ಲಕ್ಷ್ಮೀ ದೇವಿಗೆ ನಾಲ್ಕು ಕೈಗಳಿರಲು ಹೇಗೆ ಸಾಧ್ಯ? ವಿವಾದ ಸೃಷ್ಟಿಸಿದ ಎಸ್​​​ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆ

ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆ ಗದ್ದಲಕ್ಕೆ ಕಾರಣವಾಗಿದ್ದು, ಹಲವು ರಾಜಕೀಯ ನಾಯಕರು ಮೌರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಲಕ್ಷ್ಮೀ ದೇವಿಗೆ ನಾಲ್ಕು ಕೈಗಳಿರಲು ಹೇಗೆ ಸಾಧ್ಯ? ವಿವಾದ ಸೃಷ್ಟಿಸಿದ ಎಸ್​​​ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆ
ಸ್ವಾಮಿ ಪ್ರಸಾದ್ ಮೌರ್ಯ
Follow us
Ganapathi Sharma
|

Updated on: Nov 13, 2023 | 7:23 PM

ನವದೆಹಲಿ, ನವೆಂಬರ್ 13: ‘ಮನುಷ್ಯರು ಎರಡಕ್ಕಿಂತ ಹೆಚ್ಚು ಕೈಗಳನ್ನು ಹೊಂದಿರುವುದಿಲ್ಲ. ಹೀಗಿದ್ದಾಗ ಲಕ್ಷ್ಮೀ ದೇವಿಯು ನಾಲ್ಕು ಕೈಗಳೊಂದಿಗೆ ಹೇಗೆ ಜನ್ಮ ತಾಳಲು ಸಾಧ್ಯ’ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swamy Prasad Maurya) ಪ್ರಶ್ನಿಸಿದ್ದು, ವಿವಾದಕ್ಕೆ ಗ್ರಾಸವಾಗಿದೆ. ದೀಪಾವಳಿ ಹಬ್ಬದ (Deepavali Festival) ದಿನವೇ ಅವರು ಹಿಂದೂ ದೇವರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಸ್ವಾಮಿ ಪ್ರಸಾದ್ ಮೌರ್ಯ ಹಲವು ಬಾರಿ ಹಿಂದೂ ಧರ್ಮದ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದರು.

ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆ ಗದ್ದಲಕ್ಕೆ ಕಾರಣವಾಗಿದ್ದು, ಹಲವು ರಾಜಕೀಯ ನಾಯಕರು ಮೌರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೀಪಾವಳಿಯಂದು ಪತ್ನಿಯನ್ನು ಪೂಜಿಸುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೌರ್ಯ, ಹೆಂಡತಿ ತನ್ನ ಕುಟುಂಬವನ್ನು ಪೋಷಿಸುವ, ಸಂತೋಷ ಹರಡುವ ಮತ್ತು ಕಾಳಜಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಮನೆಯ “ನಿಜವಾದ ಲಕ್ಷ್ಮೀ” ಎಂದು ಹೇಳಿದ್ದರು.

ಮುಂದುವರಿದು, ‘ದೀಪಾವಳಿ ಪ್ರಯುಕ್ತ ಪತ್ನಿಗೆ ಪೂಜೆ ಸಲ್ಲಿಸಿ ಸನ್ಮಾನಿಸಿದೆ. ಇಡೀ ಜಗತ್ತಿನ ಎಲ್ಲ ಧರ್ಮ, ಜಾತಿ, ಜನಾಂಗ, ಬಣ್ಣ, ದೇಶಗಳಲ್ಲಿ ಹುಟ್ಟುವ ಪ್ರತಿ ಮಗುವಿಗೆ ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಣ್ಣು, ಮೂಗು ಇವೆ. ತಲೆ, ಹೊಟ್ಟೆ ಮತ್ತು ಬೆನ್ನು ಮಾತ್ರ ಇದೆ. ನಾಲ್ಕು ಕೈಗಳು, ಎಂಟು ಕೈಗಳು, ಹತ್ತು ಕೈಗಳು, ಇಪ್ಪತ್ತು ಕೈಗಳು ಮತ್ತು ಸಾವಿರ ಕೈಗಳಿರುವ ಮಗು ಇಲ್ಲಿಯವರೆಗೆ ಹುಟ್ಟಿಲ್ಲವಾದರೆ, ಲಕ್ಷ್ಮೀ ನಾಲ್ಕು ಕೈಗಳೊಂದಿಗೆ ಹೇಗೆ ಹುಟ್ಟುತ್ತಾಳೆ? ನೀವು ಲಕ್ಷ್ಮೀ ದೇವಿಯನ್ನು ಪೂಜಿಸಲು ಬಯಸಿದರೆ, ನಿಜವಾದ ಅರ್ಥದಲ್ಲಿ ದೇವತೆಯಾಗಿರುವ ನಿಮ್ಮ ಹೆಂಡತಿಯನ್ನು ಪೂಜಿಸಿ ಮತ್ತು ಗೌರವಿಸಿ. ಏಕೆಂದರೆ ಅವಳು ನಿಮ್ಮ ಕುಟುಂಬದ ಪೋಷಣೆ, ಸಂತೋಷ, ಸಮೃದ್ಧಿ, ಆಹಾರ ಮತ್ತು ಆರೈಕೆಯ ಜವಾಬ್ದಾರಿಯನ್ನು ಅತ್ಯಂತ ಭಕ್ತಿಯಿಂದ ಪೂರೈಸುತ್ತಾಳೆ’ ಎಂದು ಉಲ್ಲೇಖಿಸಿದ್ದಾರೆ.

ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಅವರು ಮೌರ್ಯ ‘ಓರಲ್ ಪೈಲ್ಸ್​​​’ನಿಂದ ಬಳಲುತ್ತಿದ್ದಾರೆ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಮೌರ್ಯ ಅವರು ಮಾತನಾಡುವುದನ್ನು ನಿಷೇಧಿಸುವಂತೆ ನಾನು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ರಾಮಚರಿತಮಾನವನ್ನು ಓದದ ಅಥವಾ ಓದಲಾರದ ಕೋಟಿಗಟ್ಟಲೆ ಜನರಿದ್ದಾರೆ. ದಲಿತರಿಗೆ ಓದುವ ಮತ್ತು ಬರೆಯುವ ಹಕ್ಕನ್ನು ನೀಡಿದ್ದು ಬ್ರಿಟಿಷರು. ಬ್ರಿಟಿಷ್ ಆಡಳಿತದಲ್ಲಿ ದಲಿತರು ಮತ್ತು ಮಹಿಳೆಯರನ್ನು ಮುಕ್ತಗೊಳಿಸಲಾಗಿತ್ತು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. ಈ ಸಂಬಂಧ ಮೌರ್ಯ ವಿರುದ್ಧ ಲಕ್ನೋ ಪೊಲೀಸರು ಎಫ್‌ಐಆರ್ ಸಹ ದಾಖಲಿಸಿದ್ದು, ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