ದೆಹಲಿ: ಹೊಸತು ಕೊವಿಡ್ ಪ್ರಕರಣಗಳು ಅಥವಾ ಕೊವಿಡ್-19 (Covid-19) ಪ್ರಕರಣಗಳ ಕ್ಲಸ್ಟರ್ ವರದಿ ಮಾಡುವ ಪ್ರದೇಶಗಳಲ್ಲಿ ಉನ್ನತ ಮಟ್ಟದ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೇಳಿದೆ. ಅದೇ ವೇಳೆ ಕೊವಿಡ್ ರೋಗವನ್ನು ಎದುರಿಸುವುದಕ್ಕಾಗಿ ಐದು ತಂತ್ರಗಳನ್ನು ಅನುಸರಿಸುವ ಅಗತ್ಯವನ್ನು ಒತ್ತಿಹೇಳಿದೆ. ಟೆಸ್ಟ್-ಟ್ರ್ಯಾಕ್-ಟ್ರೀಟ್, ವ್ಯಾಕ್ಸಿನೇಷನ್ ಮತ್ತು ಕೊವಿಡ್ ಸೂಕ್ತವಾದ ನಡವಳಿಕೆ- ಇವೇ ಆ ಐದು ತಂತ್ರಗಳು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan), ಕಳೆದ ನಾಲ್ಕು ತಿಂಗಳಲ್ಲಿ ದೇಶಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಮತ್ತು ಗಮನಾರ್ಹ ಇಳಿಕೆ ಕಂಡುಬಂದಿದ್ದರೂ ಕಳೆದ ಎರಡು ವಾರಗಳಲ್ಲಿ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದಿದ್ದಾರೆ. ಜೂನ್ 1 ಕ್ಕೆ ಕೊನೆಗೊಂಡ ವಾರದಲ್ಲಿ 2,663 ಸರಾಸರಿ ದೈನಂದಿನ ಪ್ರಕರಣಗಳು ವರದಿ ಆಗಿದ್ದು ಜೂನ್ 8 ಕ್ಕೆ ಕೊನೆಗೊಂಡ ವಾರದಲ್ಲಿ 4,207 ಸರಾಸರಿ ದೈನಂದಿನ ಹೊಸ ಪ್ರಕರಣಗಳು ವರದಿ ಆಗಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರದಲ್ಲಿ 0.63 ಶೇಕಡಾ (ಜೂನ್ 1 ಕ್ಕೆ ಕೊನೆಗೊಳ್ಳುವ ವಾರ) ನಿಂದ ಶೇಕಡಾ 1.12 ಕ್ಕೆ (ಜೂನ್ 8 ಕ್ಕೆ ಕೊನೆಗೊಳ್ಳುವ ವಾರ) ಹೆಚ್ಚಳವಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 7,240 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ ಶೇ 81 ಪ್ರಕರಣಗಳು ಮಹಾರಾಷ್ಟ್ರ, ಕೇರಳ, ದೆಹಲಿ ಮತ್ತು ಕರ್ನಾಟಕದಿಂದ ವರದಿಯಾಗಿವೆ.
Union Health Secy Rajesh Bhushan writes to all States/UTs: In past 2 weeks, an upsurge in #COVID19 cases has been noticed. States/UTs must not lower their guard & continue working towards building on progress made thus far to bring pandemic situation under control.
(File pic) pic.twitter.com/yKyja0IlrA
— ANI (@ANI) June 9, 2022
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರೀಕ್ಷೆ ಮತ್ತು ನಿಗಾ, ಕ್ಲಿನಿಕಲ್ ಮ್ಯಾನೇಜ್ಮೆಂಟ್, ವ್ಯಾಕ್ಸಿನೇಷನ್, ಕೊವಿಡ್ ಸೂಕ್ತವಾದ ನಡವಳಿಕೆ ಮತ್ತು ಸಮುದಾಯದ ಭಾಗವಹಿಸುವಿಕೆ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕು. “ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ಸೋಂಕಿನ ಹರಡುವಿಕೆಯ ಮಟ್ಟದ ನಿಖರವಾದ ಚಿತ್ರವನ್ನು ಒದಗಿಸುವಲ್ಲಿ ಸಾಕಷ್ಟು ಪರೀಕ್ಷೆಯ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಹೊಸ ಪ್ರಕರಣಗಳು / ಪ್ರಕರಣಗಳ ಕ್ಲಸ್ಟರ್ ಅನ್ನು ವರದಿ ಮಾಡುವ ಎಲ್ಲಾ ಪ್ರದೇಶಗಳಲ್ಲಿ ರಾಜ್ಯಗಳು / ಯುಟಿಗಳು ಉನ್ನತ ಮಟ್ಟದ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