ಮುಂದಿನ ವರ್ಷ ಆಗಸ್ಟ್ 15ರ ಮುನ್ನ ಹೊಸ ಸಂಸತ್ ಭವನ ನಿರ್ಮಾಣ ಪೂರ್ಣ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ

Lok Sabha speaker Om Birla: ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ ಪ್ಲೆಕಾರ್ಡ್‌ಗಳನ್ನು ಹಿಡಿದು, ಲೋಕಸಭೆಯ ಅಂಗಳದಲ್ಲಿ ಘೋಷಣೆಗಳನ್ನು ಕೂಗುವುದು ಸದನದ ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದರು.

ಮುಂದಿನ ವರ್ಷ ಆಗಸ್ಟ್ 15ರ ಮುನ್ನ ಹೊಸ ಸಂಸತ್ ಭವನ ನಿರ್ಮಾಣ ಪೂರ್ಣ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ
ಓಂ ಬಿರ್ಲಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 11, 2021 | 1:32 PM

ದೆಹಲಿ: ಹೊಸ ಸಂಸತ್ ಭವನದ ನಿರ್ಮಾಣವು ಮುಂದಿನ ವರ್ಷ ಆಗಸ್ಟ್ 15 ರ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಅದೇ ವೇಳೆ ಮುಂಗಾರು ಅಧಿವೇಶನದಲ್ಲಿ ಸದನ ಸುಗಮವಾಗಿ ನಡೆಯಲಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ನೋವು ವ್ಯಕ್ತಪಡಿಸಿದರು.

ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ಲೆಕಾರ್ಡ್‌ಗಳನ್ನು ಹಿಡಿದು, ಲೋಕಸಭೆಯ ಅಂಗಳದಲ್ಲಿ ಘೋಷಣೆಗಳನ್ನು ಕೂಗುವುದು ಸದನದ ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದರು.

ಇಡೀ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯು ಕೇವಲ 21 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು ಮತ್ತು ಅದರ ಕಾರ್ಯನಿರ್ವಹಣೆ ಶೇಕಡಾ 22 ರಷ್ಟಿತ್ತು ಎಂದು ಬಿರ್ಲಾ ಹೇಳಿದರು. ಆಗಸ್ಟ್ 13 ರಂದು ಮುಂಗಾರು ಅಧಿವೇಶನವನ್ನು ಅಂತ್ಯಗೊಳ್ಳಲಿದ್ದು, ಇಂದು ಗದ್ದಲದ ನಡುವೆಯೇ ಲೋಕಸಭಾ ಕಲಾಪವನ್ನು ಮುಂದೂಡಲಾಯಿತು.

ಜುಲೈ 19 ರಂದು ಅಧಿವೇಶನ ಆರಂಭವಾದಾಗಿನಿಂದ ಪೆಗಾಸಸ್ ಬೇಹುಗಾರಿಕೆ ವಿವಾದ, ಕೃಷಿ ಕಾನೂನುಗಳು ಮತ್ತು ಇತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟಿಸಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದವು.

ಪ್ರಶ್ನೋತ್ತರ ಅವಧಿಯು ಈ ಅಧಿವೇಶನದ ಹೆಚ್ಚಿನ ದಿನಗಳಲ್ಲಿ ಅಡಚಣೆಗಳಿಗೆ ಸಾಕ್ಷಿಯಾಯಿತು ಆದರೆ ಸದನವು ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಒಳಗೊಂಡಂತೆ ರಾಜ್ಯಗಳ ಒಬಿಸಿ ಪಟ್ಟಿಗಳನ್ನು ಮಾಡಲು ಅನುಮತಿಸುವ ವಿಧೇಯಕಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ:  ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು

(Construction New Parliament building to be ready by Aug 15 next year says Lok Sabha speaker Om Birla)

Published On - 1:27 pm, Wed, 11 August 21