ರಾಜ್ಯಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರದ ನೆರವು; ಕರ್ನಾಟಕಕ್ಕೆ ಲಭಿಸಲಿದೆ 4,509 ಕೋಟಿ ಹೆಚ್ಚುವರಿ ಸಂಪನ್ಮೂಲ

ಕರ್ನಾಟಕ ಸೇರಿದಂತೆ 9 ರಾಜ್ಯಗಳು ಈ ಯೋಜನೆಯ ಭಾಗವಾಗಿರುವ ಒಂದು ದೇಶ-ಒಂದು ರೇಷನ್ ಕಾರ್ಡ್​ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಜಾರಿಗೊಳಿಸಿವೆ. ಈ ಸಾಧನೆಗಾಗಿ ಕರ್ನಾಟಕಕ್ಕೆ ₹ 4,509 ಕೋಟಿ ಹೆಚ್ಚುವರಿ ಸಂಪನ್ಮೂಲ ಈ ಸಾಧನೆಯಿಂದ ಲಭ್ಯವಾಗಲಿದೆ.

ರಾಜ್ಯಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರದ ನೆರವು; ಕರ್ನಾಟಕಕ್ಕೆ ಲಭಿಸಲಿದೆ 4,509 ಕೋಟಿ ಹೆಚ್ಚುವರಿ ಸಂಪನ್ಮೂಲ
ಪ್ರಾತಿನಿಧಿಕ ಚಿತ್ರ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Dec 17, 2020 | 5:38 PM

ದೆಹಲಿ: ವಿವಿಧ ಕ್ಷೇತ್ರಗಳಲ್ಲಿ ನಾಗರಿಕರ ಬದುಕಿನ ಸ್ಥಿತಿಗತಿಯನ್ನು ಉತ್ತಮಪಡಿಸಲು ನೆರವಾಗುವ ಸುಧಾರಣೆಗಳನ್ನು ಜಾರಿಗೊಳಿಸಲು ರಾಜ್ಯಗಳಿಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗ ಹೇಳಿದೆ. ಸುಧಾರಣಾ ಕ್ರಮಗಳು ಅನುಷ್ಠಾನಗೊಂಡಿರುವುದನ್ನು ಸಂಬಂಧಿಸಿದ ನೋಡೆಲ್ ಸಚಿವಾಲಯವು 15ನೇ ಫೆಬ್ರುವರಿ 2021ರ ಒಳಗೆ ಖಾತ್ರಿಪಡಿಸಿದರೆ, ಗುರಿ ಮುಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅನುಕೂಲಗಳನ್ನು ಪಡೆದುಕೊಳ್ಳಲು ರಾಜ್ಯಗಳು ಅರ್ಹತೆ ಪಡೆದುಕೊಳ್ಳುತ್ತವೆ.

ಕರ್ನಾಟಕ ಸೇರಿದಂತೆ 9 ರಾಜ್ಯಗಳು ಈ ಯೋಜನೆಯ ಭಾಗವಾಗಿರುವ ಒಂದು ದೇಶ-ಒಂದು ರೇಷನ್ ಕಾರ್ಡ್​ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಜಾರಿಗೊಳಿಸಿವೆ. ಈ ಸಾಧನೆಗಾಗಿ ಆಂಧ್ರ ಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ತೆಲಂಗಾಣ, ತ್ರಿಪುರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಸಾಲ ಪಡೆದುಕೊಳ್ಳಲು ಅನುಮತಿ ನೀಡಿದೆ. ಕರ್ನಾಟಕಕ್ಕೆ ₹ 4,509 ಕೋಟಿ ಹೆಚ್ಚುವರಿ ಸಂಪನ್ಮೂಲ ಈ ಸಾಧನೆಯಿಂದ ಲಭ್ಯವಾಗಲಿದೆ.

