ಬಿಜೆಪಿಯೊಂದಿಗೆ ಜಾರ್ಖಂಡ್ ಸರ್ಕಾರವನ್ನು ಉರುಳಿಸಲು ಆರ್‌ಪಿಎನ್ ಸಿಂಗ್ ಯತ್ನಿಸಿದ್ದರು: ಕಾಂಗ್ರೆಸ್ ಶಾಸಕ

| Updated By: ರಶ್ಮಿ ಕಲ್ಲಕಟ್ಟ

Updated on: Jan 25, 2022 | 4:57 PM

RPN Singh ಸಿಂಗ್ ಅವರು ಬಿಜೆಪಿಯೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸಿದ್ದರು ಎಂದು ಟ್ವೀಟ್ ಮಾಡಿದ್ ಕಾಂಗ್ರೆಸ್ ಶಾಸಕ.

ಬಿಜೆಪಿಯೊಂದಿಗೆ ಜಾರ್ಖಂಡ್ ಸರ್ಕಾರವನ್ನು ಉರುಳಿಸಲು ಆರ್‌ಪಿಎನ್ ಸಿಂಗ್ ಯತ್ನಿಸಿದ್ದರು: ಕಾಂಗ್ರೆಸ್ ಶಾಸಕ
ಆರ್‌ಪಿಎನ್ ಸಿಂಗ್
Follow us on

ದೆಹಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್(RPN Singh) ಅವರು ಪಕ್ಷವನ್ನು ತೊರೆದು ಬಿಜೆಪಿ (BJP) ಸೇರಿದ ಕೆಲವೇ ಗಂಟೆಗಳ ನಂತರ, ಜಾರ್ಖಂಡ್ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್, ಸಿಂಗ್ ಅವರು ಬಿಜೆಪಿಯೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸಿದ್ದರು ಎಂದಿದ್ದಾರೆ.  ಈ ಬಗ್ಗೆ ಪಕ್ಷದ ನಾಯಕತ್ವ ಆಗಾಗ್ಗೆ ಎಚ್ಚರಿಕೆ ನೀಡಿತ್ತು ಎಂದು ಪ್ರಸಾದ್ ಟ್ವಿಟರ್‌ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ್ದಾರೆ. “ಜಾರ್ಖಂಡ್‌ನ ಪ್ರತಿಯೊಬ್ಬ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರು (ಸಿಂಗ್) ಬಿಜೆಪಿಗೆ ಹೋಗುತ್ತಿರುವುದಕ್ಕೆ ಸಂತೋಷವಾಗಿದ್ದಾರೆ ಎಂದು ಅಂಬಾ ಪ್ರಸಾದ್ ಹೇಳಿದ್ದಾರೆ.  ಜಾರ್ಖಂಡ್ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಠಾಕೂರ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಸಿಂಗ್ ಅವರ ನಿರ್ಧಾರ “ತಪ್ಪು” ಎಂದು ಹೇಳಿದ್ದಾರೆ.  ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಠಾಕೂರ್, ನಾವು ಕಾಂಗ್ರೆಸ್‌ನ ನಿಜವಾದ ಯೋಧರು, ನಾವು ಇಲ್ಲಿಯೇ ಬದುಕುತ್ತೇವೆ ಮತ್ತು ಸಾಯುತ್ತೇವೆ. ಅವರ ನಿರ್ಧಾರ ತಪ್ಪು ಎಂದು ನಾವು ಭಾವಿಸುತ್ತೇವೆ. ಪಕ್ಷದಿಂದ ಸಿಂಗ್ ಅವರ ನಿರ್ಗಮನವು “ಬೇಸರದ ಸಂಗತಿ” ಎಂದು ಹೇಳಿದ ಠಾಕೂರ್, “ಹಲವು ಉಸ್ತುವಾರಿಗಳು ಬಂದು ಹೋಗಿರುವುದರಿಂದ ಇದು ಪರವಾಗಿಲ್ಲ ಎಂದು ಹೇಳಿದರು. “ಅವರು (ಸಿಂಗ್) ಬಹಳಷ್ಟು ಯೋಚಿಸಿದ ನಂತರ ನಿರ್ಧರಿಸಿರಬೇಕು” ಎಂದು ಜಾರ್ಖಂಡ್ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.


ಸಿಂಗ್ ಅವರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ಘೋಷಿಸಿದರು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಂಗ್, “ಈ ಹೊತ್ತು ನಾವು ನಮ್ಮ ಮಹಾನ್ ಗಣರಾಜ್ಯದ ರಚನೆಯನ್ನು ಆಚರಿಸುತ್ತಿದ್ದೇವೆ, ನಾನು ನನ್ನ ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ .

ಪದ್ರೌನಾದ ರಾಜಾ ಸಾಹೇಬ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಉಸ್ತುವಾರಿ ಅವರು ಈ ಹಿಂದೆ 2012 ರಿಂದ 2014 ರವರೆಗೆ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕೇಸರಿ ಪಾಳಯಕ್ಕೆ ಸೇರುವ ಮುನ್ನ ಬಿಜೆಪಿ ಪ್ರಧಾನ ಕಚೇರಿಗೆಗೆ ತೆರಳಿದ ಸಿಂಗ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನಾನು ಹೊಸ ಆರಂಭವನ್ನು ಎದುರು ನೋಡುತ್ತಿದ್ದೇನೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Depression Tendency: ಕೊವಿಡ್​ನಿಂದ ಮಾನಸಿಕ ಸಮಸ್ಯೆ, ಖಿನ್ನತೆ ಹೆಚ್ಚಾಗುತ್ತಾ: ಇಲ್ಲಿದೆ ತಜ್ಞರ ಉತ್ತರ

Published On - 4:57 pm, Tue, 25 January 22