Cyclone Mandous: ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರ; ಚೆನ್ನೈ, ಕಾಂಚೀಪುರಂನಲ್ಲಿ ಮಳೆಗೆ ನಾಲ್ವರು ಸಾವು

Tamil Nadu Rains: ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ಇಬ್ಬರು ಮತ್ತು ಕಾಂಚೀಪುರಂನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಭಾರೀ ಗಾಳಿಯಿಂದಾಗಿ ಚೆನ್ನೈನಲ್ಲಿ 400 ಮರಗಳು ಧರೆಗುರುಳಿವೆ. ಚೆನ್ನೈನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ವರದಿಯಾಗಿದೆ.

Cyclone Mandous: ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರ; ಚೆನ್ನೈ, ಕಾಂಚೀಪುರಂನಲ್ಲಿ ಮಳೆಗೆ ನಾಲ್ವರು ಸಾವು
ತಮಿಳುನಾಡಿನಲ್ಲಿ ಚಂಡಮಾರುತ
Follow us
| Updated By: ಸುಷ್ಮಾ ಚಕ್ರೆ

Updated on: Dec 10, 2022 | 2:20 PM

ಚೆನ್ನೈ: ತಮಿಳುನಾಡಿನ ಮಾಮಲ್ಲಪುರಂ ಕರಾವಳಿಯನ್ನು ದಾಟಿರುವ ಮಾಂಡೌಸ್ ಚಂಡಮಾರುತ (Mandous Cyclone) ಚೆನ್ನೈ ಮತ್ತು ಅದರ ನೆರೆಹೊರೆಯಲ್ಲಿ ಹಾನಿಯನ್ನು ಉಂಟುಮಾಡಿದೆ. ಚೆನ್ನೈನಲ್ಲಿ ಮಳೆ (Chennai Rains) ಸಂಬಂಧಿತ ಘಟನೆಗಳಿಂದ ಇಬ್ಬರು ಮತ್ತು ಕಾಂಚೀಪುರಂನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಚೆನ್ನೈ ಮೂಲದ ಮೃತರನ್ನು ಲಕ್ಷ್ಮಿ (45) ಮತ್ತು ರಾಜೇಂದ್ರನ್ (25) ಎಂದು ಗುರುತಿಸಲಾಗಿದೆ. ಭೂಕುಸಿತದ ಸಮಯದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಅವರಿಬ್ಬರೂ ಸಾವನ್ನಪ್ಪಿದ್ದಾರೆ.

ಭಾರೀ ಗಾಳಿಯಿಂದಾಗಿ ಚೆನ್ನೈನಲ್ಲಿ ಸುಮಾರು 400 ಮರಗಳು ಧರೆಗುರುಳಿವೆ. ಚೆನ್ನೈನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ವರದಿಯಾಗಿದೆ. ಚೆನ್ನೈನಲ್ಲಿ 205 ಪರಿಹಾರ ಕೇಂದ್ರಗಳಲ್ಲಿ 9,000ಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ. 5 ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮೂರನ್ನು ತೆರವುಗೊಳಿಸಲಾಗಿದೆ. ಚಂಡಮಾರುತದಿಂದಾಗಿ ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೆಟ್ಟೈ, ವೆಲ್ಲೂರು, ತಿರುಪತ್ತೂರ್, ತಿರುವಣ್ಣಾಮಲೈ, ಕೃಷ್ಣಗಿರಿ ಮತ್ತು ಧರ್ಮಪುರಿ ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನೀಲಗಿರಿ, ಈರೋಡ್, ಸೇಲಂ, ಕಲ್ಲಕುರಿಚಿ ಮತ್ತು ವಿಲ್ಲುಪುರಂನಲ್ಲಿ ಕೂಡ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆ, ಭೂಕುಸಿತ

ಚಂಡಮಾರುತಕ್ಕೆ ಸಿದ್ಧವಾಗಲು 476 ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಗಳನ್ನು ಒಳಗೊಂಡ 14 ಗುಂಪುಗಳನ್ನು 10 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ನಾಗಪಟ್ಟಣಂ, ತಂಜಾವೂರು, ತಿರುವರೂರ್, ಕಡಲೂರು, ಮೈಲಾದುರೈ, ಚನ್ನೈ, ಕಂಚೆಪಟ್ಟುಪುರಂ, ಚೆನ್ನೈ, ತಿರುವಳ್ಳೂರು ವಿಲ್ಲುಪುರಂ ಜಿಲ್ಲೆಗಳಲ್ಲಿ ರಕ್ಷಣಾ ಪಡೆ ಸಿದ್ಧವಾಗಿವೆ.

ಮಾಂಡೌಸ್ ಚಂಡಮಾರುತವು ಶುಕ್ರವಾರ ರಾತ್ರಿ 11.30ಕ್ಕೆ ಮಾಮಲ್ಲಪುರಂನ ಆಗ್ನೇಯಕ್ಕೆ ಸುಮಾರು 15 ಕಿಮೀ ದೂರದಲ್ಲಿ ಉಂಟಾಗಿದೆ. ಮಾಂಡೌಸ್ ಚಂಡಮಾರುತದಿಂದ ಮಾಮಲ್ಲಪುರಂನಲ್ಲಿ ಭೂಕುಸಿತವಾದ ನಂತರ ಚೆನ್ನೈನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಶುರುವಾಗಿದೆ. ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಟ್ನಂಪಕ್ಕಂ ಕೂಡ ಜಲಾವೃತವಾಗಿದೆ. ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಜನರ ಸುರಕ್ಷತೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ. ಜಿಲ್ಲಾವಾರು ಚಂಡಮಾರುತದ ಮೇಲ್ವಿಚಾರಣೆ ಕೂಡ ನಡೆಸಲಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ: Bengaluru Rain: ಮಾಂಡೌಸ್ ಚಂಡಮಾರುತದ ಎಫೆಕ್ಟ್; ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ತುಂತುರು ಮಳೆ, ಮೈ ಕೊರೆವ ಚಳಿ

ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಮಿಳುನಾಡಿನ ದಿಂಡುಗಲ್ ಜಿಲ್ಲಾಧಿಕಾರಿ ಸಿರುಮಲೈ ಮತ್ತು ಕೊಡೈಕೆನಾಲ್‌ನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ. ಚೆನ್ನೈ ಸಂಚಾರ ಪೊಲೀಸರು ಅಕ್ಕರೈ ಮತ್ತು ಕೋವಲಂ ನಡುವಿನ ಪೂರ್ವ ಕರಾವಳಿ ರಸ್ತೆಯಲ್ಲಿ ಈ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಮತ್ತು ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಮುಂದಿನ ಸೂಚನೆ ಬರುವವರೆಗೆ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಗಾಳಿಯ ವೇಗ ಗಂಟೆಗೆ ಸುಮಾರು 14 ಕಿಮೀ ಇರಲಿದೆ. ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಈಗಾಗಲೇ ಗಂಟೆಗೆ 50-60 ಕಿಮೀ ವೇಗದಲ್ಲಿ ಬಲವಾದ ಗಾಳಿ ಪ್ರಾರಂಭವಾಗಿದೆ. ಭೂಕುಸಿತ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯು ಮುಂದುವರಿಯುತ್ತದೆ. ಈ ಹಿಂದೆ ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಗರಿಷ್ಠ ಗಾಳಿಯ ವೇಗ ಗಂಟೆಗೆ 85 ಕಿಮೀ ದಾಟಬಹುದು ಎಂದು IMD ಊಹಿಸಿತ್ತು. ಹಾಗೇ, ರೆಡ್ ಅಲರ್ಟ್ ಘೋಷಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