ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ: ಮೃತರಿಗೆ ₹20 ಲಕ್ಷ ಪರಿಹಾರ, ತನಿಖೆಗೆ ಕೇಂದ್ರ ಆದೇಶ
ನಾನು ಏಮ್ಸ್‌ನಲ್ಲಿ ದಾಖಲಾಗಿರುವ ಗಾಯಾಳುಗಳನ್ನೂ ಭೇಟಿ ಮಾಡಿದ್ದೇನೆ. ಅಂತಹ ಬಿಕ್ಕಟ್ಟು ಸಂಭವಿಸಿದಾಗಲೆಲ್ಲಾ ನಾವು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ ಮತ್ತು ಸಹಜ ಸ್ಥಿತಿಗೆ ಮರಳಿದ್ದೇವೆ ಎಂಬುದು ಸರ್ಕಾರದ ಬದ್ಧತೆಯಾಗಿದೆ. T1 ನಲ್ಲಿ ನಡೆದ ಘಟನೆ ದುರದೃಷ್ಟಕರ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಹೇಳಿದ್ದಾರೆ.
ದೆಹಲಿ ಜೂನ್ 28: ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Indira Gandhi International Airport) ಟರ್ಮಿನಲ್-1 ಮೇಲ್ಛಾವಣಿಯ(Delhi airport roof collapse) ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. 6 ಮಂದಿಗೆ ಗಾಯಗಳಾಗಿವೆ. ಇಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು (Ram Mohan Naidu Kinjarapu) ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣ ಮತ್ತು ದೇಶಾದ್ಯಂತ ಅಂತಹ ರಚನೆಗಳನ್ನು ಹೊಂದಿರುವ ಇತರ ವಿಮಾನ ನಿಲ್ದಾಣಗಳಲ್ಲಿನ ರಚನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಘಟನೆಯ ತಾಂತ್ರಿಕ ಕಾರಣಗಳು ಮತ್ತು ಇತರ ಅಂಶಗಳು ತನಿಖೆಯ ನಂತರ ತಿಳಿಯುತ್ತದೆ. ಈ ಘಟನೆಯಲ್ಲಿ ಮೃತರ ಕುಟುಂಬಕ್ಕೆ ₹ 20 ಲಕ್ಷ ಮತ್ತು ಗಾಯಗೊಂಡವರಿಗೆ ₹ 3 ಲಕ್ಷ ಪರಿಹಾರ ನೀಡಲಾಗುವುದು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು
#WATCH | On portion of canopy collapsed at Delhi airport’s Terminal-1, Union Minister of Civil Aviation Ram Mohan Naidu Kinjarapu says, “…we are taking this incident seriously…I want to clarify that the building inaugurated by PM Narendra Modi is on the other side and the… pic.twitter.com/ahb6d9ujc0
— ANI (@ANI) June 28, 2024
ನಾನು ಏಮ್ಸ್‌ನಲ್ಲಿ ದಾಖಲಾಗಿರುವ ಗಾಯಾಳುಗಳನ್ನೂ ಭೇಟಿ ಮಾಡಿದ್ದೇನೆ. ಅಂತಹ ಬಿಕ್ಕಟ್ಟು ಸಂಭವಿಸಿದಾಗಲೆಲ್ಲಾ ನಾವು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ ಮತ್ತು ಸಹಜ ಸ್ಥಿತಿಗೆ ಮರಳಿದ್ದೇವೆ ಎಂಬುದು ಸರ್ಕಾರದ ಬದ್ಧತೆಯಾಗಿದೆ. T1 ನಲ್ಲಿ ನಡೆದ ಘಟನೆ ದುರದೃಷ್ಟಕರ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ ಸಚಿವರು.
ನಾಯ್ಡು ಪ್ರಕಾರ, ಕುಸಿದ ಕಟ್ಟಡವನ್ನು 2009 ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ವಿಮಾನ ನಿಲ್ದಾಣದ ನಿರ್ವಾಹಕ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ಗೆ ರಚನೆಯನ್ನು ಪರಿಶೀಲಿಸಲು ಆದೇಶಿಸಲಾಗಿದೆ. “ಡಿಜಿಸಿಎ ತಪಾಸಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವರು ವರದಿಯನ್ನು ನೀಡುತ್ತಾರೆ”. ಇದಲ್ಲದೆ, ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿನ ಎಲ್ಲಾ ರೀತಿಯ ರಚನೆಗಳ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಟಿ1 ಅನ್ನು ಸ್ಥಳಾಂತರಿಸಲಾಗಿದೆ ಎಂದು ಸಚಿವರು ಹೇಳಿದರು. ಸಂಪೂರ್ಣ ತಪಾಸಣೆ ಮಾಡುವವರೆಗೆ ಅದನ್ನು ಮುಚ್ಚಲಾಗುತ್ತದೆ. ಸದ್ಯಕ್ಕೆ ಟಿ2 ಮತ್ತು ಟಿ3ಯಿಂದ ಹಾರಾಟ ನಡೆಸಲಾಗುತ್ತಿದೆ.
