ಹಾಪುರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಆರು ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತ(Accident)ಗಳು ಹಲವು ಕುಟುಂಬಗಳಲ್ಲಿ ಕತ್ತಲನ್ನು ತುಂಬಿವೆ. ಮದುವೆಯ ಸಂಭ್ರಮ ಮುಗಿಸಿ ಬರುತ್ತಿದ್ದವರು ಸಾವಿನ ಮನೆ ಸೇರಿದ್ದರೆ, ಇನ್ನೊಂದೆಡೆ ಸರಣಿ ಅಪಘಾತಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಉತ್ತರ ಪ್ರದೇಶದ ಹಾಪುರದಲ್ಲಿ ಮದುವೆ ಬಸ್ ಅಪಘಾತಕ್ಕೀಡಾದರೆ, ಬಿಹಾರದ ಕಟಿಹಾರ್‌ನಲ್ಲಿ ವಾಹನಗಳ ನಡುವಿನ ಸರಣಿ ಡಿಕ್ಕಿ ಹಲವರ ಪ್ರಾಣಪಕ್ಷಿ ಹಾರಿಸಿದೆ.

ಹಾಪುರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಆರು ಮಂದಿ ಸಾವು, ಹಲವರ ಸ್ಥಿತಿ ಗಂಭೀರ
ಅಪಘಾತ
Image Credit source: India TV

Updated on: Apr 13, 2026 | 7:36 AM

ಲಕ್ನೋ, ಏಪ್ರಿಲ್ 13: ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತ(Accident)ಗಳು ಹಲವು ಕುಟುಂಬಗಳಲ್ಲಿ ಕತ್ತಲನ್ನು ತುಂಬಿವೆ. ಮದುವೆಯ ಸಂಭ್ರಮ ಮುಗಿಸಿ ಬರುತ್ತಿದ್ದವರು ಸಾವಿನ ಮನೆ ಸೇರಿದ್ದರೆ, ಇನ್ನೊಂದೆಡೆ ಸರಣಿ ಅಪಘಾತಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಉತ್ತರ ಪ್ರದೇಶದ ಹಾಪುರದಲ್ಲಿ ಮದುವೆ ಬಸ್ ಅಪಘಾತಕ್ಕೀಡಾದರೆ, ಬಿಹಾರದ ಕಟಿಹಾರ್‌ನಲ್ಲಿ ವಾಹನಗಳ ನಡುವಿನ ಸರಣಿ ಡಿಕ್ಕಿ ಹಲವರ ಪ್ರಾಣಪಕ್ಷಿ ಹಾರಿಸಿದೆ.

ಹಾಪುರ: ಮದುವೆ ಮೆರವಣಿಗೆ ಮುಗಿಸಿ ಬರುವಾಗ ಮೃತ್ಯುವಿನ ಅಟ್ಟಹಾಸ
ಉತ್ತರ ಪ್ರದೇಶದ ಹಾಪುರದ ಧೌಲಾನಾ-ಗುಲಾವತಿ ರಸ್ತೆಯಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. 12 ಮಂದಿ ಪ್ರಯಾಣಿಕರಿದ್ದ ಬಸ್ ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಹಾಪುರ್ ಎಸ್ಪಿ ಜ್ಞಾನಂಜಯ್ ಸಿಂಗ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ಗಾಯಗೊಂಡ 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಕಾನೂನು ಕ್ರಮ ಜಾರಿಯಲ್ಲಿದೆ. ಮೃತರ ಪೈಕಿ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ, ಅವರು ಬಸ್ ಚಾಲಕನಿರಬಹುದು ಎಂದು ಎಸ್ಪಿ ತಿಳಿಸಿದ್ದಾರೆ.

ಬಿಹಾರ ಅಪಘಾತ
ಬಿಹಾರದ ಕಟಿಹಾರ್ ಜಿಲ್ಲೆಯ ಕೋಧಾ ಬ್ಲಾಕ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಮತ್ತೊಂದು ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಬಸ್, ಟ್ರಕ್ ಮತ್ತು ಪಿಕಪ್ ವ್ಯಾನ್ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದ್ದರೂ, ಆಸ್ಪತ್ರೆಗೆ ದಾಖಲಾದ ನಂತರ ಆರು ಜನರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಎಸ್ಪಿ ಶಿಖರ್ ಚೌಧರಿ ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ: ಅಪ್ಪ-ಮಗಳಿಗೆ ಯಮನಾಗಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್: ಕಲಬುರಗಿ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ

ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಈ ಭೀಕರ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪಿಕಪ್ ವ್ಯಾನ್‌ನಲ್ಲಿದ್ದ ಪ್ರಯಾಣಿಕರು ಅತಿ ಹೆಚ್ಚು ಹಾನಿಗೊಳಗಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us