Cyclone Montha: ಅ.28ರಂದು ಆಂಧ್ರದ ಕರಾವಳಿಗೆ ಅಪ್ಪಳಿಸಲಿದೆ ಸೈಕ್ಲೋನ್ ‘ಮೊಂಥಾ’, ತಮಿಳುನಾಡು, ಒಡಿಶಾದಲ್ಲಿ ಭಾರಿ ಮಳೆ
ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತ(Cyclone)ವು ಆಂಧ್ರ ಕರಾವಳಿಯತ್ತ ವೇಗವಾಗಿ ಚಲಿಸುತ್ತಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಥೈಲ್ಯಾಂಡ್ "ಮೊಂಥಾ" ಎಂದು ಹೆಸರಿಸಿದೆ. ಇದು ಈ ತಿಂಗಳ ಎರಡನೇ ಚಂಡಮಾರುತವಾಗಲಿದೆ.

ಆಂಧ್ರಪ್ರದೇಶ, ಅಕ್ಟೋಬರ್ 26: ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತ(Cyclone)ವು ಆಂಧ್ರ ಕರಾವಳಿಯತ್ತ ವೇಗವಾಗಿ ಚಲಿಸುತ್ತಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಥೈಲ್ಯಾಂಡ್ “ಮೊಂಥಾ” ಎಂದು ಹೆಸರಿಸಿದೆ. ಇದು ಈ ತಿಂಗಳ ಎರಡನೇ ಚಂಡಮಾರುತವಾಗಲಿದೆ.
ಈ ತಿಂಗಳ ಆರಂಭದಲ್ಲಿ, ಗುಜರಾತ್ ಕರಾವಳಿಯ ಬಳಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಂಡಿತ್ತು. ಚಂಡಮಾರುತ ಈಗ ಪೋರ್ಟ್ ಬ್ಲೇರ್‌ನಿಂದ ನೈಋತ್ಯಕ್ಕೆ 440 ಕಿಲೋಮೀಟರ್, ವಿಶಾಖಪಟ್ಟಣಂನಿಂದ ಆಗ್ನೇಯಕ್ಕೆ 970 ಕಿಲೋಮೀಟರ್, ಚೆನ್ನೈನಿಂದ ಆಗ್ನೇಯಕ್ಕೆ 970 ಕಿಲೋಮೀಟರ್, ಕಾಕಿನಾಡದಿಂದ ಆಗ್ನೇಯಕ್ಕೆ 990 ಕಿಲೋಮೀಟರ್ ಮತ್ತು ಗೋಪಾಲಪುರ (ಒಡಿಶಾ) ದಿಂದ ಆಗ್ನೇಯಕ್ಕೆ 1040 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.
ಕಡಿಮೆ ಒತ್ತಡ ಪ್ರದೇಶವು ಸೋಮವಾರದ ವೇಳೆಗೆ ಚಂಡಮಾರುತದ ರೂಪ ಪಡೆಯುವ ಸಾಧ್ಯತೆ ಇದೆ. ಇದು ನಂತರ ವಾಯುವ್ಯ ದಿಕ್ಕಿನಲ್ಲಿ ಚಲಿಸಬಹುದು, ಅ.28ರಂದು ಚಂಡಮಾರುತವಾಗಿ ತೀವ್ರಗೊಳ್ಳಲಿದೆ. ಅಕ್ಟೋಬರ್ 28 ರಂದು ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಆಂಧ್ರಪ್ರದೇಶದ ಕಾಕಿನಾಡ ಕರಾವಳಿಯನ್ನು ಅಪ್ಪಳಿಸಬಹುದು ಎಂದು ಐಎಂಡಿ ಹೇಳಿದೆ. ಈ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 90 ರಿಂದ 100 ಕಿ.ಮೀ ಆಗಿರುತ್ತದೆ, ಇದು ಗಂಟೆಗೆ 110 ಕಿ.ಮೀ ವರೆಗೆ ತಲುಪಬಹುದು.
ಮತ್ತಷ್ಟು ಓದಿ: ತಮಿಳುನಾಡಿನಲ್ಲಿ ವರುಣ ಅಬ್ಬರ; ಚಂಡಮಾರುತ ಸಂಭವ; ಬೆಂಗಳೂರಿಗೂ ರಾಚುತ್ತಾ ಮಳೆ?
ರಾಜ್ಯದ ಅನೇಕ ಕರಾವಳಿ ಜಿಲ್ಲೆಗಳಲ್ಲಿ, ವಿಶೇಷವಾಗಿ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ವಿಶಾಖಪಟ್ಟಣಂ, ಕಾಕಿನಾಡ ಮತ್ತು ಶ್ರೀಕಾಕುಳಂನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುತ್ತಿದೆ, ಆದರೆ ಮೊಂಥಾ ಚಂಡಮಾರುತ ಸಕ್ರಿಯಗೊಂಡಂತೆ, ಮಳೆಯ ತೀವ್ರತೆ ಹಲವು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆಡಳಿತವು ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳನ್ನು ಜಾಗರೂಕತೆಯಲ್ಲಿರಿಸಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರಾವಳಿ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುತ್ತಿದೆ.
ಅಕ್ಟೋಬರ್ 27 ರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಅಲ್ಲದೆ, ಕರಾವಳಿ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಬಂದರುಗಳನ್ನು ಸಹ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ತಮಿಳುನಾಡು, ಒಡಿಶಾದಲ್ಲಿ ಕೂಡ ಚಂಡಮಾರುತದ ಪ್ರಭಾವ ಇರಲಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




