ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಟಿಎಂಸಿ- ಬಿಜೆಪಿ ಶಾಸಕರ ಹೊಡೆದಾಟ; ಐವರ ಅಮಾನತು

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸದನದಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಶಾಸಕರು ಪರಸ್ಪರರನ್ನು ಒದ್ದು, ಗುದ್ದಾಡಿಕೊಂಡ ಘಟನೆಯೂ ನಡೆಯಿತು.

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಟಿಎಂಸಿ- ಬಿಜೆಪಿ ಶಾಸಕರ ಹೊಡೆದಾಟ; ಐವರ ಅಮಾನತು
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಗಲಾಟೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 28, 2022 | 1:11 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ವಿಧಾನಸಭೆಯಲ್ಲಿ ಬಿಜೆಪಿ (BJP), ಟಿಎಂಸಿ (TMC) ಶಾಸಕರ ನಡುವೆ ತಳ್ಳಾಟ, ಹೊಡೆದಾಟ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ರಾಮಪುರಹತ್ (Rampurhat) ಹತ್ಯಾಕಾಂಡದ ಬಗ್ಗೆ ಚರ್ಚೆಗೆ ಸುವೇಂದು ಅಧಿಕಾರಿ ಪಟ್ಟು ಹಿಡಿದಿದ್ದರು. ಆಗ ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ. ಟಿಎಂಸಿ ಶಾಸಕ ಅಸೀತ್ ಮಜುಂದಾರ್​ಗೂ ಗಲಾಟೆಯಲ್ಲಿ ಗಾಯಗಳಾಗಿವೆ. ಈ ಘಟನೆಯ ಬಳಿಕ ಐವರು ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸದನದಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಶಾಸಕರು ಪರಸ್ಪರರನ್ನು ಒದ್ದು, ಗುದ್ದಾಡಿಕೊಂಡ ಘಟನೆಯೂ ನಡೆಯಿತು. ರಾಮ್‌ಪುರಹತ್ ಹಿಂಸಾಚಾರ ಮತ್ತು ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಘಟನೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೇಳೆ ಬಿಜೆಪಿ ಶಾಸಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಘಟನೆಯಲ್ಲಿ ತನಗೆ ಗಾಯಗಳಾಗಿವೆ ಎಂದು ಟಿಎಂಸಿ ಶಾಸಕ ಅಸಿತ್ ಮಜುಂದಾರ್ ಹೇಳಿದ್ದಾರೆ. ಇದರ ನಡುವೆ ಇತರ ಶಾಸಕರು ತನ್ನನ್ನು ತಳ್ಳಿ ಶರ್ಟ್ ಹರಿದು ಹಾಕಿದ್ದಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಿರುವುದು ಕೂಡ ವಿಡಿಯೋದಲ್ಲಿದೆ.

ಈ ಘಟನೆಯ ನಂತರ, ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರನಡೆದಿದ್ದಾರೆ. ಬಿರ್ಭೂಮ್ ಕುರಿತು ಚರ್ಚೆಗೆ ಒತ್ತಾಯಿಸಿದಾಗ ತಮ್ಮ ಶಾಸಕರನ್ನು ಟಿಎಂಸಿ ಶಾಸಕರು ನೆಲದ ಮೇಲೆ ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನದ ಕೊನೆಯ ದಿನದಂದು ಬಂಗಾಳದ ವಿಧಾನಸಭೆಯಲ್ಲಿ ಗದ್ದಲ ಭುಗಿಲೆದ್ದಿತು.

ಇದನ್ನೂ ಓದಿ: ಏನಾಗ್ತಿದೆ ಪಶ್ಚಿಮ ಬಂಗಾಳದಲ್ಲಿ?-ಬಿರ್ಭೂಮ್​ ಹಿಂಸಾಚಾರದ ಭೀಕರತೆಯ ಬೆನ್ನಲ್ಲೇ ಇಬ್ಬರು ಟಿಎಂಸಿ ನಾಯಕರ ಮೇಲೆ ಗಂಭೀರ ಸ್ವರೂಪದ ಹಲ್ಲೆ

Birbhum Violence: ಇಬ್ಬರು ಶೇಖ್​ಗಳ ನಡುವಿನ ಹಗೆತನ ಬಂಗಾಳದ ಬೊಗ್ಟುಯಿ ಗ್ರಾಮದ ಹತ್ಯಾಕಾಂಡಕ್ಕೆ ಹೇಗೆ ಕಾರಣವಾಯಿತು ಗೊತ್ತಾ?

Published On - 1:06 pm, Mon, 28 March 22