ಯುವಜನತೆಗೆ ಯಾಕೆ ಕೊರೊನಾ ಲಸಿಕೆ ಕೊಡ್ತಿಲ್ಲ, ಮೊದಲು ಅವರಿಗೆ ಕೊಡಿ: ಕೇಂದ್ರಕ್ಕೆ ತಿವಿದ ಕಾಂಗ್ರೆಸ್​ ಸಂಸದ ಮನೀಶ್ ತಿವಾರಿ

| Updated By: ಸಾಧು ಶ್ರೀನಾಥ್​

Updated on: Apr 07, 2021 | 2:22 PM

ಲಸಿಕೆ ವಿತರಣೆ ಬಗ್ಗೆ ಧ್ವನಿ ಎತ್ತಿರುವ ಕಾಂಗ್ರೆಸ್ ಲೋಕಸಭಾ ಸದಸ್ಯ ಮನೀಶ್ ತಿವಾರಿ, ಯುವಜನತೆಗೆ ಕೊರೊನಾ ಲಸಿಕೆ ನೀಡುವಂತೆ ಆಗ್ರಹಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಭೀತಿ ಶುರುವಾಗಿರುವ ಹೊತ್ತಿನಲ್ಲಿ ಯುವಜನತೆಗೆ ಕೊರೊನಾ ಲಸಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುವಜನತೆಗೆ ಯಾಕೆ ಕೊರೊನಾ ಲಸಿಕೆ ಕೊಡ್ತಿಲ್ಲ, ಮೊದಲು ಅವರಿಗೆ ಕೊಡಿ: ಕೇಂದ್ರಕ್ಕೆ ತಿವಿದ ಕಾಂಗ್ರೆಸ್​ ಸಂಸದ ಮನೀಶ್ ತಿವಾರಿ
ಕಾಂಗ್ರೆಸ್ ಲೋಕಸಭಾ ಸದಸ್ಯ ಮನೀಶ್​ ತಿವಾರಿ
Follow us on

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ಹೆಚ್ಚಾಗುತ್ತಿದ್ದು, ಅನೇಕ ರಾಜ್ಯಗಳು ಕಠಿಣ ನಿಯಮಾವಳಿಗಳ ಮೂಲಕ ಕೊರೊನಾ ನಿಯಂತ್ರಿಸುವ ಕ್ರಮಕ್ಕೆ ಮುಂದಾಗಿವೆ. ಜೊತೆಗೆ ಕೊರೊನಾ ಲಸಿಕೆ ವಿತರಣೆಯ ವೇಗವನ್ನೂ ಹೆಚ್ಚಿಸಿದ್ದು 45 ವರ್ಷ ಮೇಲ್ಪಟ್ಟವರು ಸ್ವಯಂಪ್ರೇರಿತರಾಗಿ ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸುತ್ತಿವೆ. ಈ ನಡುವೆಯೇ ಲಸಿಕೆ ವಿತರಣೆ ಬಗ್ಗೆ ಧ್ವನಿ ಎತ್ತಿರುವ ಕಾಂಗ್ರೆಸ್ ಲೋಕಸಭಾ ಸದಸ್ಯ ಮನೀಶ್ ತಿವಾರಿ, ಯುವಜನತೆಗೆ ಕೊರೊನಾ ಲಸಿಕೆ ನೀಡುವಂತೆ ಆಗ್ರಹಿಸಿದ್ದಾರೆ.

ಇದೇ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಮನೀಶ್ ತಿವಾರಿ‌, ಯುವಜನತೆಗೆ ಏಕೆ ಕೊರೊನಾ ಲಸಿಕೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಭೀತಿ ಶುರುವಾಗಿರುವ ಹೊತ್ತಿನಲ್ಲಿ ಯುವಜನತೆಗೆ ಕೊರೊನಾ ಲಸಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದು ತಕ್ಷಣವೇ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಲಸಿಕೆ ಉತ್ಪಾದನೆ
ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲೇ ಕರ್ನಾಟಕದ ಪಾಲಿಗೆ ಶುಭಸುದ್ದಿಯೊಂದು ಸಿಕ್ಕಿದ್ದು ಭಾರತ್ ಬಯೋಟೆಕ್​ ಸಂಸ್ಥೆಯ ಸ್ವದೇಶಿ ಕೊರೊನಾ ಲಸಿಕೆ ಕೊವ್ಯಾಕ್ಸಿನ್​ ಉತ್ಪಾದನಾ ಘಟಕ ಅತೀ ಶೀಘ್ರದಲ್ಲಿ ಕರ್ನಾಟಕದಲ್ಲೇ ಆರಂಭವಾಗಲಿದೆ. ಕರ್ನಾಟಕದ ಕೋಲಾರ ತಾಲ್ಲೂಕಿನ ಮಾಲೂರಿನಲ್ಲಿ ಕೊವ್ಯಾಕ್ಸಿನ್​ ಲಸಿಕೆ ಉತ್ಪಾದನೆ ಘಟಕ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು ಸದ್ಯದಲ್ಲೇ ಆರಂಭಗೊಳ್ಳಲಿದೆ. ಸದ್ಯ ತೆಲಂಗಾಣದ ಹೈದರಾಬಾದ್ ಬಳಿ ಮಾತ್ರ ಉತ್ಪಾದನಾ ಘಟಕ ಹೊಂದಿರುವ ಸಂಸ್ಥೆ ಪ್ರತಿ ತಿಂಗಳು 40 ಲಕ್ಷ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೋಲಾರದಲ್ಲಿ ಆರಂಭವಾಗಲಿರುವ ಘಟಕ ಅದಕ್ಕಿಂತ ಐದು ಪಟ್ಟು ಹೆಚ್ಚಿನ ಲಸಿಕೆ ಉತ್ಪಾದಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಕೊವ್ಯಾಕ್ಸಿನ್ ಲಸಿಕೆಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪೂರೈಕೆಯನ್ನು ಹೆಚ್ಚು ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಭಾರತ್ ಬಯೋಟೆಕ್​ ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯ ಸಿಇಓ ಕೃಷ್ಣ ಎಲ್ಲಾ ಹಾಗೂ ಜಂಟಿ ಎಂ.ಡಿ ಸುಚಿತ್ರಾ ಇಬ್ಬರೂ ಕರ್ನಾಟಕದಲ್ಲೇ ವ್ಯಾಸಂಗ ಮಾಡಿದವರಾಗಿದ್ದು, ಸಂಸ್ಥೆಯ ಉತ್ಪಾದನಾ ಘಟಕ ಕರ್ನಾಟಕದಲ್ಲಿ ಆರಂಭವಾಗುತ್ತಿರುವುದು ವಿಶೇಷವಾಗಿದೆ.

ಇದನ್ನೂ ಓದಿ:
IPL 2021: ಆರ್​ಸಿಬಿಗೆ ಕೊರೊನಾ ಕಂಟಕ: ಪಡಿಕ್ಕಲ್​ ನಂತರ ತಂಡದ ಮತ್ತೊಬ್ಬ ಆಟಗಾರನಿಗೆ ವಕ್ಕರಿಸಿದ ಕೊರೊನಾ 

45 ವರ್ಷ ಮೇಲ್ಪಟ್ಟ, ಕೇಂದ್ರ ಸರ್ಕಾರಿ ನೌಕರರು ಕೊವಿಡ್​-19 ಲಸಿಕೆ ಸ್ವೀಕರಿಸಲು ಸರ್ಕಾರದ ಸೂಚನೆ