ಎಂಟು ರಾಜ್ಯಗಳಲ್ಲಿ ಆರ್-ಮೌಲ್ಯ ಅಧಿಕ, ಕೊವಿಡ್ ಎರಡನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಸರ್ಕಾರ
Coronavirus: ಕೇರಳದ 10 ಜಿಲ್ಲೆಗಳು ಸೇರಿದಂತೆ 18 ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕೇರಳ, ಮಹಾರಾಷ್ಟ್ರ, ಮಣಿಪುರ ಮತ್ತು ಅರುಣಾಚಲ ಪ್ರದೇಶ - ಈ ಆರು ರಾಜ್ಯಗಳ ಈ 18 ಜಿಲ್ಲೆಗಳು ಈಗ ಒಟ್ಟು ಕೊವಿಡ್ ಪ್ರಕರಣಗಳ ಪೈಕಿ ಶೇಕಡ 47.5 ರಷ್ಟು ವರದಿ ಆಗುತ್ತಿವೆ
ದೆಹಲಿ: ಭಾರತದ ಆರ್ ಮೌಲ್ಯ (reproductive number ) ಕೊವಿಡ್ -19 ಸಾಂಕ್ರಾಮಿಕ ರೋಗವು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದರ ಸೂಚಕವಾಗಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಎಂಟು ರಾಜ್ಯಗಳಲ್ಲಿ ಇದು 1 ಕ್ಕಿಂತ ಹೆಚ್ಚು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 1 ಕ್ಕಿಂತ ಹೆಚ್ಚಿನ ಆರ್-ಮೌಲ್ಯ ಎಂದರೆ ಈಗಾಗಲೇ ಸೋಂಕಿತ ವ್ಯಕ್ತಿಯಿಂದ ಸರಾಸರಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಅದು ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಕಳೆದ ವಾರದಲ್ಲಿ, ದೇಶದಲ್ಲಿ ವರದಿಯಾದ ಒಟ್ಟು ಕೊವಿಡ್ -19 ಪ್ರಕರಣಗಳಲ್ಲಿ ಶೇಕಡಾ 49.85 ರಷ್ಟು ಕೇರಳದಿಂದ ವರದಿಯಾಗಿದೆ ಎಂದು ಕೇಂದ್ರ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ “ಭಾರತದ ಎಂಟು ರಾಜ್ಯಗಳಲ್ಲಿ ಆರ್-ಸಂಖ್ಯೆ ಅಧಿಕವಾಗಿದೆ. ಈ ಸಂಖ್ಯೆಯು ಒಂದಕ್ಕಿಂತ ಹೆಚ್ಚಾದಾಗ, ಇದರ ಅರ್ಥ ಪ್ರಕರಣ ಹೆಚ್ಚುತ್ತಿದೆ ಮತ್ತು ಅದನ್ನು ನಿಯಂತ್ರಿಸುವ ಅಗತ್ಯವಿದೆ. ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಭಾರತವು ಸರಾಸರಿ 1.2 ಆರ್ ಸಂಖ್ಯೆಯನ್ನು ಹೊಂದಿವೆ. ಇಂಡಿಯನ್ ಎಕ್ಸ್‌ಪ್ರೆಸ್ ಈ ಹಿಂದೆ ಜೂನ್ ಕೊನೆಯ ವಾರದವರೆಗೆ ಆರ್-ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವರದಿ ಮಾಡಿತ್ತು ಆದರೆ ನಂತರದ ಅವಧಿಯಲ್ಲಿ, ಜೂನ್ 20 ಮತ್ತು ಜುಲೈ 7 ರ ನಡುವೆ, ಇದು ಗಮನಾರ್ಹವಾಗಿ ಏರಿತು. ಈ ಅವಧಿಯಲ್ಲಿ ಇಡೀ ದೇಶಕ್ಕೆ ಆರ್-ಮೌಲ್ಯವು 0.88 ಆಗಿತ್ತು, ಮೇ 15 ರಿಂದ ಜೂನ್ 26 ನಡುವಿನ ಅವಧಿಗೆ 0.78 ಆಗಿತ್ತು ಎಂದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯಲ್ಲಿ ಸೀತಾಭ್ರಾ ಸಿನ್ಹಾ ನೇತೃತ್ವದ ಸಂಶೋಧಕರ ತಂಡದ ವಿಶ್ಲೇಷಣೆ ಹೇಳಿತ್ತು.
