AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇನು ಜೆನ್​-ಝಿಗಳಲ್ಲ, ನಿಮ್ಮ ಅಸಲಿ ಉದ್ದೇಶವೇನು? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತಪರಾಕಿ

ದೆಹಲಿ ಹೈಕೋರ್ಟ್, ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿ ಶಾಂತಿ ಬಾಂಡ್ ಉಲ್ಲಂಘಿಸಿದ್ದ ಕಾಕ್ರೋಚ್ ಜನತಾ ಪಕ್ಷದ (CJP) ನಾಯಕರಿಗೆ ತೀವ್ರ ತಪರಾಕಿ ಹಾಕಿದೆ. ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಜವಾಬ್ದಾರಿರಹಿತ ವರ್ತನೆಯನ್ನು ನ್ಯಾಯಾಲಯ ಖಂಡಿಸಿದ್ದು, ಹಿಂಸಾಚಾರದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. 'ನೀವೇನು ಜೆನ್‌-ಝಿಗಳಲ್ಲ, ನಿಮ್ಮ ಅಸಲಿ ಉದ್ದೇಶವೇನು?' ಎಂದು ಪ್ರಶ್ನಿಸಿ, ಅಂತಿಮವಾಗಿ ಅರ್ಜಿಯನ್ನು ವಾಪಸ್ ಪಡೆಯುವಂತೆ ಮಾಡಿತು.

ನೀವೇನು ಜೆನ್​-ಝಿಗಳಲ್ಲ, ನಿಮ್ಮ ಅಸಲಿ ಉದ್ದೇಶವೇನು? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತಪರಾಕಿ
ಅಶುತೋಷ್Image Credit source: livelaw
ನಯನಾ ರಾಜೀವ್
|

Updated on: Oct 21, 2026 | 2:01 PM

Share

ನವದೆಹಲಿ, ಅಕ್ಟೋಬರ್ 21: ಶಾಂತಿ ಭಂಗದ ಎಚ್ಚರಿಕೆಯ ಬಾಂಡ್‌ಗಳನ್ನು ಉಲ್ಲಂಘಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಯತ್ನಿಸಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (CJP) ಪ್ರಮುಖ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರಿಗೆ ದೆಹಲಿ ಹೈಕೋರ್ಟ್ ತೀವ್ರ ತಪರಾಕಿ ಹಾಕಿದೆ. ಕಸ್ಟಡಿ ಅವಧಿ ವಿಸ್ತರಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಪ್ರಸಾದ್ ಅವರಿದ್ದ ಪೀಠ, ಅರ್ಜಿದಾರರ ಬೇಜವಾಬ್ದಾರಿ ನಡವಳಿಕೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯದ ಬಿಗಿ ನಿಲುವು ಮತ್ತು ಗಂಭೀರ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರ ಪರ ವಕೀಲರು ಅಂತಿಮವಾಗಿ ಹೈಕೋರ್ಟ್‌ನಿಂದ ಅರ್ಜಿಯನ್ನೇ ಹಿಂಪಡೆದಿದ್ದಾರೆ.

ವಿಚಾರಣೆ ವೇಳೆ ಹೈಕೋರ್ಟ್ ವ್ಯಕ್ತಪಡಿಸಿದ ಪ್ರಮುಖ ಆಕ್ಷೇಪಗಳು ವಿದೇಶಗಳಲ್ಲಿನ ಹಿಂಸಾಚಾರದ ಉಲ್ಲೇಖ: “ನಾವು ಭಾರತದ ಹೊರಗೆ ನಡೆದ ಗಲಭೆಗಳನ್ನು ಗಮನಿಸಿದ್ದೇವೆ. ವಿದ್ಯಾರ್ಥಿ ಚಳವಳಿಯ ಹೆಸರಿನಲ್ಲಿ ಆರಂಭವಾದ ಸಣ್ಣ ಪ್ರತಿಭಟನೆಗಳು ಕೊನೆಗೆ ಬೆಂಕಿ ಹಚ್ಚುವುದು, ಕಟ್ಟಡಗಳನ್ನು ಸುಡುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವ ಭೀಕರ ಹಿಂಸಾಚಾರಕ್ಕೆ ತಿರುಗಿದ ಉದಾಹರಣೆಗಳಿವೆ” ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು.

