ಚೆನ್ನೈ: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಮಾಂಡಸ್ ಚಂಡಮಾರುತದ (Mandous Cyclone) ರೂಪ ತಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡು (Tamil Nadu), ಆಂಧ್ರ ಪ್ರದೇಶದಲ್ಲಿ (Andhra Pradesh) ಭಾರೀ ಮಳೆಯ (Heavy Rainfall) ಎಚ್ಚರಿಕೆ ನೀಡಲಾಗಿದೆ. ಮುಂದಿನ 3 ಗಂಟೆಗಳಲ್ಲಿ ತಮಿಳುನಾಡಿನ ಚೆನ್ನೈ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಲಘು ಮಳೆಯ ಎಚ್ಚರಿಕೆ ನೀಡಲಾಗಿದೆ.
IMD ಪ್ರಕಾರ, ಮಾಂಡಸ್ ಚಂಡಮಾರುತವು ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿದೆ ಮತ್ತು ಚೆನ್ನೈನಿಂದ ಸರಿಸುಮಾರು 600 ಕಿಮೀ ದೂರದಲ್ಲಿದೆ. ಇದರ ಪರಿಣಾಮವಾಗಿ, ಮುಂದಿನ 3ರು ಗಂಟೆಗಳಲ್ಲಿ ಚೆನ್ನೈನಲ್ಲಿ ಲಘು ಮಳೆಯಾಗಲಿದೆ. ತಮಿಳುನಾಡಿನ ಎಗ್ಮೋರ್, ಮೈಲಾಪುರ್, ಪುರಸೈವಾಕ್ಕಂ, ತಿರುವೋಟಿಯೂರ್, ಥಂಡೈಯಾರ್ಪೇಟ್, ವೆಲಚೇರಿ, ಅಯನವರಂ, ಮಾಂಬಲಂ, ಪೆರಂಬೂರ್ ಮತ್ತು ಅಂಬತ್ತೂರ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ.
ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಭಾರಿ ಮಳೆ ಮುನ್ಸೂಚನೆ, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ತಮಿಳುನಾಡಿನ ಸಮೀಪದ ಜಿಲ್ಲೆಗಳಲ್ಲಿ ಚೆನ್ನೈನ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಅವುಗಳೆಂದರೆ, ಚೆಂಗಲ್ಪಟ್ಟು, ಮಧುರವಾಯಲ್, ಪೂವಿಂದವಳ್ಳಿ, ತಿರುಕಲ್ಗುನ್ರಂ, ತಿರುಪೋರೂರ್, ವಂಡಲೂರ್, ಅಂಬತ್ತೂರು, ಸೆಯ್ಯೂರ್, ಕುಂದ್ರತ್ತೂರ್, ಮಧುರಾಂತಗಮ್ ಮತ್ತು ಉತಿರಮೇರೂರ್.
Deep Depression over Southwest and adjoining Southeast Bay of Bengal intensified into a Cyclonic Storm “Mandous” pronounced as “Man-Dous” (Cyclone Alert for north Tamil Nadu, Puducherry and south Andhra Pradesh coasts): India Meteorological Department pic.twitter.com/k6sMwRWqOa
— ANI (@ANI) December 7, 2022
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವುದರಿಂದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಳಿಗ್ಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಿಂದ ನೈಋತ್ಯ ಬಂಗಾಳ ಕೊಲ್ಲಿಯನ್ನು ಈ ಚಂಡಮಾರುತ ತಲುಪುತ್ತದೆ.
ಮಾಂಡಸ್ ಚಂಡಮಾರುತದಿಂದಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಡಿ.9ರಂದು ಚೆನ್ನೈ, ಕಲ್ಲಕುರಿಚಿ, ಅರಿಯಲೂರ್, ಕಡಲೂರು, ವಿಲ್ಲುಪುರಂ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಪೆರಂಬಲೂರು, ಮೈಲಾಡುತುರೈ, ತಂಜೂರು, ತಿರುವರೂರು, ನಾಗಪಟ್ಟಣಂ ಜಿಲ್ಲೆಗಳು ಮತ್ತು ಕಾರೈಕಲ್‌ನ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Karnataka Weather Updates: ಕರ್ನಾಟಕದ ವಿವಿಧೆಡೆ ಡಿಸೆಂಬರ್ 9 ರಿಂದ 11ರವರೆಗೂ ಭಾರಿ ಮಳೆಯ ಮುನ್ಸೂಚನೆ
ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಪಕ್ಕದ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗಲಿದೆ. ಡಿಸೆಂಬರ್ 10ರವರೆಗೆ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲಿ ಚಂಡಮಾರುತ ಬೀಸುವ ಮುನ್ಸೂಚನೆ ಇದೆ. ಈ ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಶ್ರೀಲಂಕಾ ಕರಾವಳಿಯುದ್ದಕ್ಕೂ ಮತ್ತು ಆಚೆಗೆ ಮೀನುಗಾರರು ಹೋಗದಂತೆ ಸೂಚಿಸಲಾಗಿದೆ.