬಂದವರು ಗುಂಡು ಹಾರಿಸಿ ಕೊಂದವರ ಸಂಖ್ಯೆ 137

ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್​ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್​