AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗಂಡನಿಂದ ಬೇಸತ್ತು ತನ್ನ 6 ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ; ಮಹಾರಾಷ್ಟ್ರದಲ್ಲೊಂದು ದಾರುಣ ಘಟನೆ

ಮಹಾರಾಷ್ಟ್ರದ ರಾಯಗಢದಲ್ಲಿ ಸೋಮವಾರ ಮನೆಯಲ್ಲಿ ಜಗಳವಾಡಿದ ನಂತರ ತಾಯಿ ಬಾವಿಗೆ ಎಸೆದಿದ್ದರಿಂದ ಐವರು ಹುಡುಗಿಯರು ಸೇರಿದಂತೆ ಆರು ಮಕ್ಕಳು ಸಾವನ್ನಪ್ಪಿದ್ದಾರೆ.

Crime News: ಗಂಡನಿಂದ ಬೇಸತ್ತು ತನ್ನ 6 ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ; ಮಹಾರಾಷ್ಟ್ರದಲ್ಲೊಂದು ದಾರುಣ ಘಟನೆ
ಮಹಾರಾಷ್ಟ್ರದಲ್ಲಿ ಬಾವಿಗೆ ಬಿದ್ದಿರುವ ಮಕ್ಕಳನ್ನು ಎತ್ತುತ್ತಿರುವ ಸ್ಥಳೀಯರುImage Credit source: NDTV
TV9 Web
| Edited By: |

Updated on: May 31, 2022 | 1:43 PM

Share

ಮುಂಬೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಡ (Raigad) ಜಿಲ್ಲೆಯಲ್ಲಿ ತಾಯಿಯೇ ತಾನು ಹೆತ್ತ ಮಕ್ಕಳನ್ನು ಬಾವಿಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ. ಮನೆಯಲ್ಲಿ ಗಂಡನೊಂದಿಗೆ ಜಗಳವಾಡಿಕೊಂಡಿದ್ದ ಮಹಿಳೆ ತನ್ನ ಐವರು ಹೆಣ್ಣುಮಕ್ಕಳು ಸೇರಿದಂತೆ 6 ಮಕ್ಕಳನ್ನು ಬಾವಿಗೆ ಎಸೆದಿದ್ದಾರೆ. ಇದರಿಂದ ನೀರಿನಿಂದ ಹೊರಬರಲಾಗದೆ 6 ಮಕ್ಕಳೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30 ವರ್ಷದ ಮಹಿಳೆಯನ್ನು ಆಕೆಯ ಗಂಡನ ಕುಟುಂಬದ ಸದಸ್ಯರು ಥಳಿಸಿ, ಹಿಂಸೆ ನೀಡಿದ್ದರು. ಇದರಿಂದ ಅವಮಾನಿತರಾಗಿ, ಕೋಪಗೊಂಡ ಆಕೆ ಮಕ್ಕಳನ್ನು ಸಾಯಿಸಿದ್ದಾರೆ.

ಇದನ್ನೂ ಓದಿ: Crime News: ವೈದ್ಯರ ನಿರ್ಲಕ್ಷ್ಯದಿಂದ ಮುಂಗೈ ಆಪರೇಷನ್ ಆದ ಯುವತಿ, 2 ವರ್ಷದ ಬಾಲಕಿ ಸಾವು

ಮಹಾರಾಷ್ಟ್ರದ ರಾಯಗಢದಲ್ಲಿ ಸೋಮವಾರ ಮನೆಯಲ್ಲಿ ಜಗಳವಾಡಿದ ನಂತರ ತಾಯಿ ಬಾವಿಗೆ ಎಸೆದಿದ್ದರಿಂದ ಐವರು ಹುಡುಗಿಯರು ಸೇರಿದಂತೆ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ತನ್ನ ಮಕ್ಕಳನ್ನು ಬಾವಿಗೆ ಎಸೆದ ನಂತರ ರೂನಾ ಚಿಖುರಿ ಸಾಹ್ನಿ ಎಂಬ 30 ವರ್ಷದ ಮಹಿಳೆ ತಾನೂ ಬಾವಿಗೆ ಜಿಗಿಯಲು ಪ್ರಯತ್ನಿಸಿದರು. ಆದರೆ ಆಕೆಯನ್ನು ರಕ್ಷಿಸಲಾಯಿತು.

18 ತಿಂಗಳಿಂದ 10 ವರ್ಷದೊಳಗಿನ ಆಕೆಯ ಎಲ್ಲಾ 6 ಮಕ್ಕಳನ್ನು ಗ್ರಾಮಸ್ಥರು ಬಾವಿಯಿಂದ ಮೇಲೆತ್ತುವ ಮೊದಲೇ ಸಾವನ್ನಪ್ಪಿದ್ದರು. ಆ ಮಕ್ಕಳನ್ನು ಕೊಂದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ದುಧೆ ತಿಳಿಸಿದ್ದಾರೆ. ಆ ಮಹಿಳೆಯ ಕುಟುಂಬಸ್ಥರು ಉತ್ತರ ಪ್ರದೇಶದವರಾಗಿದ್ದು, ಉತ್ತಮ ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಬಂದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