ಹಸುಗಳಿಂದ ತುಳಿಸಿಕೊಳ್ಳುವ ಭಕ್ತರು; ಮಧ್ಯಪ್ರದೇಶದಲ್ಲಿದೆ ಈ ವಿಶಿಷ್ಟವಾದ ದೀಪಾವಳಿ ಸಂಪ್ರದಾಯ

ದೀಪಾವಳಿಯ ಎರಡನೇ ದಿನದಂದು, ಬೆಳಿಗ್ಗೆ ಪೂಜೆ ಮಾಡವಾಗುತ್ತದೆ. ನಂತರ ಜನರು ಡೋಲುಗಳೊಂದಿಗೆ ಗ್ರಾಮವನ್ನು ಸುತ್ತುತ್ತಾರೆ. ಈ ಸಮಯದಲ್ಲಿ, ಗ್ರಾಮದ ಎಲ್ಲಾ ಹಸುಗಳನ್ನು ಒಂದೇ ಸ್ಥಳದಲ್ಲಿ ಕರೆತರಲಾಗುತ್ತದೆ. ಜನರು ನೆಲದ ಮೇಲೆ ಮಲಗುತ್ತಾರೆ. ಹಸುಗಳು ಅವರನ್ನು ತುಳಿದು ಹೋಗುವಂತೆ ಮಾಡಲಾಗುತ್ತದೆ.

ಹಸುಗಳಿಂದ ತುಳಿಸಿಕೊಳ್ಳುವ ಭಕ್ತರು; ಮಧ್ಯಪ್ರದೇಶದಲ್ಲಿದೆ ಈ ವಿಶಿಷ್ಟವಾದ ದೀಪಾವಳಿ ಸಂಪ್ರದಾಯ
ಮಧ್ಯ ಪ್ರದೇಶದಲ್ಲಿ ವಿಶಿಷ್ಟ ಸಂಪ್ರದಾಯ
Follow us
ರಶ್ಮಿ ಕಲ್ಲಕಟ್ಟ
|

Updated on: Nov 13, 2023 | 5:34 PM

ಉಜ್ಜಯಿನಿ (ಮಧ್ಯಪ್ರದೇಶ) ನವೆಂಬರ್ 13: “ಮಧ್ಯಪ್ರದೇಶ್ ಅಜಬ್ ಹೈ, ಸಬ್ಸೆ ಗಜಬ್ ಹೈ” (ಮಧ್ಯ ಪ್ರದೇಶ (Madhya Pradesh) ವಿಚಿತ್ರವಾಗಿದೆ, ಅತ್ಯಂತ ಅದ್ಭುತವಾಗಿದೆ) ಎಂಬುದು ರಾಜ್ಯದ ನಾಗರಿಕರ ಜನಪ್ರಿಯ ಘೋಷಣೆ.ಈ ಬಾರಿ ಉಜ್ಜಯಿನಿ (Ujjain) ಜಿಲ್ಲೆಯಲ್ಲಿ ಇದು ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಅಲ್ಲಿ ದೀಪಾವಳಿ (Diwali) ಸಂದರ್ಭದಲ್ಲಿ ಭಕ್ತರು ಹಸುಗಳಿಂದ ತುಳಿಸಿಕೊಳ್ಳುತ್ತಾರೆ. ಈ ವಿಶಿಷ್ಟ ಸಂಪ್ರದಾಯವು ಜಿಲ್ಲಾ ಕೇಂದ್ರದಿಂದ 75 ಕಿಲೋಮೀಟರ್ ದೂರದಲ್ಲಿರುವ ಬದ್‌ನಗರ ತಹಸಿಲ್‌ನ ಭಿದವಾಡ್ ಗ್ರಾಮದಲ್ಲಿ ಸೋಮವಾರ ಈ ಸಂಪ್ರದಾಯ ನಡೆದಿದೆ.

