AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಮೇಲ್ಛಾವಣಿ ಕುಸಿತದ ತನಿಖೆಗೆ ಸಮಿತಿ ರಚನೆ

ದೆಹಲಿಯಲ್ಲಿ ರಾತ್ರಿಯಿಡೀ ಭಾರೀ ಮಳೆ ಮತ್ತು ಗಾಳಿಯಿಂದಾಗಿ, ಟರ್ಮಿನಲ್ 1 ನ ಹಳೆಯ ನಿರ್ಗಮನ ಫೋರ್ಕೋರ್ಟ್‌ನಲ್ಲಿರುವ ಮೇಲ್ಛಾವಣಿ ಇಂದು (ಶುಕ್ರವಾರ) ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಭಾಗಶಃ ಕುಸಿದಿದೆ. ನಿರಂತರವಾಗಿ ಭಾರೀ ಮಳೆಯಾಗಿರುವುದೇ ಮೇಲ್ಛಾವಣಿ ಕುಸಿತಕ್ಕೆ ಕಾರಣ ಎಂದು DIAL ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಮೇಲ್ಛಾವಣಿ ಕುಸಿತದ ತನಿಖೆಗೆ ಸಮಿತಿ ರಚನೆ
ದೆಹಲಿ ವಿಮಾನ ನಿಲ್ದಾಣ
ರಶ್ಮಿ ಕಲ್ಲಕಟ್ಟ
|

Updated on: Jun 28, 2024 | 7:03 PM

Share

ದೆಹಲಿ ಜೂನ್ 28:  ದೆಹಲಿ ವಿಮಾನ ನಿಲ್ದಾಣದ (Delhi airport) ಟರ್ಮಿನಲ್ 1 ರಲ್ಲಿ ಮೇಲ್ಛಾವಣಿ ಕುಸಿದು (roof collapse) ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು ಎಂಟು ಜನರಿಗೆ ಗಾಯಗಳಾಗಿವೆ.ಇದೀಗ ಮೇಲ್ಛಾವಣಿ ಕುಸಿತದ ಕುರಿತು ತನಿಖೆ ನಡೆಸಲು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಶುಕ್ರವಾರ ಸಮಿತಿಯನ್ನು ರಚಿಸಿದೆ. ದೆಹಲಿಯಲ್ಲಿ ರಾತ್ರಿಯಿಡೀ ಭಾರೀ ಮಳೆ ಮತ್ತು ಗಾಳಿಯಿಂದಾಗಿ, ಟರ್ಮಿನಲ್ 1 (T1) ನ ಹಳೆಯ ನಿರ್ಗಮನ ಫೋರ್ಕೋರ್ಟ್‌ನಲ್ಲಿರುವ ಮೇಲ್ಛಾವಣಿ ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಭಾಗಶಃ ಕುಸಿದಿದೆ. ನಿರಂತರವಾಗಿ ಭಾರೀ ಮಳೆಯಾಗಿರುವುದೇ ಮೇಲ್ಛಾವಣಿ ಕುಸಿತಕ್ಕೆ ಕಾರಣ ಎಂದು DIAL ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿ ಸಫ್ದರ್‌ಜಂಗ್ ಕಳೆದ 24 ಗಂಟೆಗಳಲ್ಲಿ (ಮುಖ್ಯವಾಗಿ ಇಂದು ಮುಂಜಾನೆ) 228.1 ಮಿಮೀ ಭಾರಿ ಮಳೆಯನ್ನು ದಾಖಲಿಸಿದೆ. 1936 ರ ನಂತರ ಜೂನ್‌ನಲ್ಲಿ ದೆಹಲಿಯಲ್ಲಿ ಇದು ಅತಿ ಹೆಚ್ಚು 24 ಗಂಟೆಗಳ ಮಳೆಯಾಗಿದೆ, ಕಳೆದ 30 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸರಾಸರಿ ಮಳೆ 75.2 ಮಿಮೀ ಆಗಿತ್ತು ಎಂದು ವಕ್ತಾರರು ಹೇಳಿದ್ದಾರೆ.

