ಆಂಧ್ರ ಪ್ರದೇಶ: ಹಳೆಯ ದ್ವೇಷಕ್ಕೆ ಕುಟುಂಬದ 6 ಜನರ ಬರ್ಬರ ಹತ್ಯೆ, ಮತ್ತೊಂದೆಡೆ ನಾಲ್ವರು ಸಜೀವ ದಹನ

ಆಂಧ್ರ ಪ್ರದೇಶ:  ಹಳೆಯ ದ್ವೇಷಕ್ಕೆ ಕುಟುಂಬದ 6 ಜನರ ಬರ್ಬರ ಹತ್ಯೆ, ಮತ್ತೊಂದೆಡೆ ನಾಲ್ವರು ಸಜೀವ ದಹನ
ಒಂದೇ ಕುಟುಂಬದ ನಾಲ್ವರು ಸಜೀವದಹನ

ಒಂದೇ ಕುಟುಂಬದ 6 ಜನರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ನಡೆದಿದೆ. ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ಕಾಲೋನಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ನಡೆದಿದೆ.

Ayesha Banu

|

Apr 16, 2021 | 10:10 AM


ಆಂಧ್ರ ಪ್ರದೇಶ: ಆಂಧ್ರಪ್ರದೇಶದ ಜನ ನಿನ್ನೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅದ್ರಲ್ಲೂ ವೈಜಾಗ್​ನ ಜನ ಎರಡು ಘಟನೆಗಳನ್ನ ಕೇಳಿ ಅವಕ್ಕಾಗಿದ್ದಾರೆ. ನಿನ್ನೆ ನಡೆದಿರೋ ಎರಡು ಘಟನೆಗಳಲ್ಲಿ 10 ಹತ್ಯೆಯಾಗಿದ್ದು. ಜನರಲ್ಲಿ ಯಾವ ಕ್ಷಣದಲ್ಲಿ ಯಾರಿಗೆ ಏನಾಗುತ್ತೋ ಅನ್ನೋ ಭಯ ಕಾಡುವಂತೆ ಮಾಡಿದೆ.

ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಜನರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ನಡೆದಿದೆ. ಘಟನೆಯಿಂದಾಗಿ ಇಡೀ ಊರಿನ ಜನ ಭಯಭೀತರಾಗಿದ್ದಾರೆ. ರಮಣ, ಉಷಾರಾಣಿ, ರಮಾದೇವಿ, ಅರುಣ, ಮಕ್ಕಳಾದ ಉದಯ, ಉರ್ವೀಷ ಸೇರಿ ಆರು ಮಂದಿಯನ್ನು ಹತ್ಯೆಗೈದಿದ್ದಾರೆ.

