AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಂತೆವಾಡದಲ್ಲಿ 37 ನಕ್ಸರು ಶರಣು; ಹಿಂಸಾಮಾರ್ಗ ಬಿಟ್ಟು ಮುಖ್ಯವಾಹಿನಿಗೆ ಬಂದ ಮಾವೋವಾದಿಗಳು

37 Maoists surrender at Dantewada: ಛತ್ತೀಸ್​ಗಡ ರಾಜ್ಯದ ದಾಂತೆವಾಡ ಜಿಲ್ಲೆಯಲ್ಲಿ ಇಂದು ಭಾನುವಾರ (ನ. 20) 37 ಮಾವೋವಾದಿ ಹೋರಾಟಗಾರರು ಪೊಲೀಸರೆದುರು ಶರಣಾಗಿದ್ದಾರೆ. ಕುಮಾಲಿ, ಗೀತಾ, ರಂಜನ್, ಭೀಮಾ ಮೊದಲಾದವರು ಶರಣಾದ ನಕ್ಸಲರಲ್ಲಿ ಸೇರಿದ್ದಾರೆ. ಕಳೆದ 20 ತಿಂಗಳಲ್ಲಿ ದಾಂತೆವಾಡದಲ್ಲಿ 500ಕ್ಕೂ ಅಧಿಕ ಮಾವೋವಾದಿಗಳು ಹಿಂಸಾ ಮಾರ್ಗ ಬಿಟ್ಟಿದ್ದಾರೆ. ಛತ್ತೀಸ್​ಗಡದಲ್ಲೂ ಸಾವಿರಾರು ನಕ್ಸಲರು ಶರಣಾಗಿದ್ದಾರೆ.

ದಾಂತೆವಾಡದಲ್ಲಿ 37 ನಕ್ಸರು ಶರಣು; ಹಿಂಸಾಮಾರ್ಗ ಬಿಟ್ಟು ಮುಖ್ಯವಾಹಿನಿಗೆ ಬಂದ ಮಾವೋವಾದಿಗಳು
ನಕ್ಸಲ್ ನಿಗ್ರಹ ದಳ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 30, 2025 | 6:16 PM

Share

ದಾಂತೆವಾಡ, ನವೆಂಬರ್ 30: ಲಕ್ಷಾಂತರ ರೂ ತಲೆದಂಡ ಹೊತ್ತಿದ್ದ ಹಲವು ನಕ್ಸಲರು (Naxals) ಭಾನುವಾರ ಶರಣಾಗಿದ್ದಾರೆ. ವರದಿಗಳ ಪ್ರಕಾರ ಛತ್ತೀಸ್​ಗಡದ ದಾಂತೆವಾಡ (Dantewada) ಜಿಲ್ಲೆಯಲ್ಲಿ 37 ನಕ್ಸಲರು ಶರಣಾಗಿದ್ದಾರೆ. ಇವರ ಪೈಕಿ 27 ಮಂದಿಗೆ 65 ಲಕ್ಷ ರೂ ತಲೆದಂಡ ಪ್ರಕಟಿಸಲಾಗಿತ್ತು ಎನ್ನಲಾಗಿದೆ. ಒಟ್ಟು 12 ಮಂದಿ ಮಹಿಳೆಯರೂ ಇದ್ದ ಈ 37 ನಕ್ಸಲರು ಪೂನಾ ಮಾರ್ಗಮ್ (Poona Margam- ಮುಖ್ಯವಾಹಿನಿಗೆ ಸೇರ್ಪಡೆ) ಅಭಿಯಾನದ ಭಾಗವಾಗಿ ಭಾನುವಾರ ಹಿರಿಯ ಪೊಲೀಸ್ ಹಾಗೂ ಸಿಆರ್​ಪಿಎಫ್ ಅಧಿಕಾರಿಗಳ ಸಮ್ಮುಖದಲ್ಲಿ ಶಸ್ತ್ರತ್ಯಾಗ ಮಾಡಿದ್ದಾರೆ.

ಕುಮಾಲಿ ಅಲಿಯಾಸ್ ಅನಿತಾ ಮಾಂಡವಿ, ಗೀತಾ ಅಲಿಯಾಸ್ ಲಕ್ಷ್ಮೀ ಮಡಕಂ, ರಂಜನ್ ಅಲಿಯಾಸ್ ಸೋಮಾ ಮಾಂಡವಿ, ಭೀಮಾ ಅಲಿಯಾಸ್ ಜಹಾಜ್ ಕಲ್ಮು ಅವರು ಶರಣಾಗತ ನಕ್ಸಲರಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ತಲಾ 8 ಲಕ್ಷ ರೂ ತಲೆದಂಡ ಇತ್ತು.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್​ಐಆರ್​

ನಕ್ಸಲರಿಗೆ ಶರಣಾಗಲು ಅನುವಾಗುವಂತಹ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳ ಫಲವಾಗಿ ಬಹಳಷ್ಟು ಜನರು ಹಿಂಸಾಮಾರ್ಗಳನ್ನು ತ್ಯಜಿಸಿ ಸಮಾಜದೊಳಗೆ ಸೇರ್ಪಡೆಯಾಗಿದ್ದಾರೆ. ಶರಣಾಗತಿ ಹೊಂದಿದ ಪ್ರತೀ ನಕ್ಸಲರಿಗೆ 50,000 ರೂನ ತತ್​ಕ್ಷಣದ ಧನಸಹಾಯ, ಕೌಶಲ್ಯಾಭಿವೃದ್ಧಿ, ಕೃಷಿ ಭೂಮಿ ಇತ್ಯಾದಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

ನಕ್ಸಲ್ ಪೀಡಿತ ದಾಂತೆವಾಡ ಜಿಲ್ಲೆಯಲ್ಲಿ ಕಳೆದ 20 ತಿಂಗಳಲ್ಲಿ 508ಕ್ಕೂ ಅಧಿಕ ನಕ್ಸಲರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಛತ್ತೀಸ್​ಗಡ ಜಿಲ್ಲೆಯಲ್ಲಿ ಕಳೆದ 23 ತಿಂಗಳಲ್ಲಿ 2,200ಕ್ಕೂ ಅಧಿಕ ನಕ್ಸಲರು ಸಮಾಜದ ವ್ಯವಸ್ಥೆಗೆ ಮರಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?