ರಾಜ್ಯಗಳ ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರವು ನಾಲ್ಕು ನಿರ್ಣಾಯಕ ಕ್ಷೇತ್ರಗಳನ್ನು ಗುರುತಿಸಿದೆ. ಅವುಗಳೆಂದರೆ ದೇಶದೆಲ್ಲೆಡೆ ಪಡಿತರ ಪಡೆಯಲು ಅವಕಾಶ ಮಾಡಿಕೊಡುವ ಒಂದು ದೇಶ ಒಂದು ರೇಷನ್ ಕಾರ್ಡ್ ವ್ಯವಸ್ಥೆಯ ಅನುಷ್ಠಾನ, ಸುಗಮ ವ್ಯಾಪಾರ-ವಹಿವಾಟುಗಳಿಗೆ ಅನುಕೂಲ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನೋಪಯೋಗಿ ಸುಧಾರಣೆಗಳು ಹಾಗೂ ವಿದ್ಯುತ್ ವಲಯದ ಸುಧಾರಣೆಗಳು. ಕುರಿತು ಕಳೆದ ಮೇ 17ರಂದು ರಾಜ್ಯಗಳಿಗೆ ಮಾಹಿತಿ ನೀಡಲಾಗಿತ್ತು.

ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಿಗೆ ಎರಡು ಪ್ರಯೋಜನಗಳನ್ನು ಪಡೆಯಲು ಅರ್ಹತೆ ಸಿಗುತ್ತದೆ. ಪ್ರತಿಯೊಂದು ಸುಧಾರಣೆಯನ್ನು ಪೂರ್ಣಗೊಳಿಸಿದ ನಂತರ ರಾಜ್ಯಗಳ ಆರ್ಥಿಕ ವೃದ್ಧಿದರದ (Gross States Domestic Product – GSDP) ಶೇ 0.25ಕ್ಕೆ ಸಮಾನವಾದ ಹೆಚ್ಚುವರಿ ಸಾಲ ಪಡೆಯಲು ಅವಕಾಶ ಸಿಗುತ್ತದೆ. ನಾಲ್ಕೂ ಸುಧಾರಣೆಯನ್ನು ಯಶಸ್ವಿಯಾಗಿ ಜಾರಿ ಮಾಡಿದ ರಾಜ್ಯಗಳಿಗೆ ಈ ಸೌಲಭ್ಯದಡಿ₹ 2.14 ಲಕ್ಷ ಕೋಟಿವರೆಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಲಾಗುತ್ತದೆ.

ಕೋವಿಡ್ ಸಾಂಕ್ರಾಮಿಕದಿಂದ ಎದುರಾದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಒಟ್ಟುಗೂಡಿಸಿಕೊಳ್ಳಲು ರಾಜ್ಯಗಳ ಸಾಲ ಮಿತಿಯನ್ನು ಅವುಗಳ ಜಿಎಸ್‌ಡಿಪಿಯ ಶೇ 2ರಷ್ಟಕ್ಕೆ  ಹೆಚ್ಚಿಸಲು ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಲ್ಲಿ ನಿರ್ಧರಿಸಿತ್ತು. ₹ 4.27 ಲಕ್ಷ ಕೋಟಿವರೆಗಿನ ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ರಾಜ್ಯಗಳಿಗೆ ಅನುವು ಮಾಡಿಕೊಡುವ ಉದ್ದೇಶವನ್ನು ಇದು ಹೊಂದಿತ್ತು. ಈ ರೀತಿ ಸಂಗ್ರಹವಾದ ಹೆಚ್ಚುವರಿ ಸಂಪನ್ಮೂಲದಲ್ಲಿ ಅರ್ಧದಷ್ಟನ್ನು ಸುಧಾರಣೆಗಳಿಗೆ ಬಳಸುವ ಬಜೆಟ್​ಗೆ ಜೋಡಣೆಯಾಗಿತ್ತು. ಜನರ ಬದುಕು ಉತ್ತಮಪಡಿಸುವಂಥ ಸುಧಾರಣೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳನ್ನು ಪ್ರೇರೇಪಿಸುವ ಉದ್ದೇಶ ಇದಕ್ಕಿತ್ತು.

