ತಮಿಳುನಾಡು ಮಾತ್ರ ಕೃಷಿ ಕಾಯ್ದೆ ಬೆಂಬಲಿಸುತ್ತಿದೆ, ಏನಿದರ ರಾಜಕೀಯ ಮರ್ಮ? ಡಿಎಂಕೆ ಸಂಸದೆ ಕನಿಮೋಳಿ ಪ್ರಶ್ನೆ
ನೂತನ ಕೃಷಿ ಕಾಯ್ದೆಯ ಪರ ವಿರೋಧ ತಮಿಳುನಾಡಲ್ಲಿ ಸದ್ದು ಮಾಡುತ್ತಿದೆ. ತಮಿಳುನಾಡು ಸಿಎಂ ಕೆ ಪಳನಿಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಡಿಎಂಕೆ ಸಂಸದೆ ಎಂ ಕೆ ಕನಿಮೋಳಿ, ‘ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಪೈಕಿ ತಮಿಳುನಾಡು ಮಾತ್ರ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿದೆ’ ಎಂದು ಕುಟುಕಿದ್ದಾರೆ.
ಚೆನ್ನೈ: ನೂತನ ಕೃಷಿ ಕಾಯ್ದೆಯ ಪರ ಮತ್ತು ವಿರೋಧ ತಮಿಳುನಾಡಲ್ಲಿ ಸದ್ದು ಮಾಡುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಡಿಎಂಕೆ ಸಂಸದೆ ಎಂ ಕೆ ಕನಿಮೋಳಿ, ‘ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಪೈಕಿ ತಮಿಳುನಾಡು ಮಾತ್ರ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸುತ್ತಿದೆ’ ಎಂದು ಕುಟುಕಿದ್ದಾರೆ.
ನೂತನ ಕೃಷಿ ಕಾಯ್ದೆಗಳು ರೈತರ ಹಕ್ಕುಗಳನ್ನು ಕಸಿಯುತ್ತವೆ. ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳೂ ಈ ಕಾಯ್ದೆಗಳನ್ನು ವಿರೋಧಿಸಿವೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮಾತ್ರ ಈ ಕಾಯ್ದೆಯನ್ನು ವಿರೋಧಿಸಿಲ್ಲ. ಈ ಮೂಲಕ ಅವರು ರಾಜ್ಯದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಡಿಎಂಕೆ ಸದಾಕಾಲ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದಿರುವ ಅವರು, ತಮ್ಮ ತಂದೆ ಕರುಣಾನಿಧಿ ಅಧಿಕಾರಾವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಅಲ್ಲದೇ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿತ್ತು ಎಂದು ಕನಿಮೋಳಿ ತಮ್ಮ ತಂದೆ, ದಿವಂಗತ ಕರುಣಾನಿಧಿಯವರನ್ನು ಕೊಂಡಾಡಿದ್ದಾರೆ.
APMC ಕಾಯಿದೆಗೆ 8 ತಿದ್ದುಪಡಿ! ಕೇಂದ್ರ ಸರ್ಕಾರದ ಪ್ರಸ್ತಾವನೆಯಲ್ಲಿ ಏನಿದೆ? ಇಲ್ಲಿದೆ ವಿವರ..