ದೇಶದಲ್ಲಿ ಜ.23ರ ಹೊತ್ತಿಗೆ ಕೊವಿಡ್​ 19 ಅಲೆ ಉತ್ತುಂಗಕ್ಕೆ; ಆದರೂ ಒಂದು ಸಮಾಧಾನಕರ ಸಂಗತಿ ಹೇಳಿದ ವಿಜ್ಞಾನಿಗಳು

ಜನವರಿ 11ನೇ ತಾರೀಖಿನವರಿಗಿನ ಅಂಕಿ-ಅಂಶಗಳನ್ನು ಒಳಗೊಂಡ ಕೊವಿಡ್​ 19 ಪಥವನ್ನು ಗಮನಿಸಿದಾಗ, ಜನವರಿ 23ರ ಸುಮಾರಿಗೆ ದಿನಕ್ಕೆ ಸುಮಾರು 7.2 ಲಕ್ಷ ಕೇಸ್​ಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿತ್ತು.

ದೇಶದಲ್ಲಿ ಜ.23ರ ಹೊತ್ತಿಗೆ ಕೊವಿಡ್​ 19 ಅಲೆ ಉತ್ತುಂಗಕ್ಕೆ; ಆದರೂ ಒಂದು ಸಮಾಧಾನಕರ ಸಂಗತಿ ಹೇಳಿದ ವಿಜ್ಞಾನಿಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 19, 2022 | 9:06 AM

ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಜನವರಿ 23ರ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ. ಆದರೆ ಒಂದು ದಿನದಲ್ಲಿ ಪತ್ತೆಯಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಲಾರದು ಎಂದು  ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲಿ ಸದ್ಯದ ಕೊವಿಡ್ 19 ಸ್ಥಿತಿಗತಿ, ಪಾಸಿಟಿವಿಟಿ ರೇಟ್ ಇತ್ಯಾದಿ ಅಧ್ಯಯನ ಮಾಡಿದ ಬಳಿಕ ವರದಿ ನೀಡಿದ ಅವರು, ದೆಹಲಿ, ಮುಂಬೈಗಳಲ್ಲಿ ಜನವರಿ ಎರಡನೇ ವಾರದಲ್ಲಿಯೇ ಕೊರೊನಾ ಉತ್ತುಂಗಕ್ಕೆ ಏರಿತ್ತು.  ಕೊವಿಡ್​ 19 ಸಾಂಕ್ರಾಮಿಕ ಶುರುವಾದಾಗಿನಿಂದಲೂ ಸಂಖ್ಯೆ ಪತ್ತೆಮಾಡಲು ಬಳಕೆಯಾಗುತ್ತಿರುವ ಸೂತ್ರ ಮಾದರಿ ಟ್ರ್ಯಾಕರ್​ ಒಕ್ಕೂಟದಲ್ಲಿ ಸಂಶೋಧಕರಾಗಿರುವ ಐಐಟಿ ಪ್ರಾಧ್ಯಾಪಕ ಮಣೀಂದರ್ ಅಗರ್​​ವಾಲ್​, ಕೊವಿಡ್​ 19 ಪಥ ದೇಶಾದ್ಯಂತ ಬದಲಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಆದವರಲ್ಲಿ ಒಮಿಕ್ರಾನ್​ ಸೋಂಕು ಕಾಣಿಸುತ್ತಿದೆ ಎಂದಿದ್ದಾರೆ.

