ಅಮ್ಮನ ಗರ್ಭ, ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸೇಫ್; ಸಾಯುವ ಮುನ್ನ ಪತ್ರ ಬರೆದಿಟ್ಟ ಬಾಲಕಿ

ಈ ಸಮಾಜದಲ್ಲಿಅಮ್ಮನ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ಸಾಧ್ಯ. ಹೀಗಾಗಿ, ನಾನು ಸಮಾಧಿ ಸೇರಲು ನಿರ್ಧರಿಸಿದ್ದೇನೆ ಎಂದು ಸಾವಿಗೆ ಮುನ್ನ 16 ವರ್ಷದ ಬಾಲಕಿ ಬರೆದಿರುವ ಪತ್ರದಲ್ಲಿ ಸಮಾಜದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ.

ಅಮ್ಮನ ಗರ್ಭ, ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸೇಫ್; ಸಾಯುವ ಮುನ್ನ ಪತ್ರ ಬರೆದಿಟ್ಟ ಬಾಲಕಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 20, 2021 | 5:04 PM

ಚೆನ್ನೈ: ಕಾಮುಕರಿಂದ ಅತ್ಯಾಚಾರಕ್ಕೊಳಗಾದ ತಮಿಳುನಾಡಿನ ಅಪ್ರಾಪ್ತೆಯೊಬ್ಬಳು ಸೂಸೈಡ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ಸೂಸೈಡ್ ನೋಟ್​ನಲ್ಲಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬರೆದಿಟ್ಟಿರುವುದ ಮಾತ್ರವಲ್ಲದೆ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ ರೀತಿ ಅಸುರಕ್ಷಿತವಾಗಿ ಬದುಕುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂಬ ಬಗ್ಗೆಯೂ ಆಕೆ ಬರೆದಿಟ್ಟಿದ್ದಾಳೆ. ಕಳೆದ ವಾರ ಚೆನ್ನೈನ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಚೆನ್ನೈನ ಮಾಂಗಡು ಎಂಬಲ್ಲಿ ಈ ಘಟನೆ ನಡೆದಿತ್ತು. ಆ ಬಾಲಕಿಯ ಸಾವಿಗೆ ಲೈಂಗಿಕ ಕಿರುಕುಳವೇ ಕಾರಣ ಎಂಬುದು ಆಕೆಯ ಸೂಸೈಡ್ ನೋಟ್​ನಿಂದ ಬಯಲಾಗಿದೆ. ಹೆಣ್ಣುಮಕ್ಕಳಿಗೆ ಸುರಕ್ಷಿತ ಸ್ಥಳವೆಂದರೆ ಅಮ್ಮನ ಗರ್ಭ ಮತ್ತು ಸಮಾಧಿ ಮಾತ್ರ ಎಂದು ಆ ಬಾಲಕಿ ಸೂಸೈಡ್ ನೋಟ್​ನಲ್ಲಿ ಬರೆದಿಟ್ಟಿದ್ದಾಳೆ. ಕಳೆದ 8 ತಿಂಗಳಿನಿಂದ ಆಕೆಗೆ ಆಗುತ್ತಿದ್ದ ಲೈಂಗಿಕ ದೌರ್ಜನ್ಯದಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೂಸೈಡ್​ ನೋಟ್​ನಲ್ಲಿ ಬರೆದಿದ್ದಾಳೆ.

ಸಾವಿಗೆ ಮುನ್ನ ಆಕೆ ಬರೆದಿರುವ ಪತ್ರದಲ್ಲಿ ಸಮಾಜದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ. ಈ ಸಮಾಜದಲ್ಲಿ ಮಹಿಳೆಯರು ಸುರಕ್ಷಿತವಾಗಿ ಬದುಕಲು ಸಾಧ್ಯವಿಲ್ಲ. ಅಮ್ಮನ ಗರ್ಭ ಮತ್ತು ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ಸಾಧ್ಯ. ಹೀಗಾಗಿ, ನಾನು ಸಮಾಧಿ ಸೇರಲು ನಿರ್ಧರಿಸಿದ್ದೇನೆ. ಹೆಣ್ಣುಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ನಿಲ್ಲಿಸಿ ಮತ್ತು ನನಗೆ ನ್ಯಾಯ ಕೊಡಿಸಿ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ. ಅಲ್ಲದೆ, ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದವರ ಹೆಸರನ್ನು ಬರೆದಿಟ್ಟಿದ್ದಾಳೆ.

