AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನು ಕರೆಯುವ ಹಸುವಿನಂತೆ ಕಂಡ: ವಿಚ್ಛೇದನ ಕೊಟ್ಟ ಹೈಕೋರ್ಟ್​

ಹೆಂಡತಿಯ ಮನವಿಯನ್ನು ಪುರಸ್ಕರಿಸದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ದೆಹಲಿ ಹೈಕೋರ್ಟ್​ ಹಿಂದೂ ವಿವಾಹ ಕಾಯ್ದೆಯಡಿ ಮದುವೆಯನ್ನು ಅನೂರ್ಜಿತಗೊಳಿಸಿ, ದಂಪತಿಗೆ ವಿಚ್ಛೇದನ ನೀಡಿದೆ.

ಹೆಂಡತಿಯನ್ನು ಕರೆಯುವ ಹಸುವಿನಂತೆ ಕಂಡ: ವಿಚ್ಛೇದನ ಕೊಟ್ಟ ಹೈಕೋರ್ಟ್​
ದೆಹಲಿ ಹೈಕೋರ್ಟ್
TV9 Web
| Edited By: |

Updated on: Nov 07, 2021 | 11:41 PM

Share

ದೆಹಲಿ: ಹೆಂಡತಿಯ ಮನವಿಯನ್ನು ಪುರಸ್ಕರಿಸದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ದೆಹಲಿ ಹೈಕೋರ್ಟ್​ ಹಿಂದೂ ವಿವಾಹ ಕಾಯ್ದೆಯಡಿ ಮದುವೆಯನ್ನು ಅನೂರ್ಜಿತಗೊಳಿಸಿ, ದಂಪತಿಗೆ ವಿಚ್ಛೇದನ ನೀಡಿದೆ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಹೆಂಡತಿಗೆ ಇರುವ ಕೆಲಸವಷ್ಟನ್ನೇ ಗಮನಿಸುತ್ತಿರುವ ಗಂಡ, ಆಕೆಯನ್ನು ಹಾಲು ಕರೆಯುವ ಹಸುವಿನಂತೆ ಮಾಡಿಕೊಂಡಿದ್ದಾನೆ ಎಂದು ನ್ಯಾಯಾಲಯ ಹೇಳಿತು ಎಂದು ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.

ಗಂಡನು ಹೆಂಡತಿಯೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಇರಿಸಿಕೊಂಡಿಲ್ಲ. ಇದು ಆಕೆಗೆ ಅದೆಷ್ಟು ಆಘಾತ, ದುಃಖ ತಂದೊಡ್ಡಿರಬಹುದು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ನೇತೃತ್ವದ ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಪತಿಗೆ ಈ ಸಂಬಂಧ ಉಳಿಸಿಕೊಳ್ಳಬೇಕು ಎನ್ನುವ ಯಾವುದೇ ಆಸಕ್ತಿಯಿಲ್ಲ. ಪತ್ನಿಯ ಆದಾಯದ ಮೇಲೆ ಮಾತ್ರ ಕಣ್ಣಿದೆ ಎಂದು ಪೀಠದಲ್ಲಿದ್ದ ಮತ್ತೋರ್ವ ನ್ಯಾಯಮೂರ್ತಿ ಜಸ್​ಮೀತ್ ಸಿಂಗ್ ಹೇಳಿದರು.

ಸ್ವತಃ ನಿರುದ್ಯೋಗಿಯಾಗಿರುವ ಪತಿಯು ಆಕೆಯ ಸಂಬಳವನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾನೆ. ಆಕೆಯು ಪ್ರೌಢಾವಸ್ಥೆಗೆ ತಲುಪಿದ ನಂತರವೂ ಆಕೆಯೊಂದಿಗೆ ವಾಸಿಸುತ್ತಿಲ್ಲ. ಪತಿಯ ಈ ಕೃತ್ಯವೇ ಆಕೆಯ ಬದುಕನ್ನು ನಕರವಾಗಿಸಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪತಿ ನಿರುದ್ಯೋಗಿ, ಮದ್ಯ ವ್ಯಸನಿ ಮತ್ತು ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಾನೆ ಎಂಬ ಕಾರಣ ತಿಳಿಸಿ ಮಹಿಳೆಯು ವಿಚ್ಛೇದನ ಕೋರಿದ್ದಳು. ಪುರುಷನಿಗೆ 19 ವರ್ಷ ಮತ್ತು ಮಹಿಳೆಗೆ 13 ವರ್ಷವಿದ್ದಾಗ ಇವರಿಬ್ಬರ ನಡುವೆ ಮದುವೆ ನಡೆದಿತ್ತು. ನವೆಂಬರ್ 2014ರವರೆಗೆ ಮಹಿಳೆಯನ್ನು ಗಂಡನ ಮನೆಗೆ ಕಳಿಸಿರಲಿಲ್ಲ. ಆಕೆಗೆ ದೆಹಲಿ ಪೊಲೀಸ್​ ಇಲಾಖೆಯಲ್ಲಿ ಕೆಲಸ ಸಿಕ್ಕ ನಂತರ ಗಂಡನ ಮನೆಗೆ ಕರೆದೊಯ್ಯಲಾಯಿತು.

ಆಕೆಯ ವಿದ್ಯಾಭ್ಯಾಸಕ್ಕೆ ನಾನು ಹಣ ಖರ್ಚು ಮಾಡಿದ್ದೇನೆ. ಹೀಗಾಗಿಯೇ ಆಕೆ ಓದಲು, ಕೆಲಸ ಪಡೆಯಲು ಸಾಧ್ಯವಾಯಿತು ಎಂದು ಗಂಡ ವಾದಿಸಿದ್ದ. 2014ರವರೆಗೆ ಮಹಿಳೆಯು ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಹೀಗಾಗಿ ಆಕೆಯ ಪೋಷಕರೇ ಅವಳನ್ನು ಓದಿಸಿರಬಹುದು. ವಿದ್ಯಾಭ್ಯಾಸ ಖರ್ಚನ್ನೂ ಅವರೇ ಭರಿಸಿದ್ದಾರೆ ಎಂದುಕೊಳ್ಳಬಹುದು. ಇದನ್ನು ವಿರೋಧಿಸುವ ಯಾವುದೇ ಸಾಕ್ಷ್ಯಾಧಾರಗಳು ಕಾಣಿಸುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದೆಹಲಿ ಪೊಲೀಸ್​ ಆಯುಕ್ತ ಸ್ಥಾನಕ್ಕೆ ರಾಕೇಶ್ ಅಸ್ತನಾ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ; ಪಿಐಎಲ್​ಗೆ ಅವಕಾಶವಿಲ್ಲವೆಂದ ದೆಹಲಿ ಹೈಕೋರ್ಟ್​ ಇದನ್ನೂ ಓದಿ: ಇದು ಉತ್ತರ ಪ್ರದೇಶದಲ್ಲಿ ನಡೆಯುತ್ತಿರಬಹುದು, ಇಲ್ಲಿ ಅಲ್ಲ: ಯುಪಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್