ಇನ್ನು ರಾಜ್ಯಾವಾರು ಕೊವಿಡ್​ 19 ಕೇಸ್​ಗಳ ಬಗ್ಗೆ ಮಾಹಿತಿ ನೀಡಿದ ಅವರು, ಯಾವ್ಯಾವ ರಾಜ್ಯಗಳು ಯಾವಾಗ ಕೊವಿಡ್ 19 ಮೂರನೇ ಅಲೆಯ ಉತ್ತುಂಗಕ್ಕೆ ತಲುಪಿವೆ ಎಂಬುದನ್ನು ತಿಳಿಸಿದ್ದಾರೆ. ಅದರಂತೆ ಮುಂಬೈನಲ್ಲಿ ಜನವರಿ 12ರಂದು ಅತ್ಯಂತ ಹೆಚ್ಚು ಪ್ರಮಾಣದ ಸೋಂಕು ದಾಖಲಾಗಿತ್ತು. ದೆಹಲಿ ಜನವರಿ 16ರಂದು, ಕೋಲ್ಕತ್ತ ಜನವರಿ 13, ಮಹಾರಾಷ್ಟ್ರ, ಗುಜರಾತ್​, ಉತ್ತರಪ್ರದೇಶಗಳು ಇಂದು (19)ರಂದು ಉತ್ತುಂಗವನ್ನು ತಲುಪಲಿದೆ. ಹಾಗೇ, ಬೆಂಗಳೂರಿನಲ್ಲಿ ಜನವರಿ 22ರಂದು ಅತ್ಯಂತ ಹೆಚ್ಚು ಕೇಸ್​ಗಳು ದಾಖಲಾಗಲಿವೆ ಎಂದೂ ಮಾಹಿತಿ ನೀಡಿದ್ದಾರೆ.   ಕೊರೊನಾ ಪ್ರಸರಣ ವೇಗ ಹೆಚ್ಚುತ್ತಿರುವ ನಡುವೆಯೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತುಂಬ ಕಡಿಮೆ ಇದೆ. ಉತ್ತರಪ್ರದೇಶದಲ್ಲಂತೂ ಶೇ.1ಕ್ಕಿಂತ ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗರ್​ವಾಲ್ ಮಾಹಿತಿ ನೀಡಿದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಮಣೀಂದರ್​ ಅಗರ್​ವಾಲ್​, ಜನವರಿ 11ನೇ ತಾರೀಖಿನವರಿಗಿನ ಅಂಕಿ-ಅಂಶಗಳನ್ನು ಒಳಗೊಂಡ ಕೊವಿಡ್​ 19 ಪಥವನ್ನು ಗಮನಿಸಿದಾಗ, ಜನವರಿ 23ರ ಸುಮಾರಿಗೆ ದಿನಕ್ಕೆ ಸುಮಾರು 7.2 ಲಕ್ಷ ಕೇಸ್​ಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯದ ಪಥ ಗಮನಿಸಿದಾಗ ಏಳು ಲಕ್ಷವಲ್ಲ, ಜ.23ರ ಹೊತ್ತಿಗೆ ಭಾರತದಲ್ಲಿ ದಿನದ ಸೋಂಕಿತರ ಸಂಖ್ಯೆ 4 ಲಕ್ಷವೂ ದಾಟುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಇದೊಂದು ಸಮಾಧಾನಕರ ಸಂಗತಿ.

ಭಾರತದಲ್ಲಿ ಮಂಗಳವಾರ 2.38 ಕೊರೊನಾ ಕೇಸ್​ಗಳೂ ದಾಖಲಾಗಿವೆ. ಹಾಗೇ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಕೇಸ್​ಗಳಲ್ಲಿ ಇಳಿಮುಖವಾಗುತ್ತಿದೆ.  ಮಂಗಳವಾರ ದೆಹಲಿಯಲ್ಲಿ 11,684, ಸೋಮವಾರ 12, 527 ಕೇಸ್​ಗಳು ದಾಖಲಾಗಿದ್ದವು.  ಆದರೆ ಕರ್ನಾಟಕದಲ್ಲಿ ನಿನ್ನೆ 41ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಕೌತುಕ ಮೂಡಿಸಿದ ‘19.20.21’ ಕನ್ನಡ ಸಿನಿಮಾ; ಮಂಸೋರೆ ಹೊಸ ಚಿತ್ರ ಅನೌನ್ಸ್​

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್