ಮಕ್ಕಳಿಗೂ ಶೀಘ್ರ ಕೊರೊನಾ ಲಸಿಕೆ: ಕೊವ್ಯಾಕ್ಸಿನ್ ನೀಡಲು ಡಿಸಿಜಿಐ ಅನುಮತಿ
12ರಿಂದ 18 ವರ್ಷದ ಮಕ್ಕಳಿಗೆ ಭಾರತ್ ಬಯೊಟೆಕ್ನ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ.
ದೆಹಲಿ: ಭಾರತದಲ್ಲಿ ಮಕ್ಕಳಿಗೂ ಶೀಘ್ರ ಲಸಿಕೆ ನೀಡಲು ಭಾರತೀಯ ಔಷಧ ಮಹಾ ನಿಯಂತ್ರಕರು (Drugs Controller General of India – DCGI) ಶನಿವಾರ (ಡಿ.25) ಅನುಮತಿ ನೀಡಿದ್ದಾರೆ. 12ರಿಂದ 18 ವರ್ಷದ ಮಕ್ಕಳಿಗೆ ಭಾರತ್ ಬಯೊಟೆಕ್ನ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ.
ಲಸಿಕೆಯನ್ನು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡಲು ಸರ್ಕಾರ ಅನುಮತಿ ನೀಡಿಲ್ಲ. ಸರ್ಕಾರವು ಈ ಮೊದಲು ಝೈಡಸ್ ಕ್ಯಾಡಿಲಾ ಕಂಪನಿಯ ಜೈಕೊವ್-2ಡಿ (ZyCoV-D) ಲಸಿಕೆಯನ್ನು ಈ ಮೊದಲೇ ಡಿಸಿಜಿಐ ಬಳಕೆಗೆ ಅನುಮತಿ ನೀಡಿತ್ತು.
ಲಸಿಕೆಯನ್ನು ಮಕ್ಕಳಿಗೆ ನೀಡುವ ಸಂಬಂಧ ಸರ್ಕಾರವು ಇನ್ನೂ ಆದೇಶ ಹೊರಡಿಸಬೇಕಿದೆ. ಮಕ್ಕಳಿಗೆ ನೀಡುವ ಇತರ ಲಸಿಕೆಗಳ ಜೊತೆಗೆ ಕೊವಿಡ್ ಲಸಿಕೆಯನ್ನು ಹೊಂದಿಸಬೇಕಿದೆ. ಈ ಸಂಬಂಧ ವಿವರವಾದ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ.
ಭಾರತ್ ಬಯೊಟೆಕ್ನ ಕೊವ್ಯಾಕ್ಸಿನ್ ಎರಡು ಡೋಸ್ಗಳ ಲಸಿಕೆಯಾಗಿದೆ. ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಜೈಕೋವ್-2ಡಿ ಮೂರು ಡೋಸ್ಗಳ ಲಸಿಕೆಯಾಗಿದೆ.
Published On - 9:18 pm, Sat, 25 December 21