ಕೊರೊನಾ ಸೋಂಕಿತರ ಜೀವರಕ್ಷಕ ರೆಮ್​ಡೆಸಿವಿರ್​ ಮೇಲಿನ ಆಮದು ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ

ಇತ್ತೀಚೆಗೆ ದೇಶದಲ್ಲಿ ಆಕ್ಸಿಜನ್, ವ್ಯಾಕ್ಸಿನ್​, ರೆಮ್​ಡೆಸಿವರ್​ ಸೇರಿ ಕೊರೊನಾ ರೋಗಿಗಳಿಗೆ ಅಗತ್ಯವಿರುವ ಬಹುತೇಕ ವ್ಯವಸ್ಥೆಗಳ ಅಭಾವ ಎದುರಾಗಿದೆ. ಕೊರೊನಾ ಶುರುವಾದಾಗಿನಿಂದಲೂ ರೋಗಿಗಳಿಗೆ ರೆಮ್​ಡೆಸಿವರ್​ ಇಂಜಕ್ಷನ್ ಕೊಡಲಾಗುತ್ತಿದೆ.

ಕೊರೊನಾ ಸೋಂಕಿತರ ಜೀವರಕ್ಷಕ ರೆಮ್​ಡೆಸಿವಿರ್​ ಮೇಲಿನ ಆಮದು ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ
ರೆಮ್​​ಡೆಸಿವಿರ್​ ಚುಚ್ಚುಮದ್ದು

ದೇಶದಲ್ಲಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ರೆಮ್​ಡೆಸಿವಿರ್​ ಔಷಧದ ಅಭಾವ ಉಂಟಾಗಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರೆಮ್​ಡೆಸಿವಿರ್​ ಇಂಜೆಕ್ಷನ್​ ಮತ್ತು ಅದರ ಎಪಿಐ/ಕೆಎಸ್​ಎಂ ಮೇಲಿನ ಕಸ್ಟಮ್ಸ್​ ಸುಂಕವನ್ನು ಮನ್ನಾ ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ಡಿ.ಎಸ್​. ಸದಾನಂದ ಗೌಡ ಟ್ವೀಟ್ ಮಾಡಿ ತಿಳಿಸಿದ್ದಾರೆ.

ರೆಮ್​ಡೆಸಿವಿರ್​ ಔಷಧಿಯ ತುರ್ತು ಅಗತ್ಯತೆಯನ್ನು ಪರಿಗಣಿಸಿ, ಔಷಧೀಯ ಇಲಾಖೆಯ ಶಿಫಾರಸಿನ ಮೇರೆಗೆ ರೆಮ್​ಡೆಸಿವಿರ್ ಮೇಲಿನ ಕಸ್ಟಮ್ಸ್​ ಸುಂಕವನ್ನು, ಕಂದಾಯ ಇಲಾಖೆ ಮನ್ನಾ ಮಾಡಿದೆ. ಹೀಗೆ ಮಾಡುವುದರಿಂದ ದೇಶೀಯವಾಗಿ ರೆಮ್​ಡೆಸಿವಿರ್ ಇಂಜಕ್ಷನ್​ ಉತ್ಪಾದನೆ ಹೆಚ್ಚುತ್ತದೆ ಎಂದು ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಆಕ್ಸಿಜನ್, ವ್ಯಾಕ್ಸಿನ್​, ರೆಮ್​ಡೆಸಿವರ್​ ಸೇರಿ ಕೊರೊನಾ ರೋಗಿಗಳಿಗೆ ಅಗತ್ಯವಿರುವ ಬಹುತೇಕ ವ್ಯವಸ್ಥೆಗಳ ಅಭಾವ ಎದುರಾಗಿದೆ. ಕೊರೊನಾ ಶುರುವಾದಾಗಿನಿಂದಲೂ ರೋಗಿಗಳಿಗೆ ರೆಮ್​ಡೆಸಿವರ್​ ಇಂಜಕ್ಷನ್ ಕೊಡಲಾಗುತ್ತಿದೆ. ಇದರ ಕೊರತೆ ಎದುರಾಗಿದ್ದರಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಈ ಆಮದು ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದ್ದರಿಂದ ದೇಶೀಯ ಔಷಧೀಯ ಕಂಪನಿಗಳಿಗೆ ಹೊರೆ ಕಡಿಮೆಯಾಗಲಿದೆ.

ಇದನ್ನೂ ಓದಿ: ಸೋಂಕಿತ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ವೈದ್ಯಕೀಯ ಕಾಲೇಜು; ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಎಲ್ಲರಿಗೂ ಕೊರೊನಾ ಆತಂಕ

ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿದ್ದ ಮಸ್ತಾನ್ ಕೊರೊನಾ ಸೋಂಕಿಗೆ ಬಲಿ

LPG Cylinder Price: ಕೇವಲ 9 ರೂಪಾಯಿಗೆ ಸಿಲಿಂಡರ್​ ಪಡೆಯಬಹುದೇ? 800 ರೂ. ರಿಯಾಯಿತಿ ಇದೆಯೇ?

Click on your DTH Provider to Add TV9 Kannada