ದೆಹಲಿ: ದೆಹಲಿ ವಿಧಾನಸಭೆ ಸೋಮವಾರ ಗದ್ದಲದ ದೃಶ್ಯಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ದೆಹಲಿ ಬಿಜೆಪಿ (BJP) ಅಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಿತು. ದೆಹಲಿ ವಿಧಾನಸಭೆ (Delhi Assembly) ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಸೋಮವಾರ ಮೂವರು ಬಿಜೆಪಿ ಶಾಸಕರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ. ಶಾಸಕರಾದ ಅನಿಲ್ ಬಾಜ್‌ಪೇಯ್, ಜಿತೇಂದರ್ ಮಹಾಜನ್ ಮತ್ತು ಅಜಯ್ ಮಹಾವರ್ ಅವರನ್ನು ಸಭಾಪತಿಯವರು ಕುಳಿತುಕೊಳ್ಳುವಂತೆ ಮನವಿ ಮಾಡಿದರೂ ಬೆಂಚ್‌ಗಳ ಮೇಲೆ ನಿಂತಿದ್ದು, ನಂತರ ಅವರಿಗೆ ಹೊರಹೋಗುವಂತೆ ಸೂಚಿಸಲಾಯಿತು. ಇದರ ಬೆನ್ನಲ್ಲೇ, ಸದನದ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು, ಸದನವು ಬೆಳಿಗ್ಗೆ ಮೊದಲ ಬಾರಿಗೆ ಸಭೆ ಸೇರಿದ ನಂತರ ಎರಡನೇ ಬಾರಿ ಈ ರೀತಿ ಕಲಾಪ ಮುಂದೂಡಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ ಸದನ ಸಭೆ ಸೇರಿದ ತಕ್ಷಣ ಎಎಪಿ ಶಾಸಕರು ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗೆ ಘೋಷಣೆಗಳನ್ನು ಕೂಗುತ್ತಾ ಸದನದ ಅಂಗಳಕ್ಕೆ ನುಗ್ಗಿದ್ದರು. ಗುಪ್ತಾ ಕ್ಷಮೆಯಾಚಿಸಬೇಕು ಮತ್ತು ಅವರ ವಿರುದ್ಧ ಖಂಡನಾ ನಿರ್ಣಯಕ್ಕೆ ಆಪ್ ಶಾಸಕ ಮೊಹಿಂದರ್ ಗೋಯೆಲ್ ಒತ್ತಾಯಿಸಿದ್ದರು. ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷರ ವಿರುದ್ಧ ಸದನದಲ್ಲಿ ಖಂಡನಾ ನಿರ್ಣಯ ಮಂಡಿಸಬೇಕು. ವಿರೋಧ ಪಕ್ಷದ ನಾಯಕರು ಕ್ಷಮೆಯಾಚಿಸಬೇಕು ಎಂದು ಗೋಯೆಲ್ ಒತ್ತಾಯಿಸಿದ್ದಾರೆ .
#WATCH | Delhi: BJP MLAs Anil Bajpai, Jitender Mahajan & Ajay Mahawar dismissed from the House for the day for raising slogans while standing on benches; House was adjourned for 15mins.
AAP MLAs protested demanding apology from BJP over alleged derogatory remarks on CM Kejriwal. pic.twitter.com/jH4DwLZqKe
— ANI (@ANI) March 28, 2022
ಸದನವು ಮಧ್ಯಾಹ್ನದ ಸುಮಾರಿಗೆ ಮತ್ತೆ ಸೇರಿದ ನಂತರ ಸ್ಪೀಕರ್ ಗೋಯೆಲ್ ಅವರ ಖಂಡನಾ ನಿರ್ಣಯವನ್ನು ಅಂಗೀಕರಿಸಿದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. “ನಾವು ಒಳ್ಳೆಯ ಜನರು, ನಮ್ಮ ಸ್ವಯಂಸೇವಕರು ಶರೀಫ್ (ಒಳ್ಳೆ ಗುಣದವರು). ಇಲ್ಲದಿದ್ದರೆ, ಅಂತಹ ಹೇಳಿಕೆಯು ಶಿರಚ್ಛೇದಕ್ಕೆ ಅರ್ಹವಾಗಿದೆ ಎಂದು ಗೋಯೆಲ್ ಹೇಳಿದರು.
ಗುಪ್ತಾ ಅವರು ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ಇದೇ ರೀತಿಯ ಟೀಕೆ ಮಾಡಲಿ ನೋಡೋಣ ಎಂದು ಗೋಯೆಲ್ ಸವಾಲು ಎಸೆದಿದ್ದಾರೆ.
ವಿರೋಧ ಪಕ್ಷದ ನಾಯಕ ರಾಮ್‌ವೀರ್ ಬಿಧುರಿ, “ಯಾವುದೇ ಅಸಭ್ಯ ಪದಗಳನ್ನು ಯಾರಾದರೂ ಬಳಸಿದ್ದರೆ, ನಾನು ಅದನ್ನು ಖಂಡಿಸುತ್ತೇನೆ” ಎಂದು ಹೇಳಿದರು. ಆದೇಶ್ ಗುಪ್ತಾ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿದ್ದರೆ ನಾನು ದೆಹಲಿ ಮುಖ್ಯಮಂತ್ರಿಯ ಬಳಿ ಕೈಮುಗಿದು ಕ್ಷಮೆಯಾಚಿಸುತ್ತೇನೆ. ಆದರೆ ದೆಹಲಿ ಬಿಜೆಪಿ ಅಧ್ಯಕ್ಷರು ನಮ್ಮ ಪಕ್ಷದ ಯಾವುದೇ ನಾಯಕನನ್ನು ಖಂಡಿಸಿದ್ದರೆ, ಮೊಹಿಂದರ್ ಗೋಯೆಲ್ ಅವರು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದರು.
ಟೀಕೆಗಳ ವಿಡಿಯೊವನ್ನು ತೋರಿಸಲು ಬಿಧುರಿ ಅವರಲ್ಲಿ ಹೇಳಿದ ಸ್ಪೀಕರ್ ಮೂವರು ಅಮಾನತುಗೊಂಡ ಬಿಜೆಪಿ ಶಾಸಕರಿಗೆ ಸದನದ ಕಲಾಪಕ್ಕೆ ಮತ್ತೆ ಭಾಗಿಯಾಗಲು ಅವಕಾಶ ನೀಡಿದರು.
ಇದನ್ನೂ ಓದಿ: Hijab row: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೊರೆ ಹೋದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