Delhi Pollution: ವೀಕೆಂಡ್ ಲಾಕ್​ಡೌನ್​ಗೆ ಸಿದ್ಧ, ಕೋರ್ಟ್​ ಸೂಚನೆಗೆ ಕಾಯುತ್ತಿದ್ದೇವೆ; ದೆಹಲಿ ಸರ್ಕಾರ

TV9 Digital Desk

| Edited By: Sushma Chakre

Updated on: Nov 16, 2021 | 3:12 PM

ದೆಹಲಿಯಲ್ಲಿ ನಾವು ವಾರಾಂತ್ಯದ ಲಾಕ್‌ಡೌನ್ ಬಗ್ಗೆ ಪ್ರಸ್ತಾಪಿಸಿದ್ದೇವೆ, ನಾವು ಅದಕ್ಕೆ ಸಿದ್ಧರಿದ್ದೇವೆ. ಲಾಕ್​ಡೌನ್ ಮಾಡಬೇಕೇ? ಬೇಡವೇ? ಎಂಬುದು ಈಗ ನ್ಯಾಯಾಲಯದ ನಿರ್ದೇಶನಗಳನ್ನು ಅವಲಂಬಿಸಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

Delhi Pollution: ವೀಕೆಂಡ್ ಲಾಕ್​ಡೌನ್​ಗೆ ಸಿದ್ಧ, ಕೋರ್ಟ್​ ಸೂಚನೆಗೆ ಕಾಯುತ್ತಿದ್ದೇವೆ; ದೆಹಲಿ ಸರ್ಕಾರ
ದೆಹಲಿ ವಾಯುಮಾಲಿನ್ಯ

ನವದೆಹಲಿ: ಸುಪ್ರೀಂ ಕೋರ್ಟ್​ ಆದೇಶದಂತೆ ವಾಯುಮಾಲಿನ್ಯ ನಿಯಂತ್ರಿಸಲು ತುರ್ತು ಸಭೆ ನಡೆಸಿದ ದೆಹಲಿ ಸರ್ಕಾರ ದೆಹಲಿಯಲ್ಲಿ ವೀಕೆಂಡ್ ಲಾಕ್​ಡೌನ್ (Weekend Lockdown), ಒಂದು ವಾರಗಳ ಕಾಲ ವರ್ಕ್ ಫ್ರಮ್ ಹೋಂ (Work from Home) ನಡೆಸಲು ಸೂಚಿಸಲಾಗಿದೆ. ದೆಹಲಿಯಲ್ಲಿ ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಕೆಲಕಾಲ ಸ್ಥಗಿತಗೊಳಿಸುವಂತೆ ದೆಹಲಿ ಸರ್ಕಾರ (Delhi Government) ಶಿಫಾರಸು ಮಾಡಿದೆ. ಸುಪ್ರೀಂ ಕೋರ್ಟ್ ಬಿಕ್ಕಟ್ಟಿನ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎತ್ತಿದ್ದು ಮತ್ತು ತುರ್ತು ಕ್ರಮಗಳಿಗೆ ಕರೆ ನೀಡಿದ ಮರುದಿನವೇ ಕೇಂದ್ರ ಮತ್ತು ದೆಹಲಿಯ ಅಧಿಕಾರಿಗಳು ಮಾಲಿನ್ಯದ (Delhi Air Pollution) ವಿರುದ್ಧ ಹೋರಾಡಲು ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ನಾವು ವಾರಾಂತ್ಯದ ಲಾಕ್‌ಡೌನ್ ಬಗ್ಗೆ ಪ್ರಸ್ತಾಪಿಸಿದ್ದೇವೆ, ನಾವು ಅದಕ್ಕೆ ಸಿದ್ಧರಿದ್ದೇವೆ. ಲಾಕ್​ಡೌನ್ ಮಾಡಬೇಕೇ? ಬೇಡವೇ? ಎಂಬುದು ಈಗ ನ್ಯಾಯಾಲಯದ ನಿರ್ದೇಶನಗಳನ್ನು ಅವಲಂಬಿಸಿದೆ ಎಂದು ದೆಹಲಿ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮತ್ತು ಸುತ್ತಮುತ್ತಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸುಪ್ರೀಂ ಕೋರ್ಟ್ ನಿನ್ನೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ನಡೆಸಲಾಯಿತು. ತುರ್ತು ಸಭೆ ನಡೆಸಿ ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಸುವಂತೆ ನಾವು ಕೇಂದ್ರಕ್ಕೆ ಸೂಚಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ದೆಹಲಿ ಚಿಕ್ಕದಾಗಿರುವುದರಿಂದ ಲಾಕ್​ಡೌನ್, ವಾಯು ಗುಣಮಟ್ಟದ ಮೇಲೆ ಸೀಮಿತ ಪರಿಣಾಮ‌ ಬೀರಲಿದೆ. ವಾಯು ಗುಣಮಟ್ಟದ ವಿಷಯವನ್ನು ಇಡೀ NCR ಪ್ರದೇಶದಲ್ಲಿ ಪರಿಹರಿಸಬೇಕು. ಕೇಂದ್ರ ಸರ್ಕಾರವು ಇಡೀ NCR ಪ್ರದೇಶದಲ್ಲಿ ಲಾಕ್​ಡೌನ್ ಮಾಡಿದರೆ ನಾವು ದೆಹಲಿಯನ್ನು‌ ಲಾಕ್​ಡೌನ್ ಮಾಡಲು ಸಿದ್ಧವಿರುವುದಾಗಿ ಕೇಜ್ರಿವಾಲ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿತ್ತು.

ಕೃಷಿ ತ್ಯಾಜ್ಯದಿಂದ ಶೇಕಡಾ 10ರಷ್ಟು ಮಾತ್ರ ಮಾಲಿನ್ಯವಾಗುತ್ತಿದೆ. ರಸ್ತೆಯ ಧೂಳಿನಿಂದಾಗಿ ಹೆಚ್ಚಿನ ಮಾಲಿನ್ಯವಾಗುತ್ತಿದೆ. ಹೀಗಾಗಿ ಸಮ-ಬೆಸ ಸಂಖ್ಯೆ ವಾಹನ‌ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಂದ ವಾದ ಮಂಡಿಸಿದ್ದಾರೆ. ಆದರೂ ವಾಯುಮಾಲಿನ್ಯ ಕಡಿಮೆಯಾಗದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 2 ದಿನ ಟ್ರಾಫಿಕ್ ಏಕೆ ಬಂದ್ ಮಾಡಬಾರದು? ಎಂದು ಕೇಂದ್ರ ಸರ್ಕಾರ, ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಶಾಲೆಗಳನ್ನು ಮುಂದಿನ ಸೋಮವಾರದವರೆಗೆ ಮುಚ್ಚಲು ಘೋಷಿಸಿದೆ. ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Delhi Pollution: ದೆಹಲಿಯಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಸಿದ್ಧ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ ಸರ್ಕಾರ

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಲಾಕ್​ಡೌನ್ ಜಾರಿ; ಸುಪ್ರೀಂ ಕೋರ್ಟ್​ಗೆ ಇಂದು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada