Cyclone Alert: ಮಾಂಡೌಸ್ ಚಂಡಮಾರುತದ ಅಬ್ಬರದ ಬೆನ್ನಲ್ಲೇ ಮತ್ತೊಂದು ಸೈಕ್ಲೋನ್ ಭೀತಿ; ಹವಾಮಾನ ಇಲಾಖೆ ಅಲರ್ಟ್

| Updated By: ಸುಷ್ಮಾ ಚಕ್ರೆ

Updated on: Dec 12, 2022 | 1:58 PM

Cyclone Mandous: ಮಂಗಳವಾರ (ಡಿಸೆಂಬರ್ 13) ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಚಲನೆ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Cyclone Alert: ಮಾಂಡೌಸ್ ಚಂಡಮಾರುತದ ಅಬ್ಬರದ ಬೆನ್ನಲ್ಲೇ ಮತ್ತೊಂದು ಸೈಕ್ಲೋನ್ ಭೀತಿ; ಹವಾಮಾನ ಇಲಾಖೆ ಅಲರ್ಟ್
ಮಾಂಡೌಸ್ ಚಂಡಮಾರುತ
Follow us on

ನವದೆಹಲಿ: ಮಾಂಡೌಸ್ ಚಂಡಮಾರುತದ (Mandous Cyclone) ಅಬ್ಬರದಿಂದಾಗಿ ತಮಿಳುನಾಡು (Tamil Nadu Rain), ಕೇರಳ (Kerala Rain), ಆಂಧ್ರಪ್ರದೇಶ (Andhra Pradesh Rain) ಹಾಗೂ ಕರ್ನಾಟಕದ (Karnataka Rains) ಹಲವೆಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಮಂಗಳವಾರದವರೆಗೆ ಈ ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ. ಇದರ ನಡುವೆ ಮಂಗಳವಾರ (ಡಿಸೆಂಬರ್ 13) ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಚಲನೆ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಚಂಡಮಾರುತ ಭಾರತದ ಕರಾವಳಿಯಿಂದ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ.

ಈ ಹೊಸ ಚಂಡಮಾರುತದ ಪ್ರಭಾವದ ಅಡಿಯಲ್ಲಿ ಡಿಸೆಂಬರ್ 14 ಮತ್ತು 15ರಂದು ಅಂಡಮಾನ್ ಮತ್ತು ನಿಕೋಬಾರ್​ನಲ್ಲಿ ಸಾಕಷ್ಟು ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ. ಇಂದು ತಮಿಳುನಾಡಿನಲ್ಲಿ ಮತ್ತು ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಮತ್ತು ಮಂಗಳವಾರ ಆಗ್ನೇಯ ಮತ್ತು ಪೂರ್ವ ಮಧ್ಯ ಅರೇಬಿಯನ್ ಸಮುದ್ರದಲ್ಲಿ ಮತ್ತು ಕೇರಳ-ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಹೀಗಾಗಿ, ಮೀನುಗಾರರು ಇಂದು ಮತ್ತು ಡಿಸೆಂಬರ್ 13ರಂದು ಆಗ್ನೇಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರಕ್ಕೆ ಮತ್ತು ಕೇರಳ-ಕರ್ನಾಟಕ ಕರಾವಳಿಯ ಉದ್ದಕ್ಕೂ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Cyclone Mandous: ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರ; ಚೆನ್ನೈ, ಕಾಂಚೀಪುರಂನಲ್ಲಿ ಮಳೆಗೆ ನಾಲ್ವರು ಸಾವು

ಡಿಸೆಂಬರ್ 9ರಂದು ಬಂಗಾಳ ಕೊಲ್ಲಿಯಿಂದ ಹೊರಹೊಮ್ಮಿದ ಮಾಂಡೌಸ್ ಚಂಡಮಾರುತವು ಚೆನ್ನೈನಿಂದ 30 ಕಿಮೀ ದೂರದಲ್ಲಿರುವ ಮಾಮಲ್ಲಪುರಂನಲ್ಲಿ ಭಾರೀ ಭೂಕುಸಿತವನ್ನು ಉಂಟುಮಾಡಿತ್ತು. ಇದರ ಪರಿಣಾಮ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಸಿನ ಗಾಳಿ ಬೀಸಿದೆ. ಚಂಡಮಾರುತವು ಡಿಸೆಂಬರ್ 10ರಂದು ಮುಂಜಾನೆ 1.30ರ ಸುಮಾರಿಗೆ ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ಕರಾವಳಿಯನ್ನು ದಾಟಿತು.

ಮಳೆಯ ಅರ್ಭಟಕ್ಕೆ ಕಾಂಚಿಪುರಂ ಜಿಲ್ಲೆಯ ಕಾಂಚೀಪುರಂ ತಾಲೂಕು ಮತ್ತು ತಿರುವಳ್ಳೂರು ಜಿಲ್ಲೆಯ ಉತ್ತುಕೊಟ್ಟೈ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಕೂಡ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವೆಡೆ ತುಂತುರು ಮಳೆ ಇದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ತಮಿಳುನಾಡಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಇನ್ನೂ ತಮಿಳುನಾಡಿನ ಹಲವೆಡೆ ಭೂಕುಸಿತ ಉಂಟಾಗಿದೆ.

ಇದನ್ನೂ ಓದಿ: Cyclone Mandous: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಭೀತಿ; ಚೆನ್ನೈನ 16 ವಿಮಾನಗಳ ಹಾರಾಟ ರದ್ದು

ಕರ್ನಾಟಕದಲ್ಲೂ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಬೆಂಗಳೂರು, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಮಳೆಯಿಂದಾಗಿ ಚಿಕ್ಕಬಳ್ಳಾಪುರ, ಕೋಲಾರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಡಿ. 16ರವರೆಗೆ ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರೆಯುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Mon, 12 December 22