ಕೇರಳದ 10 ಜಿಲ್ಲೆಗಳು ಸೇರಿದಂತೆ 18 ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕೇರಳ, ಮಹಾರಾಷ್ಟ್ರ, ಮಣಿಪುರ ಮತ್ತು ಅರುಣಾಚಲ ಪ್ರದೇಶ – ಈ ಆರು ರಾಜ್ಯಗಳ ಈ 18 ಜಿಲ್ಲೆಗಳು ಈಗ ಒಟ್ಟು ಕೊವಿಡ್ ಪ್ರಕರಣಗಳ ಪೈಕಿ ಶೇಕಡ 47.5 ರಷ್ಟು ವರದಿ ಆಗುತ್ತಿವೆ. ಇದಲ್ಲದೆ, 44 ಜಿಲ್ಲೆಗಳಲ್ಲಿ ಪ್ರಕರಣದ ಪಾಸಿಟಿವಿ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಈ ಜಿಲ್ಲೆಗಳು ಕೇರಳ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ಗಳಲ್ಲಿದೆ. 222 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಜೂನ್ 1 ರಂದು, 279 ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು ಆದರೆ ಈ ಸಂಖ್ಯೆ ಈಗ 57 ಜಿಲ್ಲೆಗಳಿಗೆ ಇಳಿದಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
Growth rate & active cases are also assessed using Reproduction (R) Number. It is the average number of new infections generated by one infected individual during the entire infectious period: Lav Agarwal, Joint Secretary, Union Health Ministry (1/3) pic.twitter.com/lSCP8AZXqB
— ANI (@ANI) August 3, 2021
ಭಾರತದಲ್ಲಿ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಅಗರ್ವಾಲ್ ಹೇಳಿದರು. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಕೊವಿಡ್ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಸಾಂಕ್ರಾಮಿಕ ರೋಗವು ಮುಗಿಯಲು ಇನ್ನೂ ದೂರವಿದೆ ಎಂದು ಅವರು ಹೇಳಿದರು.
ಲಸಿಕೆಯ ಕುರಿತು ಮಾತನಾಡಿದ ಅವರು ಆರೋಗ್ಯ ಸಚಿವಾಲಯವು ದೇಶದಲ್ಲಿ ಇದುವರೆಗೆ ಸುಮಾರು 47.85 ಕೋಟಿ ಡೋಸ್‌ಗಳನ್ನು ನೀಡಲಾಗಿದೆ, ಇದರಲ್ಲಿ 37.26 ಕೋಟಿ ಮೊದಲ ಡೋಸ್‌ಗಳು ಮತ್ತು 10.59 ಕೋಟಿ ಎರಡನೇ ಡೋಸ್‌ಗಳನ್ನು ನೀಡಲಾಗಿದೆ.
“ನಾವು ಮೇನಲ್ಲಿ 19.6 ಲಕ್ಷ ಡೋಸ್‌ಗಳನ್ನು ಮತ್ತು ಜುಲೈನಲ್ಲಿ 43.41 ಲಕ್ಷ ಡೋಸ್‌ಗಳನ್ನು ನೀಡಿದ್ದೇವೆ. ಜುಲೈನಲ್ಲಿ ನೀಡಲಾದ ಲಸಿಕೆ ಡೋಸ್‌ಗಳ ಸಂಖ್ಯೆ ಮೇ ತಿಂಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’
ಇದನ್ನೂ ಓದಿ: Viaan: ಅಪ್ಪನ ಅರೆಸ್ಟ್, ಅಮ್ಮನ ಕಣ್ಣೀರ ನಡುವೆ ಮೊದಲ ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಮಗ
(Reproductive number high in eight states second wave is still not over in India says Centre)
Published On - 8:20 pm, Tue, 3 August 21