Cyclone Gulab: ಇಂದು ಅಪ್ಪಳಿಸಲಿದೆ ಗುಲಾಬ್​ ಚಂಡಮಾರುತ; 3 ರಾಜ್ಯಗಳಲ್ಲಿ ವಿಪರೀತ ಮಳೆ ಸಾಧ್ಯತೆ, ಐಎಂಡಿಯಿಂದ ಎಚ್ಚರಿಕೆ

| Updated By: Lakshmi Hegde

Updated on: Sep 25, 2021 | 3:43 PM

ಗುಲಾಬ್​ ಚಂಡಮಾರುತ ಪ್ರಭಾವ: ಗುಲಾಬ್​ ಚಂಡಮಾರುತ ಹಾದುಹೋಗಲಿರುವ ಸ್ಥಳಗಳಾದ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. 

Cyclone Gulab: ಇಂದು ಅಪ್ಪಳಿಸಲಿದೆ ಗುಲಾಬ್​ ಚಂಡಮಾರುತ; 3 ರಾಜ್ಯಗಳಲ್ಲಿ ವಿಪರೀತ ಮಳೆ ಸಾಧ್ಯತೆ, ಐಎಂಡಿಯಿಂದ ಎಚ್ಚರಿಕೆ
ಗುಲಾಬ್​ ಚಂಡಮಾರುತ
Follow us on

ಇಂದು (ಸೆಪ್ಟೆಂಬರ್​ 25) ಸಂಜೆಯ ಹೊತ್ತಿಗೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವೊಂದು ಏಳಲಿದ್ದು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾಗಳ ಕರಾವಳಿ ತೀರಗಳಲ್ಲಿ ಮುಂದಿನ 12 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ವಿಪರೀತ ಮಳೆಯಾಗುವ  ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಗುಲಾಬ್ (Cyclone Gulab)​ ಎಂದು ಹೆಸರಿಡಲಾಗಿದ್ದು, ಇದನ್ನು ಸೂಚಿಸಿದ್ದು ಪಾಕಿಸ್ತಾನ.  ಗುಲಾಬ್​ ಚಂಡಮಾರುತದ ವೇಗ ಗಂಟೆಗೆ 70-80 ಕಿಮೀ ಇರಲಿದ್ದು, 90 ಕಿಮೀ ವೇಗಕ್ಕೂ ಏರಬಹುದು ಎಂದು ಐಎಂಡಿ ಹೇಳಿದೆ. 

ಗುಲಾಬ್​ ಚಂಡಮಾರುತ ಹಾದುಹೋಗಲಿರುವ ಸ್ಥಳಗಳಾದ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.  ಗೋಪಾಲ್​ಪುರದಿಂದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 470 ಕಿಮೀ ದೂರ ಮತ್ತು ಕಾಳಿಂಗಪಟ್ಟಣಂನ ಪೂರ್ವದಲ್ಲಿ 540 ಕಿಮೀ ದೂರದಲ್ಲಿ ತೀವ್ರವಾದ ವಾಯುಭಾರ ಕುಸಿತ ಆಗಿರುವ ಹಿನ್ನೆಲೆಯಲ್ಲಿ ಗುಲಾಬ್​ ಚಂಡಮಾರು ಏಳಲಿದೆ. ಈ ಚಂಡಮಾರುತ ಪೂರ್ವ ಹಾಗೂ ಮಧ್ಯ ಭಾರತದಲ್ಲಿ ವಿಪರೀತ ಮಳೆಯುಂಟು ಮಾಡಲಿದೆ.  ಅದರಲ್ಲೂ ಆಂಧ್ರಪ್ರದೇಶ, ಓಡಿಶಾ ಮತ್ತುಪಶ್ಚಿಮ ಬಂಗಾಳದ ಕರಾವಳಿ ತೀರಗಳಲ್ಲಿ ಮುಂದಿನ ಮೂರು ದಿನಗಳ ಕಾಲವೂ ವಾತಾವರಣ ಸರಿ ಇರುವುದಿಲ್ಲ ಎಂದು ಐಎಂಡಿ ತಿಳಿಸಿದೆ.

ಮೀನುಗಾರರಿಗೆ ಎಚ್ಚರಿಕೆ
ಬಂಗಾಳಕೊಲ್ಲಿಯಲ್ಲಿ ಏಳಲಿರುವ ಚಂಡಮಾರುತದಿಂದ ಹವಾಮಾನ ಬದಲಾವಣೆ ಆಗುತ್ತದೆ. ಗಾಳಿ-ಮಳೆ ಜಾಸ್ತಿ ಇರಲಿದ್ದು ಸೆಪ್ಟೆಂಬರ್​ 25ರ ನಂತರ ಮುಂದಿನ ಸೂಚನೆವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಸೆಪ್ಟೆಂಬರ್​ 26ರಂದು ಆಂಧ್ರಪ್ರದೇಶದ ಕರಾವಳಿ ತೀರದ ಸುತ್ತಲಿನ ಪ್ರದೇಶಗಳಲ್ಲಿ ಸಿಕ್ಕಾಪಟೆ ಮಳೆಯಾಗಲಿದ್ದು, ರಸ್ತೆಗಳೆಲ್ಲಿ ನೀರು ತುಂಬಬಹುದು, ಸಣ್ಣಮಟ್ಟದ ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಲಾಗಿದೆ. ಹಾಗೇ, ಮುಂದಿನ ಎರಡು ದಿನಗಳ ಕಾಲ ಒಡಿಶಾ ಮತ್ತು ಛತ್ತೀಸ್​ಗಢ್​​ನಲ್ಲೂ ಮಳೆ-ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಇನ್ನು ಚಂಡಮಾರುತದ ಪ್ರಭಾವ ಹೆಚ್ಚಾಗಿ ಉಂಟಾಗಲಿರುವ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಿ ಅಲ್ಲಿನ ಸರ್ಕಾರಗಳು ತಿಳಿಸಿವೆ. ಹಾಗೇ ಸೆಪ್ಟೆಂಬರ್​ 28ರ ಹೊತ್ತಿಗೆ ಇನ್ನೊಂದು ಚಂಡಮಾರುತ ಏಳುವ ಮುನ್ಸೂಚನೆಯೂ ಗೋಚರಿಸುತ್ತಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ

ಭರ್ಜರಿಯಾಗಿ ರೆಡಿ ಆಗ್ತಿದೆ ಕಿಚ್ಚನ ‘ಕೋಟಿಗೊಬ್ಬ 3’ ಕಟೌಟ್​; ಸಂಭ್ರಮಕ್ಕೆ ತಯಾರಿ ಹೇಗಿದೆ ನೋಡಿ

(Cyclone Gulab will bring widespread and heavy rain to parts of east and central India says IMD forecast)

Published On - 3:29 pm, Sat, 25 September 21