ಅಯೋಧ್ಯಾ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಅಲ್ಲಿ ರಾಮಲಲ್ಲಾ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಹಾಗೇ, ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಹನುಮಾನ್ ದೇವರಿಗೆ ನಮನ ಸಲ್ಲಿಸಲಿದ್ದಾರೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ ಸೋಮವಾರ ಟ್ವೀಟ್ ಮಾಡಿ ತಿಳಿಸಿತ್ತು. ಆದರೆ ಅರವಿಂದ್ ಕೇಜ್ರಿವಾಲ್ ರಾಮಜನ್ಮಭೂಮಿ ಭೇಟಿಯನ್ನು ಬಿಜೆಪಿ ಸೇರಿದಂತೆ ಕೆಲವು ಪ್ರತಿಪಕ್ಷಗಳು ಟೀಕಿಸಿವೆ. ಅರವಿಂದ್ ಕೇಜ್ರಿವಾಲ್ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಶ್ರೀರಾಮ ನೆನಪಾಗುತ್ತಾನೆ ಎಂದು ಬಿಜೆಪಿ ವಂಗ್ಯವಾಡಿದೆ.
ಆಪ್ ಪಕ್ಷ ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ, 403 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇನ್ನು ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಉತ್ತರಪ್ರದೇಶದಲ್ಲಿ ಆಪ್ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿಮನೆಗೆ 300 ಯೂನಿಟ್ಗಳಷ್ಟು ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ.
ಜೈಶ್ರೀರಾಮ್ ಎಂದೇ ಮಾತು ಶುರು
ನಿನ್ನೆ ಅರವಿಂದ್ ಕೇಜ್ರಿವಾಲ್ ಸರಯೂ ನದಿ ನದಡಲ್ಲಿ ನಡೆದ ಮಹಾ ಆರತಿಯಲ್ಲಿ ಪಾಲ್ಗೊಂಡಿದ್ದರು. ದೇವಿಯನ್ನು ಪೂಜಿಸಿ, ಆಶೀರ್ವಾದ ಪಡೆದಿದ್ದರು. ನಂತರ ಅಯೋಧ್ಯೆಯಲ್ಲಿ ಮಾತನಾಡಿದ್ದರು. ಮಾತಿಗೂ ಮುನ್ನ ಜೈ ಶ್ರೀರಾಮ್ ಎಂದೇ ಪಠಿಸಿದ್ದರು. ಭಗವಾನ್ ಶ್ರೀರಾಮನ ಜನ್ಮಭೂಮಿಗೆ ಭೇಟಿ ನೀಡಿದ್ದು ತುಂಬ ಸಂತೋಷ ತಂದಿದೆ ಎಂದು ಹೇಳಿದ್ದರು.
ಕಲಬುರಗಿಯಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ; ಪುತ್ರಿ ಸಾವು, ಪುತ್ರ ಬಚಾವು
Published On - 8:57 am, Tue, 26 October 21