ಕೊರೊನಾ ಲಸಿಕೆ ರೇಸ್​ಗೆ ಮತ್ತೊಂದು ಸ್ವದೇಶಿ ಸಂಸ್ಥೆ ಎಂಟ್ರಿ: ಜೆನ್ನೋವಾ ವ್ಯಾಕ್ಸಿನ್​ನ ಮಾನವ ಪ್ರಯೋಗಕ್ಕೆ DCGI ಅಸ್ತು

| Updated By: KUSHAL V

Updated on: Dec 10, 2020 | 12:41 PM

ಪುಣೆ ಮೂಲದ ಔಷಧ ತಯಾರಿಕಾ ಸಂಸ್ಥೆ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್​ ಅಭಿವೃದ್ಧಿಪಡಿಸಿರುವ ಕೊವಿಡ್​ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (DCGI)  ಷರತ್ತುಬದ್ಧ ಅನುಮತಿ  ಸಿಕ್ಕಿದೆ.

ಕೊರೊನಾ ಲಸಿಕೆ ರೇಸ್​ಗೆ ಮತ್ತೊಂದು ಸ್ವದೇಶಿ ಸಂಸ್ಥೆ ಎಂಟ್ರಿ: ಜೆನ್ನೋವಾ ವ್ಯಾಕ್ಸಿನ್​ನ ಮಾನವ ಪ್ರಯೋಗಕ್ಕೆ DCGI ಅಸ್ತು
ಕೊವಿಡ್​ ಲಸಿಕೆಯ ಸಾಂದರ್ಭಿಕ ಚಿತ್ರ
Follow us on

ಮುಂಬೈ: ಪುಣೆ ಮೂಲದ ಔಷಧ ತಯಾರಿಕಾ ಸಂಸ್ಥೆ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್​ ಅಭಿವೃದ್ಧಿಪಡಿಸಿರುವ ಕೊವಿಡ್​ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (DCGI)  ಷರತ್ತುಬದ್ಧ ಅನುಮತಿ  ಸಿಕ್ಕಿದೆ. ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್​ ಮತ್ತು ಅಮೆರಿಕಾದ HDT ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲಿ ತಯಾರಾದ ಮೊದಲ mRNA ಲಸಿಕೆ ಇದಾಗಿದೆ ಎಂದು ತಿಳಿದುಬಂದಿದೆ.

ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ಕೋರುವ ಮುನ್ನ ಜೆನ್ನೋವಾ ಸಂಸ್ಥೆಯು ಲಸಿಕೆಯ ಕುರಿತು ಪೂರಕ ಮಾಹಿತಿ ಮತ್ತು ಪ್ರಾಣಿಗಳ ಮೇಲೆ ಬೀರಿದ ಪರಿಣಾಮದ ಫಲಿತಾಂಶವನ್ನು ವಿವರವಾಗಿ ನೀಡಿತ್ತು. ಇದೀಗ, ಸಂಸ್ಥೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ 2ನೇ ಹಂತದ ಪ್ರಯೋಗಕ್ಕೂ ಮುನ್ನ ಮೊದಲ ಹಂತದ ಫಲಿತಾಂಶದ ವಿವರವನ್ನು ನೀಡಿ ಮುಂದುವರಿಯಲು  ಸಂಸ್ಥೆಗೆ ತಿಳಿಸಲಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.

ಪ್ರಯೋಗದ ನಂತರ ಅಧಿಕೃತ ಅನುಮತಿ
ಜೆನ್ನೋವಾ ಸಂಸ್ಥೆ ಸಂಶೋಧಿಸುತ್ತಿರುವ ಲಸಿಕೆಯ ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಬಲ ದೊರೆತಿದೆ. ಈ ಲಸಿಕೆಯು ವಿಶ್ವಾಸಾರ್ಹ ಎನಿಸಿದ್ದು 2 ಹಂತದ ಪ್ರಯೋಗಗಳನ್ನು ಪರಿಶೀಲಿಸಿ ಅಧಿಕೃತವಾಗಿ ಅನುಮತಿ ನೀಡಲಾಗುವುದು ಎಂದು DCGI ತಜ್ಞರು ಹೇಳಿದ್ದಾರೆ.

ಈ ನಡುವೆ, ನಿನ್ನೆ ಭಾರತ್​ ಬಯೋಟೆಕ್​ ಮತ್ತು ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಲಸಿಕಾ ತಯಾರಿಕಾ​ ಸಂಸ್ಥೆಗಳು ಕೊರೊನಾ ಲಸಿಕೆಯ ತುರ್ತು ಅನುಮತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಡೆಹಿಡಿಯಲಾಗಿದೆ. ಹೆಚ್ಚಿನ ವಿವರ ಮತ್ತು ಲಸಿಕೆಯಿಂದ ಉಂಟಾಗುವ ಪರಿಣಾಮದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಎರಡೂ ಸಂಸ್ಥೆಗಳಿಗೆ ತಿಳಿಸಲಾಗಿದೆ.

ಭಾರತ್ ಬಯೋಟೆಕ್, ಸೆರಮ್ ಇನ್​ಸ್ಟಿಟ್ಯೂಟ್ ಲಸಿಕೆಗೆ ಅನುಮತಿ ಇಲ್ಲ ಎಂಬ ಸುದ್ದಿ ನಿಜವೇ?