ದೀಪಾವಳಿ ಹಬ್ಬದ ನಂತರ ಬೆಳಗ್ಗೆ ಇಲ್ಲಿ ಧಾರ್ಮಿಕ ವಿಧಿವಿಧಾನವನ್ನು ನಡೆಸಲಾಗುತ್ತಿದ್ದು, ಈ ಆಚರಣೆಯನ್ನು ಮಾಡುವುದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ. ಸ್ಥಳೀಯರ ಪ್ರಕಾರ, ಬೆಳಿಗ್ಗೆ ಗ್ರಾಮದಲ್ಲಿ ಗೋವುಗಳನ್ನು ಪೂಜಿಸಲಾಯಿತು. ನಂತರ ಉದ್ದಕ್ಕೆ ಮಲಗಿದ ಭಕ್ತರ ಮೇಲೆ ಹಸುಗಳನ್ನು ಬಿಡಲಾಗುತ್ತದೆ. 33 ಕೋಟಿ ದೇವತೆಗಳು ಗೋವುಗಳಲ್ಲಿ ನೆಲೆಸಿದ್ದಾರೆ ಎಂದು ಜನರು ನಂಬುತ್ತಾರೆ. ಗೋವುಗಳು ತಮ್ಮ ಮೈ ಮೇಲೆ ನಡೆಯಲು ಅವಕಾಶ ನೀಡುವುದರಿಂದ ದೇವರ ಆಶೀರ್ವಾದ ಪಡೆಯಬಹುದೆಂಬುದು ನಂಬಿಕೆ .

ಇದರ ಜೊತೆಗೆ, ಈ ಸಂಪ್ರದಾಯದಲ್ಲಿ ಭಾಗವಹಿಸುವವರು ಮತ್ತೊಂದು ಹಳೆಯ ಸಂಪ್ರದಾಯವನ್ನು ಅನುಸರಿಸಬೇಕು. ಅದೇನೆಂದರೆ ಭಕ್ತರು ಐದು ದಿನಗಳ ಕಾಲ ಉಪವಾಸ ಮಾಡುತ್ತಾರೆ. ದೀಪಾವಳಿಯ ಒಂದು ದಿನ ಮೊದಲು ಅವರು ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಇರುತ್ತಾರೆ. ಅಲ್ಲಿ ಭಜನೆ, ಕೀರ್ತನೆಗಳನ್ನೂ ಮಾಡುತ್ತಾರೆ.

ದೀಪಾವಳಿಯ ಎರಡನೇ ದಿನದಂದು, ಬೆಳಿಗ್ಗೆ ಪೂಜೆ ಮಾಡವಾಗುತ್ತದೆ. ನಂತರ ಜನರು ಡೋಲುಗಳೊಂದಿಗೆ ಗ್ರಾಮವನ್ನು ಸುತ್ತುತ್ತಾರೆ. ಈ ಸಮಯದಲ್ಲಿ, ಗ್ರಾಮದ ಎಲ್ಲಾ ಹಸುಗಳನ್ನು ಒಂದೇ ಸ್ಥಳದಲ್ಲಿ ಕರೆತರಲಾಗುತ್ತದೆ. ಜನರು ನೆಲದ ಮೇಲೆ ಮಲಗುತ್ತಾರೆ. ಹಸುಗಳು ಅವರನ್ನು ತುಳಿದು ಹೋಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: ಆಂಧ್ರಪ್ರದೇಶದ ಈ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದ ಇಲ್ಲ ದೀಪಾವಳಿ ಆಚರಣೆ

ಗೋವುಗಳು ಸಾಗಿದ ನಂತರ ಭಕ್ತರು ಎದ್ದು ನಿಂತು ಡೊಳ್ಳು ಬಾರಿಸುವ ಮೂಲಕ ಕುಣಿದು ಕುಪ್ಪಳಿಸುವ ಮೂಲಕ ಇಡೀ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಯಿತು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ಬರುತ್ತಾರೆ ಎಂದು ಎನ್​​​ಡಿಟಿವಿ ವರದಿ ಮಾಡಿದೆ. ಸ್ಥಳೀಯರು ಹೇಳಿಕೊಂಡಂತೆ ಈ ಸಾಂಪ್ರದಾಯಿಕ ಆಚರಣೆಯಲ್ಲಿ ಯಾವುದೇ ಭಕ್ತರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