ಬ್ಯಾರಿಕೇಡ್ ಮುರಿದರೆ ಪರಿಣಾಮವೇನು?: “ನೀವು ಪ್ರತಿಭಟನೆಯ ಮುಂಚೂಣಿಯಲ್ಲಿ ನಿಂತು ನಿಯಮ ಉಲ್ಲಂಘಿಸಿ ಬ್ಯಾರಿಕೇಡ್ ಮುರಿದಾಗ, ನಿಮ್ಮ ಹಿಂದೆ ನೂರಾರು ಜನರು ನುಗ್ಗುತ್ತಾರೆ. ಆ ಜನಸಂದಣಿಯಲ್ಲಿ ನಿಮ್ಮ ನಿಯಂತ್ರಣದಲ್ಲೇ ಇಲ್ಲದ ಸಮಾಜಘಾತುಕ ಶಕ್ತಿಗಳು ನುಸುಳಿದರೆ ಪರಿಸ್ಥಿತಿ ಏನಾಗಬಹುದು?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಶಾಂತಿ ಬಾಂಡ್ ಉಲ್ಲಂಘನೆ: ಅಕ್ಟೋಬರ್ 10 ರಂದು 50,000 ರೂ.ಮೌಲ್ಯದ ಶಾಂತಿ ಪಾಲನಾ ಬಾಂಡ್ ನೀಡಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ (ಅಕ್ಟೋಬರ್ 14) ಮತ್ತೆ ನಿಷೇಧಿತ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಯತ್ನಿಸಿದ್ದನ್ನು ನ್ಯಾಯಾಲಯ ಖಂಡಿಸಿತು. “ನೀವೇ ಸ್ವತಃ ನೀಡಿದ ಬಾಂಡ್ ಮುರಿದ ಮೇಲೆ, ಆಡಳಿತಾಧಿಕಾರಿಗಳು ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇನ್ನೇನು ಮಾಡಬೇಕು?” ಎಂದು ತರಾಟೆಗೆ ತೆಗೆದುಕೊಂಡಿತು.

ನೀವು ಜೆನ್​-ಝಿಗಳಲ್ಲ: ಆರೋಪಿಗಳ ವಯಸ್ಸು 27 ಮತ್ತು 31 ವರ್ಷ ಎಂದು ತಿಳಿದ ನ್ಯಾಯಾಲಯ, “ಹಾಗಾದರೆ ನೀವೇನು ಜೆನ್‌-ಝಿಗಳಲ್ಲ, ಬದಲಿಗೆ ಪ್ರಬುದ್ಧ ಮಿಲೇನಿಯಲ್‌ಗಳು. ಆರಂಭದಲ್ಲಿ ಇದು ವಿದ್ಯಾರ್ಥಿಗಳ ಸಣ್ಣ ಪ್ರತಿಭಟನೆಯಾಗಿತ್ತು, ಆದರೆ ಈಗ ವ್ಯಕ್ತಿಗಳು ಅವರೇ ಇದ್ದರೂ ಹೋರಾಟದ ಉದ್ದೇಶ ಮತ್ತು ಹಿಂದಿರುವ ಲೆಕ್ಕಾಚಾರಗಳು ಬದಲಾಗಿವೆ. ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಬರುವ ಆತಂಕ ಎದುರಾದಾಗ ನೀವು ಯಾರು, ನಿಮ್ಮ ಸಂಘಟನೆ ಯಾವುದು ಮತ್ತು ನಿಮ್ಮ ಅಸಲಿ ಅಜೆಂಡಾ ಏನು ಎಂದು ಮ್ಯಾಜಿಸ್ಟ್ರೇಟ್‌ಗಳು ಪರಿಶೀಲಿಸುವುದು ಸಹಜ” ಎಂದು ಸ್ಪಷ್ಟಪಡಿಸಿತು.

ಇನ್ನಷ್ಟು ಓದಿ:

ಕಾನೂನಿನ ಬಗ್ಗೆ ಗೌರವವೇ ಇಲ್ಲ: ಸೌರವ್ ದಾಸ್, ಅಶುತೋಷ್ ರಂಕಾ ಜಾಮೀನು ಅರ್ಜಿಯನ್ನು ತಳ್ಳಿಹಾಕಿದಕ್ಕೆ ಕಾರಣಗಳು ಇಲ್ಲಿವೆ

ಪ್ರಕರಣದ ಹಿನ್ನೆಲೆ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ದೆಹಲಿಯಲ್ಲಿ ‘ತಿರಂಗ ಪ್ರತಿಭಟನೆ’ ನಡೆಸಲು ಮುಂದಾದಾಗ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಶಾಂತಿ ಒಪ್ಪಂದದಡಿ ಬಿಡುಗಡೆ ಮಾಡಲಾಗಿತ್ತಾದರೂ, ನಿರ್ಬಂಧಿತ ಪ್ರದೇಶವಾದ ಜಂತರ್ ಮಂತರ್‌ನಲ್ಲಿ ನಿಯಮ ಮೀರಿ ಮತ್ತೆ ಜಮಾಯಿಸಲು ಯತ್ನಿಸಿದ್ದರಿಂದ ಅಕ್ಟೋಬರ್ 14 ರಂದು ಇವರನ್ನು ಪುನಃ ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿತ್ತು.

ನ್ಯಾಯಾಂಗ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್ ನ್ಯಾಯಾಂಗ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾ ಹಿಂಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದಿನ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More