ಅಗ್ನಿಶಾಮಕ, ವೈದ್ಯಕೀಯ ತಂಡ ಮತ್ತು ಕಾರ್ಯಾಚರಣೆ ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡದಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು ಎಂದು ದೆಹಲಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. T1 ನಿಂದ ಪ್ರಯಾಣಿಕರು ಮತ್ತು ಎಲ್ಲಾ ವ್ಯಕ್ತಿಗಳ ಸಂಪೂರ್ಣ ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲಾಯಿತು.

ಈ ಘಟನೆಯ ಸಮಯದಲ್ಲಿ, ನಾಲ್ಕು ವಾಹನಗಳು ಹಾನಿಗೊಳಗಾಗಿವೆ ಮತ್ತು ಎಂಟು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೆಹಲಿ ವಿಮಾನ ನಿಲ್ದಾಣದ ಮೇದಾಂತ ಕೇಂದ್ರದಲ್ಲಿ ತಕ್ಷಣದ ವೈದ್ಯಕೀಯ ನೆರವು ನೀಡಲಾಯಿತು. ಅಗತ್ಯವಿರುವಂತೆ ಹೆಚ್ಚಿನ ವೈದ್ಯಕೀಯ ಮೇಲ್ವಿಚಾರಣೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್, ಘಟನೆಯಲ್ಲಿ ಒಂದು ಸಾವು ವರದಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿ ಕುಸಿತಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಹೇಳಿದೆ. “ಭ್ರಷ್ಟ, ಅಸಮರ್ಥ ಮತ್ತು ಸ್ವಾರ್ಥಿ ಸರ್ಕಾರದ” ಕ್ರಮಗಳಿಂದಾಗಿ ಸಂತ್ರಸ್ತರು ಈ ಸ್ಥಿತಿ ಅನುಭವಿಸಬೇಕಾಯಿತು ಎಂದು ಹೇಳಿದ ಕಾಂಗ್ರೆಸ್ ಕೇಂದ್ರದ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದಿದೆ.

ಮೋದಿಯವರ 10 ವರ್ಷಗಳ ಸುದೀರ್ಘ ಆಡಳಿತದಲ್ಲಿ ಅಪಘಾತಗಳನ್ನು ಪಟ್ಟಿ ಮಾಡಿದ ಖರ್ಗೆ, ಈ ನಿದರ್ಶನಗಳು ಮೋದಿಯವರ ಹೇಳಿಕೆಗಳಲ್ಲಿ ಎಷ್ಟು ಸತ್ಯ ಇದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ: ಮೃತರಿಗೆ ₹20 ಲಕ್ಷ ಪರಿಹಾರ, ತನಿಖೆಗೆ ಕೇಂದ್ರ ಆದೇಶ

ಮಾರ್ಚ್ 10 ರಂದು, ಮೋದಿ ಜಿ ದೆಹಲಿ ವಿಮಾನ ನಿಲ್ದಾಣ T1 ಅನ್ನು ಉದ್ಘಾಟಿಸಿದಾಗ, ಅವರು ತಮ್ಮನ್ನು “ದೂಸ್ರಿ ಮಿಟ್ಟಿ ಕಾ ಇನ್ಸಾನ್…” ಎಂದು ಕರೆದರು, ಈ ಎಲ್ಲಾ ಸುಳ್ಳು ಧೈರ್ಯ ಮತ್ತು ವಾಕ್ಚಾತುರ್ಯಗಳು ಚುನಾವಣೆಯ ಮೊದಲು ರಿಬ್ಬನ್ ಕತ್ತರಿಸುವ ಸಮಾರಂಭಗಳಲ್ಲಿ ತ್ವರಿತವಾಗಿ ತೊಡಗಿಸಿಕೊಳ್ಳಲು ಮಾತ್ರ! ದೆಹಲಿ ವಿಮಾನ ನಿಲ್ದಾಣದ ದುರಂತದ ಸಂತ್ರಸ್ತರು ಭ್ರಷ್ಟ, ಅಸಮರ್ಪಕ ಮತ್ತು ಸ್ವಾರ್ಥಿ ಸರ್ಕಾರದ ಭಾರ ಹೊರಬೇಕಾಗಿ ಬಂತು ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