ಆರು ಜೀವಗಳನ್ನ ಬಲಿ ಪಡೆದು ಪೊಲೀಸರಿಗೆ ಡೈರೆಕ್ಟ್ ಕಾಲ್
ಅಪ್ಪಲರಾಜು ಎಂಬುವವರಿಗೂ ಇಲ್ಲಿ ಕೊಲೆಯಾಗಿರೋ ಕುಟುಂಬದ ವಿಜಯ್ ಕುಮಾರ್​ಗೂ ಹಲವು ವರ್ಷಗಳಿಂದ ದ್ವೇಷವಿತ್ತು. ಈ ದ್ವೇಷದ ಕಾರಣ ವಿಜಯ್​ಕುಮಾರ್ ಹುಟ್ಟಿದ ಊರನ್ನ ತೊರೆದು ವಿಜಯವಾಡದಲ್ಲಿ ವಾಸವಿದ್ದ. ಎಂಪಿಟಿಸಿ ಚುನಾವಣೆ ಮತದಾನ ಮಾಡಲು ವಿಜಯ್​ಕುಮಾರ್, ಆತನ ಪತ್ನಿ ಉಷಾರಾಣಿ, ಅತ್ತೆಯರಾದ ಅಲ್ಲು ರಮಾದೇವಿ, ನೆಕೆಟ್ಲು ಅರುಣ, ಮಕ್ಕಳಾದ ಉದಯ್, ಊರ್ವಿಷ ಜುತ್ತಾಡಕ್ಕೆ ಬಂದಿದ್ರು. ಮತದಾನ ಮಾಡಿದ ಮೇಲೆ ವಿಜಯ್ ಕುಮಾರ್ ತಂದೆ ಬಮ್ಮಿಡಿ ರಮಣ ವಾಸವಿದ್ದ ಮನೆಯಲ್ಲಿ ಇವರನ್ನ ಬಿಟ್ಟು, ತಾನು ವಿಜಯವಾಡಕ್ಕೆ ತೆರಳಿದ್ದ. ಯಾವಾಗ ವಿಜಯ್ ಕುಮಾರ್ ಕುಟುಂಬ ಬಂದಿದೆ ಅಂತಾ ಗೊತ್ತಾಯ್ತೋ. ಪಾಪಿ ಅಪ್ಪಲರಾಜು ವಿಜಯ್ ಕುಮಾರ್ ಮನೆ ಮೇಲೆ ದಾಳಿ ಮಾಡಿ ಆರು ಜನರನ್ನ ಬಲಿ ಪಡೆದಿದ್ದಾನೆ. ರಕ್ತದ ಕೋಡಿ ಹರಿಸಿ ಪಾಪಿ ನೇರವಾಗಿ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಆಂಧ್ರದಲ್ಲಿ ಅತ್ಯಂತ ಪ್ರಶಾಂತವಾದ ಉತ್ತರಾಂಧ್ರದಲ್ಲಿ ಅಪ್ಪಲರಾಜು ಮಾಡಿರೋ ಕೃತ್ಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ‌ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ಕಾಲೋನಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ನಡೆದಿದೆ. ಬಂಗಾರುನಾಯ್ಡು(50), ಡಾ.ನಿರ್ಮಲಾ(44), ಮಕ್ಕಳಾದ ದೀಪಕ್(22), ಕಶ್ಯಪ್(19) ಮೃತ ದುರ್ದೈವಿಗಳು.

ಇವರಲ್ಲಿ ಬಂಗಾರನಾಯ್ಡು, ಪತ್ನಿ ನಿರ್ಮಲಾ, ಮಗ ಕಶ್ಯಪ್ ದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ ಅಂತಾ ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರಣ ದೀಪಕ್ ತಂದೆಯ ಜೊತೆ ಜಗಳವಾಡಿಕೊಂಡು ಮೊದಲು ಆತನನ್ನ ಹತ್ಯೆ ಮಾಡಿದ್ದಾನೆ. ಬಂಗಾರುನಾಯ್ಡು ಕಿರುಚಾಟ ಕೇಳಿ ಹೊರಬಂದ ತಾಯಿ ನಿರ್ಮಲಾ, ತಮ್ಮ ಕಶ್ಯಪ್ ಮೇಲೆ ದಾಳಿ ನಡೆಸಿ ಮೂವರನ್ನ ಕೊಂದು, ಬಳಿಕ ಬೆಂಕಿ ಹೊತ್ತಿಸಿದ್ದಾನೆ. ಹೀಗಾಗಿ ಎಲ್ಲರೂ ಸಜೀವ ದಹನವಾಗಿದ್ದಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Black Lives Matter: ಜಾರ್ಜ್​ ಫ್ಲೈಡ್​ನನ್ನು ಕೊಂದ ನಗರದಲ್ಲೇ ಮತ್ತೋರ್ವ ಕಪ್ಪು ವರ್ಣೀಯನ ಕೊಲೆ, ಮಿನಿಯಾಪೊಲೀಸ್​ ಉದ್ವಿಗ್ನ


Follow us on

Related Stories

Most Read Stories

Click on your DTH Provider to Add TV9 Kannada