ದೇಶದಲ್ಲಿ ಕೋಟಿಯತ್ತ ಕೊರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣ ಸಮಾಧಾನಕರ
ನವದೆಹಲಿ: ಕಳೆದ 24ಗಂಟೆಯಲ್ಲಿ ದೇಶದಲ್ಲಿ 46,232 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೋವಿಡ್ -19 ಸೋಂಕಿತರ ಸಂಖ್ಯೆ 90,50,597 (90.50 ಲಕ್ಷ)ಕ್ಕೆ ಏರಿಕೆಯಾಗಿದೆ. ಹಾಗೇ ಒಂದು ದಿನದಲ್ಲಿ 564 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,32, 726ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ ರಿಕವರಿ ರೇಟ್ ಶೇ. 93.67 ಇನ್ನು 24 ಗಂಟೆಯಲ್ಲಿ 49,715 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಕೇವಲ 4,39,747 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೆ ಕೊರೊನಾದಿಂದ ಮುಕ್ತರಾದವರ […]
ನವದೆಹಲಿ: ಕಳೆದ 24ಗಂಟೆಯಲ್ಲಿ ದೇಶದಲ್ಲಿ 46,232 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೋವಿಡ್ -19 ಸೋಂಕಿತರ ಸಂಖ್ಯೆ 90,50,597 (90.50 ಲಕ್ಷ)ಕ್ಕೆ ಏರಿಕೆಯಾಗಿದೆ. ಹಾಗೇ ಒಂದು ದಿನದಲ್ಲಿ 564 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,32, 726ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದ ರಿಕವರಿ ರೇಟ್ ಶೇ. 93.67 ಇನ್ನು 24 ಗಂಟೆಯಲ್ಲಿ 49,715 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಕೇವಲ 4,39,747 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೆ ಕೊರೊನಾದಿಂದ ಮುಕ್ತರಾದವರ ಸಂಖ್ಯೆ 84, 78, 124. ಸದ್ಯ ದೇಶದ ರಿಕವರಿ ರೇಟ್ ಶೇ.93.67 ಮತ್ತು ಸಾವಿನ ದರ ಶೇ.1.47ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ನವೆಂಬರ್ 20ರವರೆಗೆ ಒಟ್ಟಾರೆ 13.06 ಕೋಟಿ ಜನರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿದೆ. 24 ಗಂಟೆಯಲ್ಲಿ 564 ಮಂದಿ ಮೃತಪಟ್ಟಿದ್ದು, ಅದರಲ್ಲಿ 155 ಸಾವು ಮಹಾರಾಷ್ಟ್ರ, 118 ದೆಹಲಿ, 50 ಪಶ್ಚಿಮ ಬಂಗಾಳ, 28 ಕೇರಳ, 25 ಹರ್ಯಾಣ, 20 ಉತ್ತರ ಪ್ರದೇಶದಿಂದ ವರದಿಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ ನೋಡಿದರೂ ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.