
ನವದೆಹಲಿ: ಇಂದು ದೆಹಲಿಯ ಸಂಪುಟ ರಚನೆಯಾಗಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರವನ್ನು ರೇಖಾ ಗುಪ್ತಾ ಮುನ್ನಡೆಸಲಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ರೇಖಾ ಗುಪ್ತಾ ಅವರ ಜೊತೆ ಡಿಸಿಎಂ ಆಗಿ ಪರ್ವೇಶ್ ವರ್ಮ, ಸಚಿವರಾಗಿ ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಕುಮಾರ್ ಇಂದ್ರಜ್, ಆಶಿಶ್ ಸೂದ್ ಮತ್ತು ಪಂಕಜ್ ಕುಮಾರ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ರೇಖಾ ಗುಪ್ತಾ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿದೆ.
ದೆಹಲಿಯಲ್ಲಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಖಾತೆಗಳು ಸಿಕ್ಕಿವೆ. ಇಂದು ಸಂಜೆ ಮೊದಲ ಸಂಪುಟ ಸಭೆ ಕೂಡ ನಡೆದಿದೆ. ಪ್ರಮುಖ ಖಾತೆಗಳನ್ನು ಪರ್ವೇಶ್ ವರ್ಮಾ (ಉಪ ಮುಖ್ಯಮಂತ್ರಿ), ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಇತರ ಸಚಿವರಿಗೆ ಹಂಚಲಾಗಿದೆ. ಬಿಜೆಪಿಯ ಗೆಲುವು ಎಎಪಿ ಮತ್ತು ಕಾಂಗ್ರೆಸ್‌ಗೆ ಗಮನಾರ್ಹ ಸೋಲನ್ನು ಪ್ರತಿನಿಧಿಸುತ್ತದೆ. ಅರವಿಂದ್ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಸೋತವರಲ್ಲಿ ಪ್ರಮುಖರು.
ಇದನ್ನೂ ಓದಿ: ಸಿಎಂ ರೇಖಾ ಗುಪ್ತಾ ದೊಡ್ಡ ಘೋಷಣೆ; ಈ ದಿನಾಂಕದೊಳಗೆ ದೆಹಲಿ ಮಹಿಳೆಯರಿಗೆ ಸಿಗಲಿದೆ 2,500 ರೂ.
ಖಾತೆ ಹಂಚಿಕೆಯ 1 ಗಂಟೆಯ ನಂತರ, ದೆಹಲಿ ಸಚಿವ ಸಂಪುಟವು ಮುಖ್ಯಮಂತ್ರಿ ರೇಖಾ ಗುಪ್ತಾ ಅಧ್ಯಕ್ಷತೆಯಲ್ಲಿ ಮೊದಲ ಸಂಪುಟ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಭಾರತ್ ಯೋಜನೆ ಮತ್ತು ಸಿಎಜಿ ವರದಿಯ ಮಂಡನೆ ಕುರಿತು ಎರಡು ಕಾರ್ಯಸೂಚಿಗಳನ್ನು ಚರ್ಚಿಸಲಾಯಿತು.
#WATCH | After assuming the charge, Delhi CM Rekha Gupta says, “We have a cabinet meeting today. We will continuously work towards the mission of Viksit Delhi, and we will fulfil all the promises that we have made… At 5 PM, we will go to Yamuna Ghat for aarti. The cabinet… pic.twitter.com/7OURD69kna
— ANI (@ANI) February 20, 2025
ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಹೊಸದಾಗಿ ರಚನೆಯಾದ ಸಚಿವ ಸಂಪುಟವು ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕಗಳನ್ನು ಹೊಂದಿರುವ ದೆಹಲಿ ಬಿಜೆಪಿ ಘಟಕದ ಕೆಲವು ಪ್ರಮುಖ ಮುಖಗಳನ್ನು ಪ್ರದರ್ಶಿಸುತ್ತದೆ. ದೆಹಲಿಯ ಎಬಿವಿಪಿ ವಿದ್ಯಾರ್ಥಿ ರಾಜಕೀಯದಲ್ಲಿ ಬೇರುಗಳನ್ನು ಹೊಂದಿರುವ ಅನುಭವಿ ಆರ್‌ಎಸ್‌ಎಸ್ ಸದಸ್ಯೆ ರೇಖಾ ಗುಪ್ತಾ ಅವರು ಗೃಹ, ಹಣಕಾಸು, ವಿಜಿಲೆನ್ಸ್ ಮತ್ತು ಯೋಜನೆ ಖಾತೆಗಳನ್ನು ಸಹ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: Rekha Gupta: ಮೊದಲ ಪ್ರಯತ್ನದಲ್ಲೇ ಖುಲಾಯಿಸಿದ ಅದೃಷ್ಟ; ದೆಹಲಿ ಸಿಎಂ ರೇಖಾ ಗುಪ್ತಾ ಹಿನ್ನೆಲೆಯೇನು?
ಪರ್ವೇಶ್ ವರ್ಮಾ (ಉಪ ಮುಖ್ಯಮಂತ್ರಿ) ಅವರಿಗೆ ಶಿಕ್ಷಣ, ಪಿಡಬ್ಲ್ಯೂಡಿ ಮತ್ತು ಸಾರಿಗೆ ಖಾತೆಗಳನ್ನು ನೀಡಲಾಗಿದೆ. ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಆರೋಗ್ಯ, ನಗರಾಭಿವೃದ್ಧಿ ಮತ್ತು ಕೈಗಾರಿಕೆಗಳ ಖಾತೆಗಳನ್ನು ನೀಡಲಾಗಿದೆ. ರವೀಂದ್ರ ಕುಮಾರ್ ಇಂದ್ರಜ್ ಸಮಾಜ ಕಲ್ಯಾಣ, ಎಸ್‌ಸಿ/ಎಸ್‌ಟಿ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆಗಳನ್ನು ನಿರ್ವಹಿಸಲಿದ್ದಾರೆ. ಕಪಿಲ್ ಮಿಶ್ರಾ ನೀರು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಗಳನ್ನು ನಿರ್ವಹಿಸಲಿದ್ದಾರೆ.
ಆಶಿಶ್ ಸೂದ್ ಹೊಸ ಸಂಪುಟದಲ್ಲಿ ಕಂದಾಯ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ನಿರ್ವಹಿಸಲಿದ್ದಾರೆ. ಪಂಕಜ್ ಕುಮಾರ್ ಸಿಂಗ್ ಅವರಿಗೆ ಕಾನೂನು, ಶಾಸಕಾಂಗ ವ್ಯವಹಾರಗಳು ಮತ್ತು ವಸತಿ ಖಾತೆಗಳನ್ನು ವಹಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