ನಾಲ್ಕು ಸುಧಾರಣೆಗಳಲ್ಲಿ ಮೂರನ್ನು ಪೂರ್ಣಗೊಳಿಸಿದ ರಾಜ್ಯಗಳಿಗೆ ಲಭ್ಯವಿರುವ ಎರಡನೇ ಪ್ರಯೋಜನವೆಂದರೆ, ‘ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆ’ ಅಡಿಯಲ್ಲಿ ಹೆಚ್ಚುವರಿ ನಿಧಿಗಳ ಲಭ್ಯತೆ. ನಾಲ್ಕು ಸುಧಾರಣೆಗಳ ಪೈಕಿ ಕನಿಷ್ಠ ಮೂರು ಪೂರ್ಣಗೊಳಿಸುವ ರಾಜ್ಯಗಳಿಗೆ ಈ ಯೋಜನೆಯಡಿಯಲ್ಲಿ ರಾಜ್ಯಗಳ ಬಜೆಟ್​ನ ಬಂಡವಾಳ ವೆಚ್ಚದಲ್ಲಿ ₹ 2,000 ಕೋಟಿಯಷ್ಟು ಮೊತ್ತದಷ್ಟು ಹಣಕಾಸು ನೆರವು ಒದಗಿಸಲಾಗುವುದು.

ಆತ್ಮನಿರ್ಭರ್ ಭಾರತ್ ಪ್ಯಾಕೇಜ್ 2.0 ಭಾಗವಾಗಿ ಈ ಯೋಜನೆಯನ್ನು ಕಳೆದ ಅಕ್ಟೋಬರ್ 12ರಂದು ಹಣಕಾಸು ಸಚಿವರು ಘೋಷಿಸಿದ್ದರು. ಕೋವಿಡ್​ನಿಂದಾಗಿ ತೆರಿಗೆ ಸಂಗ್ರಹ ಕಡಿಮೆಯಾಗಿ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚ ಹೆಚ್ಚಿಸುವ ಗುರಿಯನ್ನು ಈ ಘೋಷಣೆ ಹೊಂದಿತ್ತು. ಈ ಯೋಜನೆಗೆ ಒಟ್ಟು ₹ 12 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿತ್ತು. ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚ ಹೆಚ್ಚಾದರೆ, ಭವಿಷ್ಯದ ಆರ್ಥಿಕ ಪ್ರಗತಿಗೆ ಪೂರಕವಾಗುತ್ತದೆ. ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯೂ ಸುಧಾರಿಸುತ್ತದೆ.

ಈ ಎರಡೂ ಪ್ರೋತ್ಸಾಹಕಗಳು ಸುಧಾರಣಾ ಕ್ರಮಗಳನ್ನು ಶೀಘ್ರ ಜಾರಿ ಮಾಡಲು ರಾಜ್ಯಸರ್ಕಾರಗಳನ್ನು ಪ್ರೇರೇಪಿಸಿವೆ. ಈವರೆಗೆ 9 ರಾಜ್ಯಗಳು ಒಂದು ದೇಶ ಒಂದು ರೇಷನ್ ಕಾರ್ಡ್​ ವ್ಯವಸ್ಥೆಯನ್ನು ಜಾರಿಗೆ ತಂದಿವೆ, 4 ರಾಜ್ಯಗಳು ವ್ಯಾಪಾರ ಸುಧಾರಣೆಗಳ ಗುರಿ ಮುಟ್ಟಿವೆ, ಒಂದು ರಾಜ್ಯವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಸುಧಾರಣೆಗಳನ್ನು ಜಾರಿ ಮಾಡಿದೆ. ಈ ರಾಜ್ಯಗಳಿಗೆ ₹ 40,251 ಕೋಟಿ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.

ಸುಧಾರಣೆಗಳನ್ನು ಪೂರ್ಣಗೊಳಿಸುವ ದಿನಾಂಕವನ್ನು ವಿಸ್ತರಿಸುವುದರಿಂದ ಇತರ ರಾಜ್ಯಗಳು ಸುಧಾರಣಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಸಂಬಂಧಿತ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಪ್ರೇರೇಪಿಸುವ ಸಾಧ್ಯತೆಯಿದೆ.

(ಮಾಹಿತಿ: ಪ್ರೆಸ್ ಇನ್​ಫರ್ಮೇಶನ್ ಬ್ಯೂರೊ, ಪಿಟಿಐ)

Published On - 4:39 pm, Thu, 17 December 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್