ಏನಿದು ಘಟನೆ?: ತನ್ನ ತಾಯಿ ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿದ್ದಾಗ 16 ವರ್ಷದ ಬಾಲಕಿ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೂ ಮುನ್ನ ಆಕೆ ಡೆತ್​ ನೋಟ್​ ಬರೆದಿಟ್ಟಿದ್ದಳು. ಅಪ್ಪ-ಅಮ್ಮ ತಮ್ಮ ಗಂಡುಮಕ್ಕಳಿಗೆ ಹೇಗೆ ಹುಡುಗಿಯರನ್ನು ಗೌರವಿಸಬೇಕು ಎಂದು ಹೇಳಿಕೊಡಬೇಕು. ಇಲ್ಲವಾದರೆ ಅದರಿಂದ ಅದೆಷ್ಟೋ ಮಹಿಳೆಯರ ಜೀವನ ಹಾಳಾಗುತ್ತದೆ ಎಂದು ಆಕೆ ಸೂಸೈಡ್ ನೋಟ್​ನಲ್ಲಿ ಬರೆದಿದ್ದಾಳೆ.

ಪ್ರತಿಯೊಬ್ಬ ಪೋಷಕರು ಮಗನಿಗೆ ಹುಡುಗಿಯರನ್ನು ಹೇಗೆ ಗೌರವಿಸಬೇಕು ಎಂದು ಹೇಳಿಕೊಡಬೇಕು. ನಿಮ್ಮ ಸಂಬಂಧಿಕರು ಅಥವಾ ಶಿಕ್ಷಕರನ್ನು ನಂಬಬೇಡಿ. ತಾಯಿ ಗರ್ಭ, ಸಮಾಧಿ ಹೊರತಾಗಿ ಮಹಿಳೆಗೆ ಯಾವುದೇ ಸ್ಥಳ ಸುರಕ್ಷಿತವಲ್ಲ ಎಂದು ಉಲ್ಲೇಖಿಸಿದ್ದಾರೆ. ಶಾಲೆಗಳು ಅಥವಾ ಸಂಬಂಧಿಕರ ಸ್ಥಳ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ಬರೆದಿರುವ ಆಕೆ ಶಾಲೆಯಲ್ಲಿ ತನ್ನ ಮೇಲೆ ಆಗಿದ್ದ ಕಿರುಕುಳದ ಬಗ್ಗೆಯೂ ಬರೆದಿದ್ದಾಳೆ.

ಲೈಂಗಿಕ ಕಿರುಕುಳವು ಅಸಹನೀಯವಾಗುತ್ತಿದೆ ಮತ್ತು ಅದರಿಂದ ನಾನು ಅಪಾರವಾದ ನೋವನ್ನು ಅನುಭವಿಸುತ್ತಿದ್ದೇನೆ. ನನಗೆ ಯಾರೂ ಬೇಡ ಎನಿಸುತ್ತಿದೆ. ನನಗೆ ಯಾರನ್ನೂ ನಂಬಲು ಆಗುತ್ತಿಲ್ಲ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ. ತನ್ನ ಮೇಲಾದ ಲೈಂಗಿಕ ಕಿರುಕುಳದಿಂದ ಆಕೆ ತುಂಬಾ ನೋವು ಅನುಭವಿಸಿದ್ದಳು. ಯಾರೂ ತನಗೆ ಸಮಾಧಾನ ಹೇಳಿ ಧೈರ್ಯ ತುಂಬಲು ಬರಲಿಲ್ಲ ಎಂದು ನೊಂದಿದ್ದಳು. ಇದರಿಂದ ಆಕೆ ಓದಿನಲ್ಲೂ ಗಮನ ಹರಿಸಲು ಸಾಧ್ಯವಾಗಲಿಲ್ಲ. ನಿದ್ರೆಯಲ್ಲೂ ಹೆದರಿ ಎದ್ದು ಕುಳಿತುಕೊಳ್ಳುತ್ತಿದ್ದೆ. ಬದುಕಲು ಧೈರ್ಯವಿಲ್ಲದ ಕಾರಣ ಸಾಯುತ್ತಿದ್ದೇನೆ ಎಂದು ಆಕೆ ಪತ್ರದಲ್ಲಿ ಬರೆದಿದ್ದಳು.

ಇದನ್ನೂ ಓದಿ: ಬಾಲಕಿ ಮೇಲೆ 9 ತಿಂಗಳು ಸಾಮೂಹಿಕ ಅತ್ಯಾಚಾರ; 13 ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಣೆ

Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