ಮೇಘನಾ ಕುಟುಂಬ ಕೊವಿಡ್ ಸಂದರ್ಭದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ವಿವರಿಸಿದ ಸುಂದರ್ ರಾಜ್
ಸುಂದರ್ ರಾಜ್ ಹಾಗೂ ಮನೆಯ ಇತರ ಸದಸ್ಯರೂ ಕೊವಿಡ್ನಿಂದ ಸಮಸ್ಯೆ ಎದುರಿಸಿದರು. ಈ ಬಗ್ಗೆ ಸುಂದರ್ ರಾಜ್ ಮಾತನಾಡಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಅನೇಕರು ತೊಂದರೆಗೆ ಒಳಗಾದರು. ಇದಕ್ಕೆ ಮೇಘನಾ ರಾಜ್ (Meghana Raj) ಕುಟುಂಬ ಕೂಡ ಹೊರತಾಗಿಲ್ಲ. ಆಗಷ್ಟೇ ರಾಯನ್ ಜನಿಸಿದ್ದ. ಈ ಸಂದರ್ಭದಲ್ಲಿ ಮೇಘನಾಗೆ ಕೊವಿಡ್ ಅಂಟಿತ್ತು. ಇದರಿಂದ ಅವರ ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸುಂದರ್ ರಾಜ್ (Sundar Raj) ಹಾಗೂ ಮನೆಯ ಇತರ ಸದಸ್ಯರೂ ಕೊವಿಡ್ನಿಂದ ಸಮಸ್ಯೆ ಎದುರಿಸಿದರು. ಈ ಬಗ್ಗೆ ಸುಂದರ್ ರಾಜ್ ಮಾತನಾಡಿದ್ದಾರೆ. ‘ಕೊವಿಡ್ ಸಂದರ್ಭದಲ್ಲಿ ನಾವು ಸಾಕಷ್ಟು ತೊಂದರೆ ಅನುಭವಿಸಿದೆವು. ಒಂದೇ ದಿನ ನಾಲ್ಕು ಜನರಿಗೆ ಕೊರೊನಾ ಅಂಟಿತ್ತು. ಇದರಿಂದ ನಾವು ನಾಲ್ಕು ಜನ ಬೇರೆಬೇರೆ ಕಡೆ ಉಳಿದುಕೊಳ್ಳಬೇಕಾಯಿತು. ಮಗುವನ್ನು ಮುಟ್ಟುವ ಹಾಗೆ ಇರಲಿಲ್ಲ’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.