ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ: ದೆಹಲಿ ಪೊಲೀಸ್

ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ: ದೆಹಲಿ ಪೊಲೀಸ್
ಆಕ್ಸಿಜನ್ ಸಿಲಿಂಡರ್

ಏಪ್ರಿಲ್ 22 ರಂದು ಆಸ್ಪತ್ರೆಯ ದ್ರವ ಆಮ್ಲಜನಕದ ಟ್ಯಾಂಕ್ 5.8 MT ಆಮ್ಲಜನಕವನ್ನು ಹೊಂದಿತ್ತು ಮತ್ತು ಏಪ್ರಿಲ್ 23 ರ ಸಂಜೆ 5.30 ಕ್ಕೆ ಮರುಪೂರಣ ನಿಗದಿತ ಆಗಿದ್ದರೂ ರಾತ್ರಿ 11.50 ರವರೆಗೆ ಮರುಪೂರಣ ಮಾಡಲಾಗಲಿಲ್ಲ. ಅಂದರೆ 30 ಗಂಟೆಗಳ ಅಂತರವನ್ನು ಹೊಂದಿದೆ ಎಂದು ಆಸ್ಪತ್ರೆಯು ಹೇಳಿದೆ.

TV9kannada Web Team

| Edited By: Rashmi Kallakatta

Aug 03, 2021 | 9:16 PM

ದೆಹಲಿ: ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಸ್ಟೇಟಸ್ ರಿಪೋರ್ಟ್​​ನ ಪ್ರಕಾರ ಏಪ್ರಿಲ್‌ನಲ್ಲಿ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 21 ಕೊವಿಡ್ ರೋಗಿಗಳ ಸಾವು ಆಮ್ಲಜನಕದ ಕೊರತೆಯಿಂದ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ವೇಳೆ  ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಸಾವುಗಳು ಮತ್ತು ಆಮ್ಲಜನಕದ ಪೂರೈಕೆಯ ಕೊರತೆ ನಡುವೆ ಇದು ಸಂಬಂಧವಿರುವಂತೆ ಇದು ಕಾಣಿಸುತ್ತಿದೆ ಎಂದು ಆಸ್ಪತ್ರೆ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಉಪ ಪೊಲೀಸ್ ಆಯುಕ್ತ ಪ್ರಣವ್ ತಾಯಲ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿವೇಕ್ ಬೆನಿವಾಲ್ ಮುಂದೆ ಸ್ಟೇಟಸ್ ವರದಿಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಸ್ಥಿತಿ ವರದಿಯು ಆಸ್ಪತ್ರೆಯ ಉತ್ತರವನ್ನೂ ಹೊಂದಿದೆ, “ಮೃತಪಟ್ಟ ಎಲ್ಲ ವ್ಯಕ್ತಿಗಳ ಸಾವಿನ  ವಿವರವನ್ನು ಪರಿಶೀಲಿಸಿದಾಗ, ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿಯ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ ಎಂದು ಆಸ್ಪತ್ರೆ ಹೇಳಿದೆ.

ಆದಾಗ್ಯೂ, ಸಂಬಂಧಿತ ಸಮಯದ ಅವಧಿಯಲ್ಲಿ, 39 ಗಂಟೆಗಳ ಕಾಲ ಆಮ್ಲಜನಕದ ಪೂರೈಕೆಯನ್ನು ಮರುಪೂರಣ ಮಾಡಲಾಗಿಲ್ಲ, ಇದು “ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಂಟುಮಾಡಿದೆ” ಎಂದು ಆಸ್ಪತ್ರೆ ನ್ಯಾಯಾಲಯಕ್ಕೆ ತಿಳಿಸಿದೆ.

ಏಪ್ರಿಲ್ 22 ರಂದು ಆಸ್ಪತ್ರೆಯ ದ್ರವ ಆಮ್ಲಜನಕದ ಟ್ಯಾಂಕ್ 5.8 MT ಆಮ್ಲಜನಕವನ್ನು ಹೊಂದಿತ್ತು ಮತ್ತು ಏಪ್ರಿಲ್ 23 ರ ಸಂಜೆ 5.30 ಕ್ಕೆ ಮರುಪೂರಣ ನಿಗದಿತ ಆಗಿದ್ದರೂ ರಾತ್ರಿ 11.50 ರವರೆಗೆ ಮರುಪೂರಣ ಮಾಡಲಾಗಲಿಲ್ಲ. ಅಂದರೆ 30 ಗಂಟೆಗಳ ಅಂತರವನ್ನು ಹೊಂದಿದೆ ಎಂದು ಆಸ್ಪತ್ರೆಯು ಹೇಳಿದೆ.

“ಆಮ್ಲಜನಕವು ಸಂಪೂರ್ಣವಾಗಿ ಖಾಲಿಯಾಗದೇ ಇದ್ದರೂ, ಮುಂದಿನ ಪೂರೈಕೆಯ ಅನಿಶ್ಚಿತತೆ ಇತ್ತು, ಆದ್ದರಿಂದ ಪೂರೈಕೆ ಮತ್ತು ಆಮ್ಲಜನಕದ ಒತ್ತಡವನ್ನು ತಡೆದುಕೊಳ್ಳಲು ಸಿಲಿಂಡರ್‌ಗಳಲ್ಲಿ ಪೂರಕ ಮೀಸಲು ಬಳಕೆಯಲ್ಲಿತ್ತು.”

ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ಕೂಡ ಘಟನೆಗೆ ಮುನ್ನ ಮತ್ತು ನಂತರದ ಸರಾಸರಿ ಮರಣವು ಕ್ರಮವಾಗಿ ಎರಡು ಮತ್ತು ಮೂರು ಮಾತ್ರ ಎಂದು ಹೇಳಿದೆ. ಇದು 7-8 ಗಂಟೆಗಳ ಅವಧಿಯಲ್ಲಿ 21 ಕ್ಕೆ ಏರಿತು. ಪರಿಣಾಮ ಈ ಪರಿಸ್ಥಿತಿಯು ಸಂಭವಿಸಿದಾಗ, ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿದೆ ಎಂದು ಅದು ಹೇಳಿದೆ.

ಮಧ್ಯಾಹ್ನದ ಸಮಯದಲ್ಲಿ ತುರ್ತು ಕರೆಗಳನ್ನು ಮಾಡಿದರು. ಆದರೆ ರಾತ್ರಿಯಲ್ಲಿ ಆಮ್ಲಜನಕದ ಮಟ್ಟವು ಕುಸಿಯಿತು ಮತ್ತು ದ್ರವ ಆಮ್ಲಜನಕವು ಬಹುತೇಕ ಖಾಲಿಯಾಯಿತು, ನಂತರ ಅವರು ಆಮ್ಲಜನಕದ ಸಿಲಿಂಡರ್‌ಗಳ ಮೂಲಕ ಪೂರೈಕೆಯನ್ನು ನಿರ್ವಹಿಸಬೇಕಾಯಿತು.

“ಅವರ ಆಸ್ಪತ್ರೆಯ ಇತಿಹಾಸದಲ್ಲಿ ಇದುವರೆಗೆ ಸಂಭವಿಸಿಲ್ಲ, ಸಂಪೂರ್ಣ ನಿಯಮಿತ ಪೂರೈಕೆಯನ್ನು ಸಿಲಿಂಡರ್‌ಗಳ ರೂಪದಲ್ಲಿ ಮೀಸಲುಗಳಿಗೆ ಬದಲಾಯಿಸಬೇಕಾಗಿತ್ತು. ಈ ಪರಿಸ್ಥಿತಿಯು ಕೈಮೀರಿ ಹೋಗಿತ್ತು ಮತ್ತು ಆಮ್ಲಜನಕದ ಕೊರತೆಯಿಂದ ಉಂಟಾದ ತೀವ್ರ ತುರ್ತು ಪರಿಸ್ಥಿತಿಗೆ ಸಮನಾಗಿದೆ “ಎಂದು ಆಸ್ಪತ್ರೆ ಹೇಳಿದೆ.

ರೋಗಿಗಳ ಸಾವಿನ ಪ್ರಾಥಮಿಕ ಪರಿಶೀಲನೆಯ ನಂತರ, ಏಪ್ರಿಲ್ 23 ರ ರಾತ್ರಿ 9.45 ರ ಸುಮಾರಿಗೆ ನಾಲ್ಕು ಪ್ರಕರಣಗಳಲ್ಲಿ ಆಮ್ಲಜನಕದ ಒತ್ತಡ ಕಡಿಮೆಯಾಗಿದೆ ಎಂದು ಕಂಡುಬಂದಿದೆ, ಇದು ಅಂತಹ ಸಂಖ್ಯೆಯಲ್ಲಿ ಅಸಾಮಾನ್ಯ ಸಂಗತಿಯಾಗಿದೆ ಎಂದು ಆಸ್ಪತ್ರೆ ಹೇಳಿದೆ.

ಆಸ್ಪತ್ರೆಯ ಆಡಳಿತವನ್ನು ಶಿಕ್ಷಿಸಬೇಕು ಎಂದು ಮೃತರ ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಪೊಲೀಸರು ತಮ್ಮ ವಿರುದ್ಧ ಬಂಧಿಸಿಲ್ಲ ಅಥವಾ ವಿಚಾರಣೆಯನ್ನು ಆರಂಭಿಸಿಲ್ಲ ಎಂದು ಆರೋಪಿಸಿದರು.

ವಕೀಲರಾದ ಸಾಹಿಲ್ ಅಹುಜಾ ಮತ್ತು ಸಿದ್ದಾಂತ್ ಸೇಥಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ದೂರುದಾರರು ಆಸ್ಪತ್ರೆಯ ಆಡಳಿತವು ರೋಗಿಗಳನ್ನು ದಾಖಲಿಸುವುದನ್ನು ನಿಲ್ಲಿಸಬೇಕಿತ್ತು ಅಥವಾ ಆಮ್ಲಜನಕದ ಪೂರೈಕೆಯ ಕೊರತೆಯಿದ್ದಲ್ಲಿ ಅವರನ್ನು ಬಿಡುಗಡೆ ಮಾಡಲು ಆರಂಭಿಸಬೇಕು ಎಂದು ಹೇಳಿದ್ದಾರೆ.

ದೆಹಲಿ ಸರ್ಕಾರದ ತಜ್ಞರ ಸಮಿತಿಯು ಈ ಮೊದಲು “ಸಾವಿಗೆ ಕಾರಣ ಆಮ್ಲಜನಕದ ಕೊರತೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲ” ಎಂದು ಹೇಳಿತ್ತು.

ಇದನ್ನೂ ಓದಿ: ಎಂಟು ರಾಜ್ಯಗಳಲ್ಲಿ ಆರ್-ಮೌಲ್ಯ ಅಧಿಕ, ಕೊವಿಡ್ ಎರಡನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಸರ್ಕಾರ

(Death of 21 Covid patients at Jaipur Golden Hospital was not caused due to shortage of oxygen tells Delhi Police)

Follow us on

Related Stories

Most Read Stories

Click on your DTH Provider to Add TV9 Kannada