Delhi Weekend Curfew: ಕೊರೊನಾ ತಡೆಗೆ ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ತಡೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Delhi Weekend Curfew: ಕೊರೊನಾ ತಡೆಗೆ ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ
ಅರವಿಂದ ಕೇಜ್ರಿವಾಲ್​
Follow us
|

Updated on:Apr 15, 2021 | 1:32 PM

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಕೊವಿಡ್​ ಎರಡನೇ ಅಲೆಯ ಹೊಡೆತ ತಪ್ಪಿಸಿಕೊಳ್ಳಲು ವಿವಿಧ ರಾಜ್ಯಗಳು ಕಠಿಣ ನಿಯಮಗಳ ಮೊರೆ ಹೋಗುತ್ತಿವೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೊನಾ ತಡೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ದೆಹಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೆ ನಿರ್ಧಾರ ಮಾಡಲಾಗಿದೆ. ಕರ್ಫ್ಯೂ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚಳವಾಗುತ್ತಿರುವುದರಿಂದ ವೀಕೆಂಡ್​ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಕ್ರಮದ ಮೂಲಕ ಕೊರೊನಾ ಸರಪಳಿಯನ್ನು ತುಂಡರಿಸುವ ವಿಶ್ವಾಸವಿದೆ. ದಯವಿಟ್ಟು ಜನರು ಜಾಗರೂಕರಾಗಿದ್ದು ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಮದುವೆ ಕಾರ್ಯಕ್ರಮಗಳನ್ನು ನಿಶ್ಚಯಿಸಿಕೊಂಡಿರುವವರಿಗೆ ವಿಶೇಷ ಅನುಮತಿ ನೀಡಲಾಗುವುದು. ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ವಿಶೇಷ ವ್ಯವಸ್ಥೆ ರೂಪಿಸಲಾಗುವುದು. ರೆಸ್ಟೋರೆಂಟ್​ಗಳಲ್ಲಿ ಅಲ್ಲಿಯೇ ಊಟ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಜೊತೆಗೆ, ಮಾಸ್ಕ್​ ಧರಿಸುವುದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನನ್ನೇ ಜಾರಿಗೊಳಿಸಲಿದ್ದೇವೆ ಎನ್ನುವುದಾಗಿ ಮಾಹಿತಿ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗುವುದು. ಆದರೆ ಮಾರ್ಕೆಟ್, ಮಾಲ್, ಜಿಮ್‌ಗಳು ಬಂದ್ ಆಗಲಿವೆ. ಥಿಯೇಟರ್‌ಗಳಲ್ಲಿ ಶೇ.30ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಮಾತ್ರ ಅನುಮತಿ ಇದೆ. ಮದುವೆಗಳಲ್ಲಿ ಭಾಗಿಯಾಗುವುದಕ್ಕೆ ಪಾಸ್ ಕಡ್ಡಾಯವಾಗಲಿದೆ. ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೊಳ್ಳಲಿದ್ದು, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಇರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆಯಲ್ಲಿ, ದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಿರುವ ಕಡೆ ನೈಟ್​ ಕರ್ಫ್ಯೂ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ 

ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಜಿಲ್ಲೆಗಳಿಗೆ ನೈಟ್​ ಕರ್ಫ್ಯೂ ವಿಸ್ತರಣೆ ಸಾಧ್ಯತೆ.. ಲಾಕ್​ಡೌನ್​ ಪ್ರಸ್ತಾಪ ಇಲ್ಲ: ಬಿ.ಎಸ್.ಯಡಿಯೂರಪ್ಪ

Published On - 1:14 pm, Thu, 15 April 21

ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!