CRPF ಬಂಪರ್ ನೇಮಕಾತಿ: ಕ್ರೀಡಾಪಟುಗಳಿಗೆ ಸುವರ್ಣಾವಕಾಶ; 521 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

CRPF ಕ್ರೀಡಾ ಕೋಟಾದಡಿ 521 ಹೆಡ್ ಕಾನ್‌ಸ್ಟೇಬಲ್, ಕಾನ್‌ಸ್ಟೇಬಲ್ (GD) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ಮತ್ತು ಪಿಯುಸಿ ಪಾಸಾದ, 18-23 ವರ್ಷದ ಕ್ರೀಡಾಪಟುಗಳಿಗೆ ಇದು ಸುವರ್ಣಾವಕಾಶ. ಲಿಖಿತ ಪರೀಕ್ಷೆ ಇಲ್ಲದೆ, ಕ್ರೀಡಾ ಸಾಧನೆ ಮತ್ತು ದೈಹಿಕ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 11 ಎಂದು ನಿಗದಿಪಡಿಸಲಾಗಿದೆ.

CRPF ಬಂಪರ್ ನೇಮಕಾತಿ: ಕ್ರೀಡಾಪಟುಗಳಿಗೆ ಸುವರ್ಣಾವಕಾಶ; 521 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
CRPF ಸ್ಪೋರ್ಟ್ಸ್ ಕೋಟಾ ನೇಮಕಾತಿ
Image Credit source: Getty Images

Updated on: Sep 26, 2026 | 2:54 PM

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕ್ರೀಡಾಪಟುಗಳಿಗೆ ಸುವರ್ಣಾವಕಾಶವನ್ನು ಒದಗಿಸಿದ್ದು, ಸ್ಪೋರ್ಟ್ಸ್ ಕೋಟಾದಡಿ 521 ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಮತ್ತು ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಭಾರತೀಯ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳು ಮತ್ತು ವೇತನ ಶ್ರೇಣಿಯ ವಿವರಗಳು:

CRPF ಹೊರಡಿಸಿರುವ ಈ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 521 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಇದರಲ್ಲಿ ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ವಿಭಾಗದಲ್ಲಿ 182 ಹುದ್ದೆಗಳಿದ್ದು (150 ಪುರುಷರು, 32 ಮಹಿಳೆಯರು), ಇವರಿಗೆ ಪೇ ಲೆವೆಲ್ 4 ರಂತೆ 25,500 ರಿಂದ 81,100ರೂ. ವೇತನ ಇರಲಿದೆ. ಹಾಗೆಯೇ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ವಿಭಾಗದಲ್ಲಿ 339 ಹುದ್ದೆಗಳಿದ್ದು (258 ಪುರುಷರು, 81 ಮಹಿಳೆಯರು), ಇವರಿಗೆ ಪೇ ಲೆವೆಲ್ 3 ರಂತೆ 21,700 ರಿಂದ 69,100ರೂ. ವೇತನ ಶ್ರೇಣಿ ನಿಗದಿಯಾಗಿದೆ. ಈ ಎಲ್ಲಾ ಹುದ್ದೆಗಳನ್ನು 22 ವಿಭಿನ್ನ ಕ್ರೀಡಾ ವಿಭಾಗಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಹೆಡ್ ಕಾನ್‌ಸ್ಟೇಬಲ್ (GD) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2 (ಪಿಯುಸಿ) ಉತ್ತೀರ್ಣರಾಗಿರಬೇಕು. ಕಾನ್‌ಸ್ಟೇಬಲ್ (GD) ಹುದ್ದೆಗೆ 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 01.08.2026 ಕ್ಕೆ ಅನ್ವಯಿಸುವಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಕ್ರೀಡಾಪಟುಗಳು ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಜೊತೆಗೆ, ಅಭ್ಯರ್ಥಿಗಳ ಕ್ರೀಡಾ ಸಾಧನೆಯನ್ನು ಸೆಪ್ಟೆಂಬರ್ 30, 2024 ರಿಂದ ಸೆಪ್ಟೆಂಬರ್ 30, 2026 ರ ನಡುವಿನ ಅವಧಿಯಲ್ಲಿ ಪಡೆದಿರುವುದನ್ನು ಮಾತ್ರ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ವಕೀಲಿ ವೃತ್ತಿಗೆ ಗುಡ್‌ಬೈ ಹೇಳಿ ‘ಡಾಗ್ ವಾಕರ್’ ಆದ ಮಹಿಳೆ: ಈಗ ಕಮ್ಮಿ ಕೆಲಸ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ!

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಮತ್ತು ಶುಲ್ಕ:

ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 12 ರಂದು ಬೆಳಿಗ್ಗೆ 09:00 ಗಂಟೆಯಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ನವೆಂಬರ್ 11, 2026 ರ ರಾತ್ರಿ 11:59 ಗಂಟೆ ಕೊನೆಯ ದಿನವಾಗಿದೆ. ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗಳಿದ್ದರೆ ಮಾಡಲು ನವೆಂಬರ್ 12 ರಿಂದ ನವೆಂಬರ್ 14 ರವರೆಗೆ ತಿದ್ದುಪಡಿ ಅವಕಾಶ (Correction Window) ನೀಡಲಾಗುತ್ತದೆ. ಸಾಮಾನ್ಯ, OBC ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳಿಗೆ 100ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳು, SC/ST ಮತ್ತು ಮಾಜಿ ಸೈನಿಕರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ದಾಖಲೆಗಳ ಪರಿಶೀಲನೆ, ದೈಹಿಕ ಪ್ರಮಾಣಿತ ಪರೀಕ್ಷೆ (PST), ಕ್ರೀಡಾ ಸಾಧನೆಗಳ ಮೆರಿಟ್ ಆಧಾರಿತ ಪರಿಗಣನೆ, ಅರ್ಹತಾ ಕ್ರೀಡಾ ತಾಲೀಮು (Qualifying Sports Trial) ಹಾಗೂ ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯ ಮೂಲಕ ನಡೆಯಲಿದೆ. ಅರ್ಹ ಅಭ್ಯರ್ಥಿಗಳು CRPF ನ ಅಧಿಕೃತ ನೇಮಕಾತಿ ವೆಬ್‌ಸೈಟ್ rect.crpf.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us