T1 ಅನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ, ಅಲ್ಲಿಂದ ನಡೆಯಬೇಕಿದ್ದ ಕಾರ್ಯಾಚರಣೆಗಳನ್ನು T2 ಮತ್ತು T3 ಯಿಂದ ಮುಂದುವರಿಸಲಾಗಿದೆ. ತಜ್ಞರು ಅದನ್ನು ಅನುಮೋದಿಸುವವರೆಗೆ ಕಟ್ಟಡವನ್ನು ಮುಚ್ಚಲಾಗುವುದು. T1 ನಲ್ಲಿನ ವಿಮಾನಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ರದ್ದುಗೊಳಿಸಲಾಗಿದೆ” ಎಂದು ಅವರು ಹೇಳಿದರು. ಘಟನೆಯ ಬಗ್ಗೆ ತಿಳಿದ ತಕ್ಷಣ, ತುರ್ತು ಪ್ರತಿಕ್ರಿಯೆ ಮತ್ತು ಅಗ್ನಿಶಾಮಕ ಸುರಕ್ಷತಾ ತಂಡಗಳನ್ನು ಕಳುಹಿಸಲಾಗಿದೆ. ಸಿಐಎಸ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳದಲ್ಲಿ ಇದ್ದರು ಎಂದು ಸಚಿವರು ಹೇಳಿದ್ದಾರೆ
“ನಾವು ತಕ್ಷಣ ತುರ್ತು ಪ್ರತಿಕ್ರಿಯೆ ತಂಡ, ಅಗ್ನಿಶಾಮಕ ಸುರಕ್ಷತಾ ತಂಡ ಮತ್ತು ಸಿಐಎಸ್ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿದ್ದೇವೆ. ಎಲ್ಲರೂ ಸ್ಥಳದಲ್ಲಿ ಲಭ್ಯವಿದ್ದರು. ಅವರು ಸಂಪೂರ್ಣ ತಪಾಸಣೆ ನಡೆಸಿದರು. ಆದ್ದರಿಂದ ಯಾವುದೇ ಇತರ ಸಾವುನೋವುಗಳು ಸಂಭವಿಸಿಲ್ಲ. ಆದ್ದರಿಂದ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಟರ್ಮಿನಲ್ ಕಟ್ಟಡದ ಉಳಿದ ಭಾಗವನ್ನು ಮುಚ್ಚಲಾಗಿದ್ದು, ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಮಾರ್ಚ್ 10 ರಂದು ಪ್ರಧಾನಿ ಉದ್ಘಾಟಿಸಿದ ಕಟ್ಟಡದ ಮೇಲ್ಛಾವಣಿ ಕುಸಿದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು , ಇದು ಆ ಕಟ್ಟಡ ಅಲ್ಲ. ಕುಸಿದ ಕಟ್ಟಡವು ಹಳೆಯ ಕಟ್ಟಡವಾಗಿದ್ದು, ಇದನ್ನು 2009 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ 1 ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
“ಅವರು ಸುಳ್ಳು ಹೇಳುತ್ತಿದ್ದಾರೆ.ಅವರು 3 ತಿಂಗಳ ಹಳೆಯ ಕಟ್ಟಡದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಇನ್ನೂ ಸುರಕ್ಷಿತವಾಗಿದೆ. ಈ ನಿರ್ದಿಷ್ಟ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿಲ್ಲ. ಅದು ಬೇರೆ ಕಟ್ಟಡವಾಗಿತ್ತು. ಮೇಲ್ಛಾವಣಿ ಕುಸಿದ ಕಟ್ಟಡವು 2009 ರದ್ದಾಗಿದೆ. ನಾವು ತನಿಖೆಗೆ ಆದೇಶಿಸಿದ್ದೇವೆ ”ಎಂದು ಮೋಹನ್ ನಾಯ್ಡು ಕಿಂಜರಾಪು ಹೇಳಿದ್ದಾರೆ.
ಟರ್ಮಿನಲ್ 1 ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಿಂದ ದೇಶೀಯ ವಿಮಾನ ಕಾರ್ಯಾಚರಣೆಗಳನ್ನು ಮಾತ್ರ ಹೊಂದಿದೆ. ವಿಮಾನ ನಿಲ್ದಾಣದ T1, T2 ಮತ್ತು T3 ಮೂರು ಟರ್ಮಿನಲ್‌ಗಳು ಪ್ರತಿದಿನ ಸುಮಾರು 1,400 ವಿಮಾನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