ದೆಹಲಿ: ದೆಹಲಿ ಕಂಟೋನ್ಮೆಂಟ್ ಬಳಿಯ ಸ್ಮಶಾನದಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷಗಳ ಆರ್ಥಿಕ ಸಹಾಯವನ್ನು ಘೋಷಿಸಿದ ಕೇಜ್ರಿವಾಲ್ ದೆಹಲಿ ಸರ್ಕಾರವು ಈ ಪ್ರಕರಣದಲ್ಲಿ ಅತ್ಯುತ್ತಮ ವಕೀಲರನ್ನು ನೇಮಿಸುತ್ತದೆ ಎಂದು ಭರವಸೆ ನೀಡಿದರು.
“ನಾನು ಇಂದು (ಬುಧವಾರ) ಬಾಲಕಿಯ ಕುಟುಂಬವನ್ನು ಭೇಟಿ ಮಾಡಿದೆ ಮತ್ತು ಅವರ ದುಃಖವನ್ನು ಹಂಚಿಕೊಂಡೆ. ನಾವು ಕುಟುಂಬಕ್ಕೆ 10 ಲಕ್ಷ ಆರ್ಥಿಕ ಸಹಾಯವನ್ನು ನೀಡುತ್ತೇವೆ, ಮ್ಯಾಜಿಸ್ಟೀರಿಯಲ್ ತನಿಖೆ ಇರುತ್ತದೆ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಖ್ಯಾತ ವಕೀಲರನ್ನು ನೇಮಿಸುತ್ತೇವೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ನಾವು ಅವರಿಗೆ ಸಂಪೂರ್ಣ ಸಹಕಾರದ ಭರವಸೆ ನೀಡುತ್ತೇವೆ ಎಂದು ಕೇಜ್ರಿವಾಲ್ ಬುಧವಾರ ಟ್ವೀಟ್ ಮಾಡಿದ್ದಾರೆ.
बच्ची के परिवार से मिला, उनका दर्द बांटा-
– परिवार को 10 लाख रुपए की आर्थिक सहायता देंगे
– मामले की मजिस्ट्रेट जांच होगी
– दोषियों को सजा दिलवाने के लिए बड़े वकील लगायेंगे
केंद्र सरकार दिल्ली में क़ानून व्यवस्था दुरुस्त करने के लिए कड़े कदम उठाए, हम पूरा सहयोग करेंगे
— Arvind Kejriwal (@ArvindKejriwal) August 4, 2021
ರಾಜಧಾನಿಯಲ್ಲಿ ದೆಹಲಿ ಪೊಲೀಸ್ ಮತ್ತು ಸಾರ್ವಜನಿಕ ಆದೇಶವು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿದೆ.
ದೆಹಲಿಯ ಕಂಟೋನ್ಮೆಂಟ್ ಬಳಿಯ ಸ್ಮಶಾನದಲ್ಲಿ ಭಾನುವಾರ ನಾಲ್ಕು ಜನರಿಂದ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಯಾದ ಬಾಲಕಿಯ ಮೃತದೇಹದ ಸುಟ್ಟ ಅವಶೇಷಗಳನ್ನು ಮೂವರು ವೈದ್ಯರ ಮಂಡಳಿ ಶವಪರೀಕ್ಷೆ ನಡೆಸಲಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ರಾಜಕೀಯ ಕಾರ್ಯಕರ್ತರು ಬುಧವಾರ ನಾಲ್ಕನೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಮಶಾನದ ಅರ್ಚಕ 55 ವರ್ಷದ ಆರೋಪಿ ಸೇರಿದಂತೆ ಆರೋಪಿಗಳ ಮೇಲೆ ಅತ್ಯಾಚಾರ, ಕೊಲೆ ಮತ್ತು ಬೆದರಿಕೆ ಆರೋಪಗಳು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೀಗ ಜೈಲಿನಲ್ಲಿದ್ದಾರೆ. ಎಲೆಕ್ಟ್ರಿಕ್ ಕೂಲರ್ ನಿಂದ ನೀರು ತರುವಾಗ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಸಮರ್ಥಿಸಿಕೊಂಡಿದ್ದರೂ, ಆಕೆಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಕುಟುಂಬವನ್ನು ಹೆದರಿಸಿದ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಇದನ್ನೂ ಓದಿ: ಈ ದೇಶದ ಮಗಳಿಗೆ ನ್ಯಾಯ ಸಿಗಲೇಬೇಕು; ಕೊಲೆಯಾದ ದೆಹಲಿ ಬಾಲಕಿಯ ಕುಟುಂಬದ ಪರ ನಿಂತ ರಾಹುಲ್ ಗಾಂಧಿ
ಇದನ್ನೂ ಓದಿ: ‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ
(Delhi CM Arvind Kejriwal ordered a magisterial enquiry on the alleged rape and murder of a 9-year-old Dalit girl)