ದೆಹಲಿಯ ರೈಲ್ವೆ ನಿಲ್ದಾಣದ ಬಳಿ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ದೆಹಲಿಯ ರೈಲ್ವೆ ನಿಲ್ದಾಣವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನಿಲ್ದಾಣದ ಆವರಣದ ಬಳಿಯ ಪೊದೆಗಳ ಒಳಗೆ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಬ್ಜಿ ಮಂಡಿ ಪ್ರದೇಶದ ರೈಲ್ವೆ ಪೊಲೀಸರು ಕರೆ ಮಾಡಿ, ಆದರ್ಶ ನಗರ ರೈಲ್ವೆ ನಿಲ್ದಾಣದ ಶೆಡ್ ಸಂಖ್ಯೆ 2 ರ ಹಿಂದಿನ ಹಳಿಗಳ ಬಳಿ ಮಧ್ಯವಯಸ್ಕ ಮಹಿಳೆಯ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು.

ನವದೆಹಲಿ, ನವೆಂಬರ್ 17: ದೆಹಲಿಯ ಆದರ್ಶ ನಗರ ರೈಲ್ವೆ ನಿಲ್ದಾಣದ ಬಳಿ ಮಹಿಳೆ(Woman)ಯ ಶವ ಪತ್ತೆಯಾಗಿದೆ. ದೇಹ ಅರೆನಗ್ನವಾಗಿದ್ದು, ಮುಖ, ದೇಹದ ತುಂಬೆಲ್ಲಾ ಗಾಯದ ಗುರುತುಗಳು ಕಂಡುಬಂದಿವೆ. ನಿಲ್ದಾಣದ ಆವರಣದ ಬಳಿಯ ಪೊದೆಗಳ ಒಳಗೆ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಬ್ಜಿ ಮಂಡಿ ಪ್ರದೇಶದ ರೈಲ್ವೆ ಪೊಲೀಸರು ಕರೆ ಮಾಡಿ, ಆದರ್ಶ ನಗರ ರೈಲ್ವೆ ನಿಲ್ದಾಣದ ಶೆಡ್ ಸಂಖ್ಯೆ 2 ರ ಹಿಂದಿನ ಹಳಿಗಳ ಬಳಿ ಮಧ್ಯವಯಸ್ಕ ಮಹಿಳೆಯ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ ಮಹಿಳೆ ಅರೆನಗ್ನ ಸ್ಥಿತಿಯಲ್ಲಿದ್ದರು, ಬಹು ಗಾಯದ ಗುರುತುಗಳು ಮತ್ತು ಮುಖ ಮತ್ತು ತಲೆಯ ಮೇಲೆ ಆಳವಾದ ಗಾಯಗಳಿದ್ದು, ಹರಿತವಾದ ಆಯುಧದಿಂದ ತಿವಿದಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯ ಗುರುತು ಇನ್ನೂ ಸಿಕ್ಕಿಲ್ಲ, ಅವರು 40 ರಿಂದ 42 ವರ್ಷ ವಯಸ್ಸಿನವರಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು, ಚಿಂದಿ ಆಯುವವ ಅಥವಾ ಅಲೆಮಾರಿ ಮಹಿಳೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳದಿಂದ ಒಂದು ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮಹಿಳೆಯರು ಮತ್ತು ಪುರುಷರ ಚಪ್ಪಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ. ಆಕೆಯ ಕುಟುಂಬ ಅಥವಾ ಪರಿಚಯಸ್ಥರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅಪರಾಧದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಘಟನೆಗೂ ಮುನ್ನ ಮೃತ ವ್ಯಕ್ತಿಯ ಚಲನವಲನಗಳನ್ನು ಪತ್ತೆಹಚ್ಚಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಿಶ್ಲೇಷಿಸಲಾಗುತ್ತಿದೆ.
ಮತ್ತಷ್ಟು ಓದಿ: ಚರಂಡಿಯಲ್ಲಿ ಮಹಿಳೆಯ ತಲೆಯಿಲ್ಲದ ಬೆತ್ತಲೆ ಶವ ಪತ್ತೆ; ಬೆಚ್ಚಿಬಿದ್ದ ನೊಯ್ಡಾ
ಮಹೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಭೇದಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ದೆಹಲಿಯಲ್ಲಿ ನವೆಂಬರ್ 10ರಂದು ಕೆಂಪುಕೋಟೆಯ ಬಳಿ ನಿಗೂಢ ಸ್ಫೋಟ ಸಂಭವಿಸಿತ್ತು, ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




