ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪುಣ್ಯಸ್ಮರಣೆಗೆ ಮಾಣಿಕ್​ಶಾ ಫೊಟೊ ಬಳಕೆ; ಟ್ವಿಟರ್​ನಲ್ಲಿ ಮುಜುಗರ ಅನುಭವಿಸಿದ ಕಾಂಗ್ರೆಸ್

| Updated By: ganapathi bhat

Updated on: Aug 23, 2021 | 12:30 PM

ಹಂಚಿಕೊಂಡಿದ್ದ ಫೊಟೊ ತಪ್ಪಾಗಿ ಎಡವಟ್ಟಾಗಿತ್ತು. ಕಾರಿಯಪ್ಪ ಬದಲು ಮಣಿಕ್​ಶಾ ಅವರ ಫೊಟೊವನ್ನು ಟ್ವೀಟ್​ನಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ನೂರಾರು ಮಂದಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದರು.

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪುಣ್ಯಸ್ಮರಣೆಗೆ ಮಾಣಿಕ್​ಶಾ ಫೊಟೊ ಬಳಕೆ; ಟ್ವಿಟರ್​ನಲ್ಲಿ ಮುಜುಗರ ಅನುಭವಿಸಿದ ಕಾಂಗ್ರೆಸ್
ಸೋನಿಯಾ ಗಾಂಧಿ- ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Follow us on

ಕಾಂಗ್ರೆಸ್ ಪಕ್ಷ ಟ್ವಿಟರ್​ನಲ್ಲಿ ತಪ್ಪಾಗಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ಶನಿವಾರ ನಡೆದಿದೆ. ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಪುಣ್ಯಸ್ಮರಣೆ ಹಂಚಿಕೊಳ್ಳುವ ವೇಳೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್​ಶಾ ಫೊಟೊ ಹಂಚಿಕೊಂಡು ಮುಜುಗರಕ್ಕೆ ಒಳಗಾಗಿದೆ.

ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿದ್ದ ಟ್ವೀಟ್​ನಲ್ಲಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಇಂಡಿಯನ್ ಆರ್ಮಿಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದರು. ಅವರ ಪುಣ್ಯಸ್ಮರಣೆಯ ದಿನದಂದು 1947ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದ ಅವರ ನಾಯಕತ್ವಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಬರೆದುಕೊಂಡಿತ್ತು.

ಈ ವಿವರಗಳು ಸರಿಯಾಗಿಯೇ ಇದ್ದರೂ ಹಂಚಿಕೊಂಡಿದ್ದ ಫೊಟೊ ತಪ್ಪಾಗಿ ಎಡವಟ್ಟಾಗಿತ್ತು. ಕಾರಿಯಪ್ಪ ಬದಲು ಮಣಿಕ್​ಶಾ ಅವರ ಫೊಟೊವನ್ನು ಟ್ವೀಟ್​ನಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ನೂರಾರು ಮಂದಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದರು. ಆ ಬಳಿಕ ಕಾಂಗ್ರೆಸ್ ತಾನು ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿತು.

ಇದನ್ನೂ ಓದಿ: ಕೊವಿಡ್ ಪರಿಹಾರ ಸಾಮಾಗ್ರಿ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಇದಕ್ಕೆಲ್ಲಾ ಹೆದರುವುದಿಲ್ಲ ಎಂದ ಯುವ ಕಾಂಗ್ರೆಸ್ ನಾಯಕ

ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್​ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್​ ಪೊಲೀಸರು

Published On - 7:32 pm, Sat, 15 May 21