ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ 20 ವರ್ಷದ ದಲಿತ ಯುವಕನನ್ನು ಮರಕ್ಕೆ ಕಟ್ಟಿಹಾಕಿ, ಮನಬಂದಂತೆ ಥಳಿಸಿ, ಗುಪ್ತಾಂಗಕ್ಕೆ (Private Parts) ಕೋಲಿನಿಂದ ಬಾರಿಸುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೋಗೆ (Viral Video) ಭಾರೀ ವಿರೋಧ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ತಮ್ಮ ಮನೆಯ ಹುಡುಗಿಯನ್ನು ಪ್ರೀತಿಸಿದ್ದಕ್ಕೆ 20 ವರ್ಷದ ದಲಿತ ಯುವಕನ ಪ್ರೇಯಸಿಯ ಮನೆಯವರು ಆತನನ್ನು ಕಾಲಿನಿಂದ ತುಳಿದು, ಮರಕ್ಕೆ ಕಟ್ಟಿ ಹಾಕಿ, ಆತನ ಗುಪ್ತಾಂಗಕ್ಕೆ ಕೋಲಿನಿಂದ ಬಾರಿಸಲಾಗಿದೆ. ತನ್ನನ್ನು ಬಿಟ್ಟುಬಿಡುವಂತೆ ಆತ ಗೋಗರೆಯುತ್ತಿದ್ದರೂ ಕೇಳದೆ ಹಿಂಸೆ ನೀಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಘಟನೆಯನ್ನು ನೋಡಲು ಸುತ್ತಲೂ ಸಾಕಷ್ಟು ಜನರು ಸೇರಿದ್ದರೂ ಯಾರೊಬ್ಬರೂ ಆ ಹಿಂಸೆಯನ್ನು ನಿಲ್ಲಿಸಲು ಹೋಗಿಲ್ಲ. ಬದಲಾಗಿ, ಘಟನೆಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
पीटने वाला: “कौन कास्ट हो?”
पिटने वाला: “चमार हैं.”फिर डंडों की बौछार बढ़ जाती है।उसे लात, घूसों,डंडों से बेरहमी से पीटा। जिस्म के नाज़ुक हिस्सों में डंडे घुसेड़े।कानपुर देहात में मामला प्रेम प्रसंग का बताते हैं।पुलिस ने एफ़ आई आर कर एक को पकड़ लिया है।दो की तलाश है। pic.twitter.com/BAU4QN2IiZ
— Kamal khan (@kamalkhan_NDTV) July 10, 2021
2 ದಿನಗಳ ಹಿಂದೆ ಕಾನ್ಪುರದ ಅಕ್ಬರ್ಪುರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಹರಿದಾಡಿದ ಬಳಿಕ ಪೊಲೀಸರ ಗಮನಕ್ಕೆ ಬಂದಿದೆ. ಒಂದಿಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಯುವಕನನ್ನು ಥಳಿಸಿದ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪ್ರತ್ಯೇಕ ತಂಡವೊಂದನ್ನು ರಚಿಸಲಾಗಿದೆ.
ಆ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಅಂಗಗಳಿಗೂ ಹಾನಿಯಾಗಿದೆ. ಆತನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಸ್ಸಿ (SC) ಯುವಕನ ಮೇಲೆ ಈ ರೀತಿ ದಾರುಣವಾಗಿ ಹಲ್ಲೆ ನಡೆಸಿರುವುದಕ್ಕೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು
(Dalit Man Beaten up Stock inserted in Private Parts by Lovers Family in Uttar Pradesh Video goes Viral)
Published On - 11:22 am, Sun, 11 July 21